September 6, 2026
Uncategorized

ರೀಲ್ಸ್‌ ತಾರೆ ಇದೀಗ ಸೀರಿಯಲ್ ಬೆಡಗಿ: ನಾರಾವಿಯ ಕೃಷ್ಣಪ್ರಿಯಾ ಭಟ್ ನಂದಗೋಕುಲದಲ್ಲಿ ರಕ್ಷಾ

ಬೆಳ್ತಂಗಡಿ: ಈಕೆ ರೀಲ್ಸ್‌ ತಾರೆ, ಮೈಕ್ ಹಿಡಿದರೆ ಗಾನ ಕೋಗಿಲೆ, ಕ್ಯಾಮಾರಕ್ಕೆ ಫೋಸ್ ನೀಡುವ ಈ ಚೆಲುವೆ ಇದೀಗ ಸೀರಿಯಲ್ ಬೆಡಗಿ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂದಗೋಕುಲ ‘ಧಾರಾವಾಹಿಯಲ್ಲಿ ನಂದನ ಕಿರಿಯ ಮಗಳಾದ ರಕ್ಷಾ ಪಾತ್ರಧಾರಿ ಕೃಷ್ಣಪ್ರಿಯಾ ಭಟ್ ಮೂಲತಃ ಬೆಳ್ತಂಗಡಿ ತಾಲೂಕಿನ ನಾರಾವಿಯವರು.

ರೀಲ್ಸ್‌ ಮಾಡಿ ಎಡವಟ್ಟು ಮಾಡಿಕೊಂಡವರನ್ನು ಎಷ್ಟೋ ಮಂದಿಯನ್ನು ನೋಡಿದ್ದೇವೆ. ಆದರೆ ರೀಲ್ಸ್‌ ಮಾಡುವುದೇ ಇತ್ತಿಚೀನ ದಿನಗಳಲ್ಲಿ ಕೆಲವರಿಗೆ ಹವ್ಯಾಸ ಹಾಗೂ ರೂಢಿಯಾಗಿದೆ. ಕೃಷ್ಣಪ್ರಿಯಾ ಭಟ್ ರೀಲ್ಸ್‌ ಮಾಡುವ ಹವ್ಯಾಸ ಹೊಂದಿದ್ದರು. ಆ ಹವ್ಯಾಸ ಇಂದು ಅವರನ್ನು ಕಿರುತೆರಗೆ ಪರಿಚಯಿಸಿದೆ. ತಾವು ಮಾಡುತ್ತಿರುವ ರೀಲ್ಸ್‌ಗಳನ್ನು ಕಂಡ ಕಲರ್ಸ್ ಕನ್ನಡ ವಾಹಿನಿಯಿಂದ ನೇರವಾಗಿ ಅವರಿಗೆ ಕರೆ ಬಂದು, ಮೊಬೈಲ್ ಮೂಲಕ ಅಡೀಷನ್ ಮಾಡಿ ಅದರಲ್ಲಿ ಆಯ್ಕೆಯಾಗಿ ನಂದಗೋಕುಲ ತಂಡಕ್ಕೆ ಹಾಗೂ ಕಿರುತೆರೆಗೆ ಪಾದರ್ಪಣೆ ಮಾಡಿದರು.

ನಂದಗೋಕುಲ ‘ಧಾರವಾಹಿ ಒಂದು ತಿಂಗಳಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸರವಾಗುತ್ತಿದ್ದು ಜನಮನಗಳಿಸುತ್ತಿದೆ. ನಂದನ ಮಗಳಾಗಿ ಕಾಣಿಸಿಕೊಂಡಿರುವ ಕೃಷ್ಣಪ್ರಿಯಾ ಭಟ್ ಪ್ರೇಕ್ಷಕರ ಪ್ರೀತಿಗಳಿಸುತ್ತಿದ್ದಾರೆ. ಈಕೆ ನಮ್ಮೂರಿನ ಹೆಮ್ಮೆಯ ಪ್ರತಿಭೆಯಾಗಿದ್ದು ಇವರ ಬಗ್ಗೆ ಸಂಪೂರ್ಣ ವಿಶೇಷ ವರದಿ ಸುದ್ದಿ ಉದಯ ವಾರಪತ್ರಿಕೆಯಲ್ಲಿ ಗುರುವಾರ ಪ್ರಕಟಗೊಳ್ಳಲಿದ್ದು ಅಲ್ಲಿಯವರೆಗೆ ನೀರಿಕ್ಷಿಸಿ…

Related posts

ಕಾರಿಂಜ ಶ್ರೀ ವನಶಾಸ್ತಾರ ಶ್ರೀ ವೀರಭದ್ರ ಸ್ವಾಮಿದೇವರ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ: ಭವ್ಯ ಮೆರವಣಿಗೆಯೊಂದಿಗೆ ಹಸಿರು ಹೊರೆಕಾಣಿಕೆ ಸಮರ್ಪಣೆ

Suddi Udaya

ಸರಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದ ಬಗ್ಗೆ ಪಾರಂಕಿ, ಕುಕ್ಕಳ ಗ್ರಾಮದ ಕಾರ್ಯಕರ್ತರ ಸಭೆ

Suddi Udaya

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ಹಾಗೂ ನೂತನ ಕಟ್ಟಡ ಉದ್ಘಾಟನೆ

Suddi Udaya

ಬೆಳ್ತಂಗಡಿ: ಸುಲ್ಕೇರಿಮೊಗ್ರುವಿನ ಯುವಕ ಅಕ್ಷಯ್ ಮಾಳಿಗೆಯವರಿಗೆ ಪೋಲೆಂಡ್ ಯುಗಲೋನಿಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ

Suddi Udaya

ಲಾಯಿಲ:ಉಮ್ಮಣ್ಣ ಗೌಡ ನಿಧನ

Suddi Udaya

ಶಿವಗಿರಿಯಾತ್ರೆಯಲ್ಲಿ ಗೆಜ್ಜೆಗಿರಿಯ ಪ್ರಮುಖರು

Suddi Udaya
error: Content is protected !!