September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಗ್ರಾಮ ಪಂಚಾಯತ್ ಗ್ರಾಮ ಸಭೆ

ಉಜಿರೆ: ಉಜಿರೆ ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಮೊದಲನೇ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ರವರ ಅಧ್ಯಕ್ಷತೆಯಲ್ಲಿ ಜು.8 ರಂದು ಉಜಿರೆ ಶಾರದಾ ಮಂಟಪದಲ್ಲಿ ಜರುಗಿತು.

ನೆರಿಯ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಡಾ. ಯತೀಶ್ ಕುಮಾರ್ ಎಂ.ಎನ್ ಮಾರ್ಗದರ್ಶಕ ಅಧಿಕಾರಿಯಾಗಿ ಭಾಗವಹಿಸಿ ಗ್ರಾಮ ಸಭೆಯನ್ನು ಮುನ್ನಡೆಸಿದರು.

ಹೈದರಾಬಾದ್ ತೆಲಂಗಾಣದಲ್ಲಿ ನಡೆದ 34ನೇ ಜೂನಿಯ‌ರ್ ರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಹಾಗೂ ಬೋಪಾಲ್ ಮಧ್ಯಪ್ರದೇಶದಲ್ಲಿ ನಡೆದ 46ನೇ ಸೀನಿಯರ್ ರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್‌ಶಿಪ್-2025 ರಲ್ಲಿ ಪಾಲ್ಗೊಂಡು, ಮೇ 2 ಮತ್ತು 3 ರಂದು ಇಂಡೋನೇಷ್ಯಾದ ಬಾಟಮ್‌ನಲ್ಲಿ ನಡೆದ ಏಷ್ಯನ್ ತ್ರೋಬಾಲ್ ಚಾಂಪಿಯನ್ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಉಜಿರೆಯ ಉದಿತ್ ರೈ ರವರನ್ನು ಗೌರವಿಸಲಾಯಿತು.

ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಎಸ್. ಸಚಿನ್, ಸಂಧ್ಯಾ ಎ., ದೇವಕಿ, ಲಲಿತ ಪಿ., ಮೋಹಿನಿ, ಜಯರಾಮ ಗೌಡ, ಪ್ರಮೀಳಾ, ಕಮಲ, ನಾಗವೇಣಿ, ಅನಿಲ್ ಪ್ರಕಾಶ್ ಡಿಸೋಜ, ಜಾನೆಟ್ ಪಿಂಟೋ, ಪುಷ್ಪಾವತಿ ಆರ್. ಶೆಟ್ಟಿ, ನಾಗೇಶ್ ರಾವ್, ಲಲಿತಾ, ಸವಿತಾ, ಗುರುಪ್ರಸಾದ್ ಕೋಟ್ಯಾನ್, ಮಂಜುನಾಥ್, ಎಂ ಇಲ್ಯಾಸ್, ಶೀನ ನಾಯ್ಕ, ಅನಿಲ್ ಡಿಸೋಜ, ಶಶಿಕಲಾ, ಪ್ರೇಮಲತಾ ಜಗನ್ನಾಥ ರೈ, ದಿನೇಶ, ಯು ಮಹಮ್ಮದ್ ಶರೀಫ್, ಶೋಭಾ, ಕೆ. ಬಾಲಕೃಷ್ಣ ಗೌಡ, ಲಕ್ಷ್ಮೀ, ಮಂಜುಳಾ, ಚೇತನಾ, ಆಶಾ/ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ಪಂ. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ. ಹೆಚ್. ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರವಣ್ ಕುಮಾರ್ ನಿರೂಪಿಸಿದರು. ವಾರ್ಡ್ ಸಭೆಯ ಬೇಡಿಕೆಯನ್ನು ಸಿಬ್ಬಂದಿಗಳಾದ ರಮೇಶ್ ಹಾಗೂ ನಿವೇಶನ ರಹಿತ ವಿವರವನ್ನು ಉಮೇಶ್ ಗೌಡ ವಾಚಿಸಿದರು. ಉಪಾಧ್ಯಕ್ಷ ರವಿಕುಮಾರ್ ಬರಮೇಲು ವಂದಿಸಿದರು.

Related posts

ಪಯಾ೯ಯ ಪೀಠಾರೋಹಣ ಗೈಯ್ಯಲಿರುವ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ 2 ರ ಫಲಿತಾಂಶ : ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ 596 ಅಂಕಗಳೊಂದಿಗೆ ರಾಜ್ಯಕ್ಕೆ 4 ನೇ ಸ್ಥಾನ, ತಾಲೂಕಿಗೆ ಪ್ರಥಮ

Suddi Udaya

ಬೆಳ್ತಂಗಡಿ 45ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವಕ್ಕೆ ಚಾಲನೆ

Suddi Udaya

ಕಳಿಯ: ಬೊಳ್ಳುಕಲ್ಲು ಶ್ರೀ ದುರ್ಗಾ ಭಜನಾ ಮಂಡಳಿ 6ನೇ ವಷ೯ದ ವಾರ್ಷಿಕೋತ್ಸವ

Suddi Udaya

ಆರಂಬೋಡಿ ಸ್ಫೂರ್ತಿ ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಧರ್ಮಸ್ಥಳ: ಉಚಿತ ಸಾಮೂಹಿಕ ವಿವಾಹದ ನೋಂದಣಿ ಕಛೇರಿ ಉದ್ಘಾಟನೆ

Suddi Udaya
error: Content is protected !!