24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿ

ಶಾಂತಿಶ್ರೀ ‘ ಜೈನ ಮಹಿಳಾ ಸಮಾಜದ ವತಿಯಿಂದ, ‘ ಶೈಕ್ಷಣಿಕ ಕಾರ್ಯಕ್ರಮ ‘

ಬೆಳ್ತಂಗಡಿ : ಶಾಂತಿಶ್ರೀ ‘ ಜೈನ ಮಹಿಳಾ ಸಮಾಜದ ವತಿಯಿಂದ, ‘ ಶೈಕ್ಷಣಿಕ ಕಾರ್ಯಕ್ರಮ ‘ ವನ್ನು ಬೆಳ್ತಂಗಡಿ ಶ್ರೀ. ಧ. ಮಂ. ಕಲಾ ಭವನದಲ್ಲಿ ಜೂ. 29 ರಂದು ನಡೆಯಿತು.ಮುಖ್ಯ ಅತಿಥಿಗಳಾಗಿ ಶ್ರೀ. ಧ. ಮಂ. ಕಾಲೇಜು, ಉಜಿರೆ, ಇಲ್ಲಿಯ ಉಪನ್ಯಾಸಕರು, ಜೈನ್ ಮಿಲನ್, ಬೆಳ್ತಂಗಡಿ ಇದರ ಅಧ್ಯಕ್ಷರೂ ಆಗಿರುವ ಡಾ| ನವೀನ್ ಕುಮಾರ್ ಜೈನ್ ರವರು ಭಾಗವಹಿಸಿ, ವಿಧ್ಯಾರ್ಥಿಗಳ ವಿದ್ಯಾರ್ಜನೆಗೆ ಪೂರಕವಾದಂತಹ ಸ್ಪೂರ್ತಿದಾಯಕ ಮಾತುಗಳನ್ನು ಹೇಳುತ್ತಾ, ಯಶಸ್ಸನ್ನು ಬಯಸುವುದಾದರೆ ಕಠಿಣ ಪರಿಶ್ರಮ ಅಗತ್ಯ ಎಂದು ಸಲಹೆ ನೀಡಿದರು. ಶೈಕ್ಷಣಿಕ ಕಾರ್ಯಕ್ರಮದಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವ, ‘ ಶಾಂತಿಶ್ರೀ ‘ ಜೈನ ಮಹಿಳಾ ಸಮಾಜದವರ ಈ ಹಿಂದಿನ ಎಲ್ಲಾ ಕಾರ್ಯ ಚಟುವಟಿಕೆಗಳು, ಯಶಸ್ವಿ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀಮತಿ ಪ್ರೊ| ತ್ರಿಶಲಾ ಜೈನ್ ಕೆ ಎಸ್ ರವರು, ವಿಧ್ಯಾರ್ಥಿ ಜೀವನದಂತಹ ಸುವರ್ಣಾವಕಾಶಗಳು ಮತ್ತೊಮ್ಮೆ ಸಿಗುವುದಿಲ್ಲ. ಸಾಧನೆಯೊಂದಿದ್ದರೆ ಗುರಿ ತಲುಪಲು ಸಾಧ್ಯ ಎಂದು ಹೇಳುತ್ತಾ, ಸಮಾಜದ ಎಲ್ಲಾ ಸದಸ್ಯೆಯರ ಸಹಕಾರವನ್ನು ಅಭಿನಂದಿಸಿದರು.


ನಮ್ಮ ಸಮಾಜದ ಸದಸ್ಯೆಯರ 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣರಾದ ಎಂಟು ಮಂದಿ ಮಕ್ಕಳಿಗೆ ವಿಧ್ಯಾರ್ಥಿ ಪ್ರೋತ್ಸಾಹ ಧನವನ್ನು ಸಂಘದ ದಾನಿಗಳ ಸಹಕಾರದಿಂದ ವಿತರಿಸಲಾಯಿತು. ಕಾರ್ಯದರ್ಶಿಯವರಾದ ಶ್ರೀಮತಿ ರಾಜಶ್ರೀ ಎಸ್ ಹೆಗ್ಡೆ ಯವರು ಸ್ವಾಗತದೊಂದಿಗೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಶರ್ಮತಿ ಮತ್ತು ಬಳಗದವರು ಪಾರ್ಥನೆ ಹಾಡಿದರು, ಕೋಶಾಧಿಕಾರಿ ಶ್ರೀಮತಿ ಅನುಪ ಕುಮಾರಿ ಯವರು ಕಾರ್ಯಕ್ರಮ ಸಂಘಟಿಸಿದರು. ಶ್ರೀಮತಿ ತ್ರಿಶಲಾ ಅಥಿಕಾರಿ ಮತ್ತು ಶ್ರೀಮತಿ ದವಳ ರವರು ಕಾರ್ಯಕ್ರಮ ನಿರ್ವಹಿಸಿ, ಶ್ರೀಮತಿ ಉಷಾ ರವರು ಧನ್ಯವಾದ ನೀಡಿದರು.

Related posts

ನಾವರ ದೇವಸ್ಥಾನದ ಬಳಿ ರಬ್ಬರ್ ತೋಟಕ್ಕೆ ಬೆಂಕಿ

Suddi Udaya

ಬೆಳ್ತಂಗಡಿ: ಸಂಜಯನಗರ ನಿವಾಸಿ ಸುರೇಂದ್ರ ಪೈ ನಿಧನ

Suddi Udaya

ತೆಕ್ಕಾರು: ಬಾಜಾರು ಓಂ ರಾಮ್ ಫ್ರೆಂಡ್ಸ್ ಆಶ್ರಯದಲ್ಲಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಬೈಪಾಡಿ ಕಾರ್ಯಕ್ಷೇತ್ರದ ‘ಶ್ರೀರಾಮ’ ನೂತನ ಸಂಘದ ಉದ್ಘಾಟನೆ

Suddi Udaya

ಬೆಳ್ತಂಗಡಿ: ಪಿ. ಎಂ. ಶ್ರೀ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಪಕ್ವಾಡದ ಜಾಗೃತಿ ಜಾಥಾ ಮತ್ತು ಮಾಹಿತಿ ಕಾರ್ಯಾಗಾರ

Suddi Udaya

ಬಿಜೆಪಿಯಿಂದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ 6 ವರ್ಷಗಳ ಕಾಲ ಉಚ್ಚಾಟನೆ

Suddi Udaya
error: Content is protected !!