22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್ ಡಿ ಎಂ ಶಿಕ್ಷಣ ಸಂಸ್ಥೆಯಿಂದ ರೂ. 2.50 ಕೋಟಿ ವಿದ್ಯಾರ್ಥಿವೇತನ ವಿತರಣೆ

ಉಜಿರೆ:  ಗ್ರಾಮೀಣ ಪ್ರದೇಶದಿಂದ ಬಂದ ಬಡ ,ಪ್ರತಿಭಾವಂತ ವಿದ್ಯಾರ್ಥಿಗಳು  ಉನ್ನತ ಶಿಕ್ಷಣದಿಂದ ವಂಚಿತರಾಗದೆ  ಆಸಕ್ತಿಯ  ವಿಚಾರಗಳಲ್ಲಿ  ಸಂಶೋಧನೆ ನಡೆಸಲು   ಆರ್ಥಿಕ ಹಿನ್ನಡೆಯಲ್ಲಿರುವವರಿಗೆ  ಶಿಕ್ಷಣ  ಸಂಸ್ಥೆ  ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಿದೆ.  ಇತರ ಶಿಕ್ಷಣ ಸಂಸ್ಥೆಗಳ ಬಡ,ಪ್ರತಿಭಾವಂತ ವಿದ್ಯಾರ್ಥಿಗಳಿಗೂ  ವಿದ್ಯಾರ್ಥಿವೇತನ ನೀಡಲಾಗುತ್ತಿದೆ.  ವಿದ್ಯಾರ್ಥಿಗಳು ಹಣವನ್ನು ಜಾಗೃತೆ ವಹಿಸಿ, ದುರ್ವ್ಯಯ ಮಾಡದೆ ,ವಿನಿಯೋಗಿಸಿ ಕಷ್ಟ ಪಟ್ಟು ಓದಿ ,ಉತ್ತಮ ಅಂಕ  ಪಡೆದು ,ಕೀರ್ತಿ ಗಳಿಸುವುದರೊಂದಿಗೆ ಸಮಾಜದಲ್ಲಿ ಪ್ರಕಾಶಿಸುವಂತಹ ವ್ಯಕ್ತಿಗಳಾಗಿ ಬೆಳೆಯಿರಿ  ಎಂದು  ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇನ್ದ್ರಕುಮಾರ್ ಹೇಳಿದರು.

ಅವರು ಜು. 10 ರಂದು ಉಜಿರೆ ಎಸ್ ಡಿ ಎಂ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ 2000 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ  ರೂ 2.50  ಕೋಟಿ ಮೊತ್ತದ ವಿದ್ಯಾರ್ಥಿವೇತನವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು. ಕುಗ್ರಾಮವಾಗಿದ್ದ  ಉಜಿರೆಯ ಎಸ್ ಡಿ ಎಂ ಕಾಲೇಜು  ಉತ್ತಮ ಗುಣಮಟ್ಟದ ಶಿಕ್ಷಣದಿಂದ ರಾಷ್ಟ್ರ ಮಟ್ಟದಲ್ಲಿ 67 ನೇ ರಾಂಕ್  ಪಡೆಡಿದ್ದು, ಉಪನ್ಯಾಸಕ ವೃಂದದ ಪರಿಶ್ರಮ ಹಾಗೂ ವಿದ್ಯಾರ್ಥಿಗಳ  ಶ್ರಮ ಕಾರಣವಾಗಿ  ಎಸ್ ಡಿ ಎಂ ಉಜಿರೆಯ  ಲ್ಯಾಂಡ್  ಮಾರ್ಕ್  ಆಗಿ  ಗುರುತಿಸಲ್ಪಟ್ಟಿದೆ. 56  ಶಿಕ್ಷಣ ಸಂಸ್ಥೆಗಳನ್ನು ಹೊಂದಿದ  ಎಸ್ ಡಿ ಎಂ  ಶಿಕ್ಷಣ ಸಂಸ್ಥೆಯ  ಜತೆಗೆ  ಜು 14 ರಂದು ಕಾಂಚನದಲ್ಲಿ ರೂ 1.70ಕೋಟಿ  ವೆಚ್ಚದಲ್ಲಿ ಪ್ರಾಥಮಿಕ ಕನ್ನಡ ಶಾಲೆಯನ್ನು ಪ್ರಾರಂಭಿಸಲಾಗುತ್ತಿದ್ದು , ಸರಕಾರದ ದ್ವಿಭಾಷಾ ನೀತಿಯಂತೆ  ಎಲ್ಲ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ   ಭಾಷಾಧ್ಯಯನ  ಪ್ರಾರಂಭಿಸಲಾಗಿದೆ ಎಂದರು.                 

ವೇದಿಕೆಯಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಸತೀಶ್ಚಂದ್ರ ಎಸ್,   ಎಸ್ ಡಿ ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ,ಸ್ನಾತಕೋತ್ತರ ವಿಭಾಗದ ಡೀನ್ ಡಾ.! ಸೌಮ್ಯ ಬಿ.ಪಿ,  ಉಪಸ್ಥಿತರಿದ್ದರು.  ಎಸ್ ಡಿ ಎಂ ಕಾಲೇಜು ಪ್ರಾಚಾರ್ಯ ಡಾ. ವಿಶ್ವನಾಥ ಪಿ. ಸ್ವಾಗತಿಸಿ,ಪ್ರಸ್ತಾವಿಸಿದರು.  ರಸಾಯನ ಶಾಸ್ತ್ರ   ವಿಭಾಗದ  ಡಾ. ನಫೀಸತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಎಂಜಿನೀಯರಿಂಗ್ ಕಾಲೇಜು  ಪ್ರಾಂಶುಪಾಲ ಡಾ. ಅಶೋಕ ಕುಮಾರ್ ಟಿ ವಂದಿಸಿದರು.  ಪೂರ್ಣಿಮಾ ಅವರು ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಮಾಹಿತಿ ನೀಡಿದರು.

Related posts

ಕರಾಯ: ಚರಂಡಿಗೆ ಬಿದ್ದ ಖಾಸಗಿ ಬಸ್

Suddi Udaya

ಸಿರಿ ಕೇಂದ್ರ ಕಛೇರಿಗೆ ಡಿ. ವೀರೇಂದ್ರ ಹೆಗ್ಗಡೆ ದಂಪತಿ ಭೇಟಿ

Suddi Udaya

ಧರ್ಮಸ್ಥಳ ಗ್ರಾಮವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮವೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಘೋಷಣೆ: ರಾಜ್ಯದ 5 ನಗರದಲ್ಲಿ, ಸುಮಾರು 6078 ಗ್ರಾ.ಪಂ ಗಳಲ್ಲಿ ಮೊದಲ ಗ್ರಾಮವಾಗಿ ಧರ್ಮಸ್ಥಳ ಗ್ರಾಮ ಆಯ್ಕೆ

Suddi Udaya

ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ಪ್ರಾಕೃತಿಕ ವಿಕೋಪಗಳು ಮತ್ತು ಸಾಂಕ್ರಾಮಿಕ ರೋಗಗಳಿಂದ ಸುರಕ್ಷತಾ ಜಾಗೃತಿ

Suddi Udaya

ಡಾ. ಡಿ ವಿರೇಂದ್ರ ಹೆಗ್ಗಡೆ ರವರ ಹುಟ್ಟು ಹಬ್ಬದ ಪ್ರಯುಕ್ತ ಪುಂಜಾಲಕಟ್ಟೆ ಮತ್ತು ಮಂಜಲ್ಪಲಿಕ್ಕೆ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ಇಂದಿನಿಂದ ಐಪಿಎಲ್ ಕ್ರಿಕೆಟ್ ಧಮಾಕಾ

Suddi Udaya
error: Content is protected !!