September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ


ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಧರ್ಮಸ್ಥಳದಲ್ಲಿ ಎಲ್ಲಾ ಸಂಘಗಳ ಉದ್ಘಾಟನಾ ಸಮಾರಂಭ ನೆರವೇರಿತು.

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿನ- ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರು – ⁠ಬಿ.ವೋಕ್ ಕಾರ್ಯಕ್ರಮಗಳ ಸಂಯೋಜಕರು – ⁠ತರಬೇತಿ ಮತ್ತು ಉದ್ಯೋಗ ಕೋಶದ ಸಂಯೋಜಕ ಡಾ. ಸುವೀರ್ ಜೈನ್ ಆಗಮಿಸಿದ್ದರು.

ಶಾಲಾ ಸಂಚಾಲಕರಾದ ಅಂತ ಪದ್ಮನಾಭ ಭಟ್ ಹಾಗೂ ಡಾ.ಸುವೀರ್ ಜೈನ್ ಅವರು ಜೊತೆಗೂಡಿ ದೀಪ ಪ್ರಜ್ವಲಿಸಿ ಸಂಘಗಳ ಉದ್ಘಾಟನೆಯನ್ನು ಮಾಡಿದರು. ಬಳಿಕ ಶಾಲೆಯ ವಿವಿಧ ಸಂಘಗಳು ತಮ್ಮ ವಾರ್ಷಿಕ ಯೋಜನೆಗಳನ್ನು ನಾಟಕ, ನೃತ್ಯ, ಕಥೆ, ಕವನ, ಹಾಡು ಇತ್ಯಾದಿ ವಿವಿಧ ಕಲಾಪ್ರಕಾರದ ರೂಪದಲ್ಲಿ ಪ್ರಸ್ತುತಪಡಿಸಿದರು.

ಅತಿಥಿಯಾಗಿ ಡಾ. ಸುವೀರ್ ಜೈನ್ ಅವರು ವಿವಿಧ ಸಂಘಗಳ ಯೋಜನೆಗಳನ್ನು ನೋಡಿ ಸಂತಸ ಪಟ್ಟರು.ವಿದ್ಯೆಯ ಮಹತ್ವ,ಇಂದಿನ ದಿನಗಳಲ್ಲಿ ಶಿಕ್ಷಣ ಅಂದರೆ ಏನು? ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಸಂಘಗಳ ಮಹತ್ವ,ಅದನ್ನು ಉಪಯೋಗಿಸಿ ಕೊಳ್ಳುವ ರೀತಿ ಇತ್ಯಾದಿಗಳನ್ನು ಕಥೆ ಕಗ್ಗಗಳ ಮೂಲಕ ಮಾರ್ಮಿಕವಾಗಿ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕುಮಾರಿ ಕ್ಷಮಾ ನಿರ್ವಹಿಸಿ, ಧನ್ಯ ಶ್ರೀ ಸ್ವಾಗತಿಸಿ, ನಿವೇದ್ಯ ಧನ್ಯವಾದ ಇತ್ತರು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

Related posts

ಬೆಳ್ತಂಗಡಿ: 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್ ಲಾಯಿಲ

Suddi Udaya

ಎ.2: ಬಿಜೆಪಿ ಬೆಳ್ತಂಗಡಿ ಮಂಡಲ ಪದಾಧಿಕಾರಿಗಳ, ವಿವಿಧ ಮೋರ್ಚಾಗಳ, ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರ ಹಾಗೂ ಬೂತ್ ಸಮಿತಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಕರ್ತರ ಸಮಾವೇಶ

Suddi Udaya

ಬಹುನಿರೀಕ್ಷಿತ ರಾನಿ ಚಲನಚಿತ್ರದ ನಾಯಕ ನಟ ಗಂಭೀರ ಗಾಯ: ಕಾರ್ಯಕಾರಿ ನಿರ್ಮಾಪಕ ಕೊಕ್ರಾಡಿಯ ಗಿರೀಶ್ ಹೆಗ್ಡೆ ಅದೃಷ್ಟವಶಾತ್ ಪಾರು

Suddi Udaya

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ವಿವಿಧ ಸರಕಾರಿ ಶಾಲೆಗಳಿಗೆ ಸ್ಯಾನಿಟರಿ ಪ್ಯಾಡ್ ಗಳ ವಿತರಣೆ

Suddi Udaya

ಮಾ.29: ಬೆಳ್ತಂಗಡಿ ಲಯನ್ಸ್ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ “ಮೆಗಾ ANTI – DRUG ವಾಕಥಾನ್”

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಸ್ಪಂದನ; ಹೃದಯ ಸ್ತಂಭನ ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!