ಅರಸಿನಮಕ್ಕಿ: ಇಲ್ಲಿಯ ಎಂಜಿರ ಸಮೀಪ ತೋಟವೊಂದರಲ್ಲಿ ಅಡಿಕೆಗೆ ಔಷಧಿ ಸಿಂಪಡನೆ ಮಾಡುವ ವೇಳೆ ದೋಂಟಿ ಹೆಚ್.ಟಿ. ಲೈನ್ ಗೆ ತಾಗಿ ಮದ್ದು ಸಿಂಪಡನೆ ಮಾಡುತಿದ್ದ ಉಡೈರೆ ಕೃಷ್ಣಪ್ಪ ಕುಲಾಲ್(49ವ) ರವರು ವಿದ್ಯುತ್ ಶಾಕ್ ಆಗಿ ಮೃತ ಪಟ್ಟಿದ್ದಾರೆ.

ಕೂಡಲೇ ಕೃಷ್ಣಪ್ಪ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇವರು ಅರಸಿನಮಕ್ಕಿ ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಮಾಜಿ ಅಧ್ಯಕ್ಷ, ಪ್ರಸ್ತುತ ಕಾರ್ಯದರ್ಶಿಯಾಗಿದ್ದರು.
ಮೃತರು ಪತ್ನಿ ಲಲಿತ, ಪುತ್ರ ಯತೀಶ್, ಪುತ್ರಿ ಶಿಲ್ಪಾರನ್ನು ಅಗಲಿದ್ದಾರೆ.











