September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜು.10 ರಿಂದ ಆ.20ರವರೆಗೆ ಕುಮಟಾದಲ್ಲಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಬ್ರಹ್ಮಾನಂದ ಸರಸ್ವತಿ ಜೀ ಮಹಾರಾಜ ಅವರ ಚಾತುರ್ಮಾಸ್ಯ ವ್ರತಾಚರಣೆ

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಬ್ರಹ್ಮಾನಂದ ಸರಸ್ವತಿ ಜೀ ಮಹಾರಾಜ ಅವರು ಲೋಕಕಲ್ಯಾಣಾರ್ಥವಾಗಿ ಚಾತುರ್ಮಾಸ್ಯ ವ್ರತಾಚರಣೆಯು ಗುರು ಪೌರ್ಣಿಮೆಯ ಜು. 10ರಿಂದ ಆ. 20ರವರೆಗೆ ಉತ್ತರ ಕನ್ನಡ ಜಿಲ್ಲೆ ಕುಮಟಾ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಆಚರಿಸಲಾಗುವುದು ಎಂದು ಸ್ವಾಮೀಜಿಯವರು ಹೇಳಿದರು.

ಅವರು ಜು.3ರಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಚಾತುರ್ಮಾಸ್ಯದ ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿಪ್ರಧಾನ ಕಾರ್ಯಕ್ರಮಗಳೊಂದಿಗೆ ಯಕ್ಷಗಾನ, ಭರತನಾಟ್ಯ, ಭಜನೆ, ಗೀತಾ ರೂಪಕ, ಕುಂಚ ಗೀತಾ ರಾಮ ಕಥಾ ಸುಗಮ ಸಂಗೀತ, ಭಕ್ತಿ ಪ್ರಧಾನ ಹತ್ತು ಹಲವು ಸಾಂಸ್ಕೃಕ ಕಾರ್ಯಕ್ರಮಗಳು ನಡೆಯಲಿದೆ.ಧರ್ಮ ಜಾಗೃತಿಗಾಗಿ ಜಿಲ್ಲೆ, ಜಿಲ್ಲೆಗಳಿಗೆ ಚಾತುರ್ಮಾಸ್ಯ ಪಸರಿಸಿದ್ದು ಮುಂದಿನ ದಿನಗಳಲ್ಲಿ ಅಯೋಧ್ಯೆ, ಹರಿದ್ವಾರ ಮುಂತಾದ ಕಡೆಗಳಲ್ಲಿ ನಡೆಸಲು ಭಕ್ತರು ತಯಾರಿ ನಡೆಸುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದೇವರಗುಡ್ಡೆ ದೇವಲಿಂಗೇಶ್ವರ ಭಕ್ತ ಮಂಡಳಿಯ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಸಂಚಾಲಕ ನವೀನ್ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಸುನಿಲ್ ಕನ್ಯಾಡಿ, ಉಪಾಧ್ಯಕ್ಷ ರವೀಂದ್ರ ಪೂಜಾರಿ ಆರ್ಲ ಉಪಸ್ಥಿತರಿದ್ದರು.

Related posts

ಕುಕ್ಕೇಡಿ ಡಾ. ಬಿ. ಆರ್ ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿ ಗೆ ಹೆಚ್ಚುವರಿ ರೂ.50 ಲಕ್ಷ ಅನುದಾನ ಮಂಜೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

Suddi Udaya

ಬಂದಾರುನಲ್ಲಿ ಗುಡ್ಡ ಕುಸಿತ : ಮನೆಗೆ ಹಾನಿ

Suddi Udaya

ವೇಣೂರಿನ ನವಚೇತನ ಶಾಲೆಯಲ್ಲಿ ತಾಲೂಕು ಮಟ್ಟದ ಕರಾಟೆ ಪಂದ್ಯಾಟ: ಶರ್ವಿನ್ ಮೋನಿಸ್, ಸಾನ್ವಿ ಎಂ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘದ ದಕ್ಷಿಣ ಮಧ್ಯವಲಯ ಉಪಾಧ್ಯಕ್ಷರಾಗಿ ಧರ್ಮಸ್ಥಳದ ಎ. ಎಸ್. ಲೋಕೇಶ್ ಶೆಟ್ಟಿ ಆಯ್ಕೆ

Suddi Udaya

ಉಜಿರೆ ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯ ಇದರ ವತಿಯಿಂದ ಪೌರತ್ವ ತರಬೇತಿ ಶಿಬಿರ ಸಮಾರೋಪ ಸಮಾರಂಭ

Suddi Udaya

ತೆಕ್ಕಾರು ಬ್ರಹ್ಮಕಲಶೋತ್ಸವದಲ್ಲಿ ಶಾಸಕ ಹರೀಶ್ ಪೂಂಜರವರು ಮುಸ್ಲಿಂರನ್ನು ನಿಂದಿಸಿರುವುದು ಸಮುದಾಯಕ್ಕೆ ನೋವು ತಂದಿದೆ: ಮುಸ್ಲಿಂ ಮುಖಂಡರಿಂದ ಪತ್ರಿಕಾಗೋಷ್ಠಿ

Suddi Udaya
error: Content is protected !!