September 6, 2026
ಅಪರಾಧ ಸುದ್ದಿ

ಅಕ್ರಮ ಗೋಮಾಂಸ ಮಾರಾಟ ಮಾಡಲು ಅಂಗಡಿಯಲ್ಲಿ ದಾಸ್ತಾನು ಬೆಳ್ತಂಗಡಿ ಪೊಲೀಸರ ದಾಳಿ: ಇಬ್ಬರು ಆರೋಪಿಗಳ ಬಂಧನ

ಮಿತ್ತಬಾಗಿಲು ಗ್ರಾಮದ ಕಾಜೂರು ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಜಾನುವಾರಿನ ಮಾಂಸವನ್ನು, ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಶೇಖರಿಸಿಟ್ಟಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಬಂಧಿಸಿದ ಘಟನೆ ಜು. 2ರಂದು ನಡೆದಿದೆ.

ಘಟನೆ ವಿವರ: ಮಿತ್ತಬಾಗಿಲು ಗ್ರಾಮದ ಕಾಜೂರು ಎಂಬಲ್ಲಿಆರೋಪಿತನಾದ ಮಲವಂತಿಗೆ ನಿವಾಸಿ ಅಬ್ದುಲ್ ರಜಾಕ್ (28ವ), ಎಂಬಾತನು ತನ್ನ ಅಂಗಡಿಯಲ್ಲಿ, ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಜಾನುವಾರಿನ ಮಾಂಸವನ್ನು, ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಶೇಖರಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ, ಯಲ್ಲಪ್ಪ ಹೆಚ್ ಮಾದರ, ಪೊಲೀಸು ಉಪ-ನಿರೀಕ್ಷಕರು ಬೆಳ್ತಂಗಡಿ ಪೊಲೀಸ್‌ ಠಾಣೆ ಹಾಗೂ ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲಿಸಿದಾಗ, ಒಟ್ಟು 47 ಕೆಜಿ ದನ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಪ್ರಿಡ್ಜ್ ನೊಳಗೆ ಇರಿಸಿರುವುದು ಕಂಡುಬಂದಿದೆ.

ಸೊತ್ತುಗಳನ್ನು ಸ್ವಾಧೀನಪಡಿಸಿ, ಆರೋಪಿತರಾದ ಅಬ್ದುಲ್ ರಜಾಕ್ ಹಾಗೂ ಅಂಗಡಿಯಲ್ಲಿದ್ದ ಮತ್ತೋರ್ವ ಆರೋಪಿ ಅಬ್ದುಲ್ ರವೂಪ್ (20ವ) ಎಂಬವರನ್ನು ಬಂಧಿಸಿ ಅವರ ವಿರುದ್ಧ ಜು.2 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 51/2025, ಕಲಂ: 4, 12 ಕರ್ನಾಟಕ ಗೋವಧೆ ಪ್ರತಿಬಂದಕ ಮತ್ತು ಜಾನುವಾರು ಸಂರಕ್ಷಣಾ ಅದಿನಿಯಮ 2020 ರಂತೆ ಕೇಸು ದಾಖಲಿಸಲಾಗಿದೆ.

Related posts

ತಲೆ ಮರೆಸಿಕೊಂಡಿದ್ದ ಆರೋಪಿ ನೆಲ್ಯಾಡಿ ಯಲ್ಲಿ ಬಂಧನ

Suddi Udaya

ತೆಕ್ಕಾರು : ಪತ್ನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ಪತಿ

Suddi Udaya

ಉಜಿರೆಯಲ್ಲಿ ಖಾಸಗಿ ಸುದ್ದಿವಾಹಿನಿ ವರದಿಗಾರ ಮೇಲೆ ಹಲ್ಲೆ ಪ್ರಕರಣ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಸೇರಿ ಹಲವು ಮಂದಿಯ ಮೇಲೆ ಪ್ರಕರಣ ದಾಖಲು

Suddi Udaya

ನಡ: ರಸ್ತೆಯ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಹೊಡೆದಾಟ: ಹಲವರು ಗಾಯ

Suddi Udaya

ಆಕಸ್ಮಿಕವಾಗಿ ನದಿಗೆ ಬಿದ್ದು ಬಾಲಕ ಸಾವು

Suddi Udaya

ಇಂದಬೆಟ್ಟು: ಅತಿಕ್ರಮಣ ತೆರವುಗೊಳಿಸಲು ತಹಶೀಲ್ದಾರ್ ಮಾಡಿದ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಹೈಕೋರ್ಟು

Suddi Udaya
error: Content is protected !!