ಬಂಗಾಡಿ: ಬಂಗಾಡಿ ಜೈನ ಬಸದಿ ಎದುರು ಜೂ.25 ರಂದು ಅತಿಯಾದ ಮಳೆಯಿಂದಾಗಿ ಚರಂಡಿ ನಿರ್ವಹಣೆ ಇಲ್ಲದೆ ರಸ್ತೆಯಲ್ಲೇ ಮಳೆಯ ನೀರು ಹರಿದಿದೆ ಎಂದು ಸುದ್ದಿ ಉದಯ ವೆಬ್ ಸೈಟ್ ನಲ್ಲಿ ವರದಿ ಪ್ರಕಟಗೊಂಡಿತು. ಈ ಬಗ್ಗೆ ಎಚ್ಚೆತ್ತ ಬಂಗಾಡಿ ವ್ಯವಸಾಯಕ ಸಹಕಾರಿ ಸಂಘ ಹಾಗೂ ಬಂಗಾಡಿ ಜೈನ ಬಸದಿ ಹಾಗೂ ಸ್ಥಳೀಯ ಮನೆಯವರ ಸಹಕಾರದಿಂದ ಪೈಪ್ ಅಳವಡಿಸಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿದರು.

ಚರಂಡಿ ಅತೀ ಸಣ್ಣದು ಪ್ರತೀ ವರ್ಷ ಇಲ್ಲಿ ಮಳೆ ಬಂದರೆ ನೀರೆಲ್ಲಾ ಚರಂಡಿ ಇಲ್ಲದೆ ಮಾರ್ಗದಲ್ಲೇ ಹರಿಯುತ್ತದೆ. ನೀರು ತುಂಬಿ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರಿಗೆ , ಶಾಲಾ ಮಕ್ಕಳಿಗೆ ಕಷ್ಟವಾಗುತ್ತಿದೆ. ಪ್ರತೀ ವರ್ಷ ಮಳೆ ಬಂದರೆ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ವರದಿ ಪ್ರಕಟಿಸಿದ ಕೂಡಲೇ ಸ್ಪಂದಿಸಿ ದುರಸ್ತಿ ವ್ಯವಸ್ಥೆಯನ್ನು ಮಾಡಿದರು.











