ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳಾಲು ಶ್ರೀ ಧ.ಮಂ.ಅನುದಾನಿತ ಪ್ರೌಢ ಶಾಲೆಯಲ್ಲಿ ಶಾಲಾ ಸಂಘಗಳ ಉದ್ಘಾಟನೆ

ಬೆಳಾಲು ಶ್ರೀ ಧ.ಮಂ.ಅನುದಾನಿತ ಪ್ರೌಢ ಶಾಲೆಯಲ್ಲಿ 2025-26ರ ಶೈಕ್ಷಣಿಕ ವರ್ಷದ ಶಾಲಾ ಸಂಘಗಳ ಉದ್ಘಾಟನೆ ಜೂ.28 ರಂದು ನಡೆಯಿತು.

ಪೆರಿಂಜೆ ಶ್ರಿ ಧ.ಮಂ.ಅನುದಾನಿತ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಮುಕುಂದಚಂದ್ರ ಎಲ್.ಎನ್ ಅವರು ಉದ್ಘಾಟನೆ ನೆರವೇರಿಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, “ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಒಳ್ಳೆಯ ಅನುಭವ ಪಡೆದುಕೊಳ್ಳಬಹುದು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಮಾತನಾಡಿ “ಅವಕಾಶ ಬಳಸಿಕೊಂಡು ವಿಶೇಷ ವ್ಯಕ್ತಿತ್ವ ರೂಪಿಸಿಕೊಳ್ಳಿ” ಎಂದರು.

ಸಾಹಿತ್ಯ ಮತ್ತು ಕಲಾಸಂಘದಿಂದ ಆಯಿಷತ್ ಸಂಶಿಯ, ಹಿಂದಿ ಸಂಘದಿಂದ ತ್ರಿಷಾ ಜೈನ್, ಗಣಿತ ಸಂಘದಿಂದ ರಕ್ಷಾ ಎನ್, ವಿಜ್ಞಾನ ಸಂಘದಿಂದ ಅಂಕಿತಾ,ತುಳು ಸಂಘದಿಂದ ರಕ್ಷಾ ಕೆ, ಕ್ರೀಡಾ ಸಂಘದಿಂದ ಸಮ್ಯಕ್, ಇಂಟರ್ ರ್ಯಾಕ್ಟ ಕ್ಲಬ್ ನಿಂದ ನೇತ್ರಾವತಿ ವಾರ್ಷಿಕ ಚಟುವಟಿಕೆಗಳನ್ನು ಮಂಡಿಸಿದರು . ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಸುಮನ್ ಯು.ಎಸ್ ಸಂಘಟಿಸಿದರು.

ವಿದ್ಯಾರ್ಥಿಗಳಾದ ಅಶ್ವಿನಿ ಸ್ವಾಗತಿಸಿ ,ಮುರ್ಷಿದ ವಂದಿಸಿದರು. ಸೃಷ್ಟಿ ಕಾರ್ಯಕ್ರಮ ನಿರೂಪಿಸಿದರು.

Related posts

ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ಅಭಿನಂದನಾ ಕಾರ್ಯಕ್ರಮ

Suddi Udaya

ವಲಯ ಮಟ್ಟದ ಕಬಡ್ಡಿ ಪಂದ್ಯಾಟ: ಶ್ರೀರಾಮ ಪ್ರೌಢ ಶಾಲೆಯ ಬಾಲಕ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಕಡಿರುದ್ಯಾವರ: ಕೃಷಿ ತೋಟಕ್ಕೆ ಒಂಟಿ ಸಲಗ ದಾಳಿ

Suddi Udaya

ಉಜಿರೆ: ಎಸ್.ಡಿ.ಎಂ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದಿಂದ “ಗ್ರಂಥಾಲಯದ ಪ್ರಾಮುಖ್ಯತೆ” ವಿಶೇಷ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಆರಿಕೋಡಿಯ ಧರ್ಮದರ್ಶಿ ಹರೀಶ್ ಗೌಡರಿಂದ ರಂಗಪೂಜೆ

Suddi Udaya
error: Content is protected !!