
ಮಚ್ಚಿನ: ಮಚ್ಚಿನ ಗ್ರಾಮದ ಬೆರ್ಬಲಾಜೆ ಗುಜರಿ ಅಂಗಡಿಯಲ್ಲಿ ಹಳೆಯ ಸಾಮಾಗ್ರಿಗಳು ರಾಶಿ ರಾಶಿಯಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದು ಅದರಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುವ ತಾಣವಾಗಿದೆ.


ಈ ಬಗ್ಗೆ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಜನರ ದೂರು ಕೇಳಿ ಬರುತ್ತಿದ್ದು ಡೆಂಗ್ಯೂ ಮಲೇರಿಯಾ ಇನ್ನಿತರ ರೋಗಗಳು ಹರಡುವ ಮುನ್ನ ಆರೋಗ್ಯ ಇಲಾಖೆ ಹಾಗೂ ಗ್ರಾ.ಪಂ, ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಬೇಡಿಕೆಯಾಗಿದೆ.











