22.9 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಗುರುಪೂರ್ಣಿಮಾ ಆಚರಣೆ

ಉಜಿರೆ: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಕೊಟ್ಟ ಮಹತ್ತ್ವದಷ್ಟು ಬೇರೆ ಯಾವ ಸಂಸ್ಕೃತಿಯು ಕೊಡಲಿಲ್ಲ. ವೇದಗಳು , ರಾಮಾಯಣ , ಮಹಾಭಾರತ ಇತ್ಯಾದಿ ಗ್ರಂಥಗಳು ಮೂಡಿಬರಲು ಕಾರಣ ಭಾರತೀಯರು ಗುರುವಿಗೆ ಕೊಟ್ಟ ಸ್ಥಾನದಿಂದ. ಎಲ್ಲರ ಜೀವನದಲ್ಲೂ ಗುರುವಿನ, ಶಿಕ್ಷಕನ ಪಾತ್ರ ಮಹತ್ವದ್ದಾಗಿರುತ್ತದೆ. ಎಲ್ಲದಕ್ಕಿಂತಲೂ ಎಲ್ಲರಿಗೂ ಅರಿವೇ ಒಂದು ದೊಡ್ಡ ಗುರು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್. ಬಿ. ಇವರು ಹೇಳಿದರು.

ಇವರು ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಆಯೋಜಿಸಿದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗುರುಪೂರ್ಣಿಮಾ ವಿಷಯವಾಗಿ ರಚಿಸಿದ ಭಿತ್ತಿಪತ್ರಿಕೆಯನ್ನು ಅನಾವರಣ ಮಾಡಿದರು.

ಸಂಸ್ಕೃತ ಸಂಘದ ಅಧ್ಯಕ್ಷೆ ಹಂಸಿನಿ ಭಿಡೆ ಹಾಗೂ ಅಂತರಾಧ್ಯಯನ ವೃತ್ತಮ್ ಇದರ ಪ್ರಧಾನ ಸಂಯೋಜಕಿ ಅಂಜನಾ ಇವರ ನೇತೃತ್ವದಲ್ಲಿ ಸಂಸ್ಕೃತ ಭಾಷಾ ವಿದ್ಯಾರ್ಥಿಗಳು ಎಲ್ಲ ಉಪನ್ಯಾಸಕರಿಗೆ ಶುಭಾಶಯ ಪತ್ರ ನೀಡಿದರು.

ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಸ್ವಾಗತಿಸಿ , ನಿರೂಪಿಸಿದರು. ಹಂಸಿನಿ ಭಿಡೆ ವಂದಿಸಿದರು.

Related posts

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಬಿಜೆಪಿ ಸಂಸ್ಥಾಪನಾ ದಿನಾಚರಣೆ

Suddi Udaya

ಬೆಳ್ತಂಗಡಿ ಟೀಂ ಅಭಯಹಸ್ತ ಆಯೋಜನಾ ಸಮಿತಿಯಿಂದ ಸುಲ್ಕೇರಿಮೊಗ್ರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿಗಳ ವಿತರಣೆ

Suddi Udaya

ಉಜಿರೆ ವಲಯದ ಮಾಚಾರು ಪ್ರಗತಿ-ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಕರಿಮಣಿ ಸರ ಸಹಿತ ಅಗತ್ಯ ವಸ್ತುಗಳು ಕಳೆದು ಹೋಗಿದೆ: ಸಿಕ್ಕಿದವರು ಸಂಪರ್ಕಿಸುವಂತೆ ಮನವಿ

Suddi Udaya

ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯ: ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ತುಂಬಿಕೊಂಡಿದ್ದ ತ್ಯಾಜ್ಯಗಳ ವಿಲೇವಾರಿ

Suddi Udaya

ಪಾರೆಂಕಿ ಮಾರಿಕಾಂಬ ದೇವಿ ಸನ್ನಿಧಿಯಲ್ಲಿ ಜಾತ್ರೋತ್ಸವ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ

Suddi Udaya
error: Content is protected !!