ಕೊಕ್ರಾಡಿ: ಅತೀವ ಮಳೆಯಿಂದ ಕೊಕ್ರಾಡಿ ಅತ್ರಿಜಾಲ್ ನಿಂದ ಕುತ್ಲೂರು ಸಂಪರ್ಕಿಸುವ ರಸ್ತೆಯ ಸೇತುವೆ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಸಾರ್ವಜನಿಕರು ಓಡಾಟ ನಡೆಸಲು ಕಷ್ಟವಾಗಿದೆ.

ಸೇತುವೆ ನಿರ್ಮಾಣದ ವಿಚಾರಕ್ಕೆ ಸರಕಾರಕ್ಕೆ ಅನೇಕ ಭಾರಿ ಮನವಿ ಸಲ್ಲಿಸಿದರು ಇನ್ನೂ ಭೇಡಿಕೆ ಈಡೇರಿಲ್ಲ.ಇದರಿಂದ ಸಾರ್ವಜನಿಕರಿಗೆ,ಉದ್ಯೋಗಸ್ಥರಿಗೆ,ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ತುಂಬಾ ಸಮಸ್ಯೆಯಾಗಿದೆ.

ಇದೀಗ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ,ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ಹೆಗ್ಡೆ ನೇತೃತ್ವದಲ್ಲಿ ಹಾಗೂ ಭಾರತೀಯ ಜನತಾ ಪಾರ್ಟಿಯ ಗ್ರಾಮ ಸಮಿತಿ ಹಾಗೂ ಊರಿನವರ ಸಹಕಾರದಿಂದ ಕೊಕ್ರಾಡಿ ಅತ್ರಿಜಾಲ್ ನಿಂದ ಕುತ್ಲೂರು ಸಂಪರ್ಕಿಸುವ ರಸ್ತೆಯ ಸೇತುವೆಗೆ ಅಡಿಕೆ ಮರದ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿಕೇಂದ್ರದ ಅದ್ಯಕ್ಷ ಜಗದೀಶ್ ಹೆಗ್ಡೆ, ಕೊಕ್ರಾಡಿ ಬೂತ್ ಸಮಿತಿ ಅಧ್ಯಕ್ಷ ನೀಲಕಂಠ ಪ್ರಸಾದ್,ಕಾರ್ಯದರ್ಶಿ ಲೋಹಿತ್,ಶಾರದಾಂಭ ಯುವಕ ಮಂಡಲದ ಸದಸ್ಯರು,ಸ್ಥಳಿಯರಾದ ಚಂದ್ರಶೇಖರ ಶೆಟ್ಟಿಗಾರ್ ,ಕರುಣಾಕರ,ಸುಜಿತ್,ಸಂಜೀವ, ಹರೀಶ್,ಬೋಜ ಶೆಟ್ಟಿ ಹಾಗೂ ಇತರರು ಇದ್ದರು. ಈ ಸಂದರ್ಭ ನಾರಾವಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾಲತಾ ಭೇಟಿ ನೀಡಿದರು.











