September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿ

ಧರ್ಮಸ್ಥಳ: ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿದ ವ್ಯಕ್ತಿ : ಎಸ್ಪಿ ಕಚೇರಿಗೆ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ ವ್ಯಕ್ತಿ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ವಕೀಲರು ಮೂಲಕ ಹೇಳಿಕೆ ನೀಡುತ್ತಿದ್ದ ಪಾಪ ಪ್ರಜ್ಞೆ ಕಾಡಿದ ವ್ಯಕ್ತಿ ಜು.3 ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ಬಂದು ದೂರು ನೀಡಿರುವುದಾಗಿ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್ ದೇಶಪಾಂಡೆ ಪತ್ರ ವೈರಲ್ ಮಾಡಿದ್ದಾರೆ.

ಈ ಪ್ರಕರಣದ ಬಗ್ಗೆ ಎಸ್ಪಿ ಕಚೇರಿಗೆ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿದ್ದು ವಿಚಾರಣೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.ವಕೀಲರು ಹೊರಡಿಸಿರುವ ಪತ್ರದಲ್ಲಿ ಪಾಪ ಪ್ರಜ್ಞೆ ಕಾಡಿದ ವ್ಯಕ್ತಿ ಹಲವಾರು ಕೊಲೆ, ಅತ್ಯಾಚಾರ ಮಾಡಿದ ಮೃತದೇಹಗಳನ್ನು ಹೂತು ಹಾಕಿದ್ದು ಅದನ್ನು ಪೊಲೀಸರು ಪ್ರಕರಣ ದಾಖಲಿಸಿ ಆತನಿಗೆ ಭದ್ರತೆ ನೀಡಿಬೇಕು ಬಳಿಕ ಎಲ್ಲಾ ಹೂತು ಹಾಕಿದ ಮೃತದೇಹ ಪೊಲೀಸರಿಗೆ ಗೌಪ್ಯವಾಗಿ ತೊರಿಸಿಕೊಡುತ್ತೇನೆ.ಅದಲ್ಲದೆ ಇತ್ತಿಚೆಗೆ ಗೌಪ್ಯವಾಗಿ ಬಂದು ಹೂತು ಹಾಕಿದ ಮೃತದೇಹದ ಕಳೇಬರ ಹೊರತೆಗೆದಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ.

ದೂರಿನ ಜೊತೆ ಕೆಲಸ ಮಾಡಿದ ಸಂಸ್ಥೆಯ ಐಡಿ ಕಾರ್ಡ್ ,ಆಧಾರ್ ಕಾರ್ಡ್ , ಹೊರತೆಗೆದ ಕಳೇಬರದ ಫೋಟೋ ಜೊತೆಯಲ್ಲಿ ಲಗತ್ತು ಮಾಡಿರುವುದಾಗಿ 6 ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಹಾಗೂ ವಿವಿಧ ಸಂಘಗಳ ಆಶ್ರಯದಲ್ಲಿ ಉಚಿತ ದಂತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

Suddi Udaya

ಹಿಂದೂ ರಾಷ್ಟ್ರದ ಉದ್ಘಾರದೊಂದಿಗೆ ಬಂಟ್ವಾಳದ ಸ್ಪರ್ಶಾ ಕಲಾಮಂದಿರದಲ್ಲಿ ಪ್ರಾರಂಭವಾದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ

Suddi Udaya

ಜ.7: ತಣ್ಣೀರುಪಂತ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಕೊಯ್ಯೂರು ಸರಕಾರಿ ಶಾಲೆಯಲ್ಲಿ ಯಕ್ಷ ನಾಟ್ಯ ತರಬೇತಿ ಉದ್ಘಾಟನೆ

Suddi Udaya

ಮೇಲಂತಬೆಟ್ಟು ಗ್ರಾ. ಪಂ. ನಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಗೌರವಾರ್ಪಣೆ

Suddi Udaya

ಕಡಿರುದ್ಯಾವರ ಗ್ರಾ.ಪಂ. ಗ್ರಾಮ ಸಭೆ

Suddi Udaya
error: Content is protected !!