22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿ 2೦24 -25 ನೇ ಸಾಲಿನ ಮಹಾಸಭೆಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನ ಸಂತೆಕಟ್ಟೆ ಬೆಳ್ತಂಗಡಿಯಲ್ಲಿ ನಡೆಯಿತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಮುಖ್ಯ ಆಯುಕ್ತರಾದ ಡಾ.ಮೋಹನ್ ಅಳ್ವ ರವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಂಸ್ಥೆಯ ಗೌರವಧ್ಯಕ್ಷರು ಹಾಗೂ ಶಾಸಕರಾದ ಮಾನ್ಯ ಶ್ರೀ ಹರೀಶ್ ಪೂಂಜರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗೆ ನೀಡುತ್ತಿರುವ ಸಹಕಾರ ಹಾಗೂ ಸಲಹೆ ಸೂಚನೆ ಗಳಿಗೆ ಅವರನ್ನು ಸ್ಥಳೀಯ ಸಂಸ್ಥೆಯಿಂದ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಡಾ. ಮೋಹನ್ ಆಳ್ವಾರವರು ಅಭಿನಂದಿಸಿದರು.


‌‌‌ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪ್ರಮೀಳ ವರಿಂದ ವರದಿ ಮಂಡನೆಯಾಗಿ ಮಂಜೂರಾತಿ ಪಡೆದುಕೊಂಡು, ಕೋಶಾಧಿಕಾರಿ ಬೆಳಿಯಪ್ಪ ಕೆ ಯವರಿಂದ ಲೆಕ್ಕಪತ್ರ ಮಂಡನೆಯಾಗಿ ಮಂಜೂರಾತಿ ಪಡೆದುಕೊಂಡಿತು. ಹೊಸದಾಗಿ ತರಬೇತಿಗೊಂಡು ಆಗಮಿಸಿದ ಕಬ್ ಬುಲ್ ಬುಲ್ ಸ್ಕೌಟ್ಸ್ ಗೈಡ್ ರೋವರ್ ರೇಂಜರ್ ಶಿಕ್ಷಕ ಶಿಕ್ಷಕಿಯರನ್ನು ಗುರುತಿಸಿ ಗೌರವಿಸಲಾಯಿತು .
ಜಿಲ್ಲಾ ಕೋಶಧಿಕಾರಿ ನವೀನ್ ಅಂಬೂರಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ, ಸಂಸ್ಥೆಯ ಅಧ್ಯಕ್ಷರಾದ ಪದ್ಮ ಕುಮಾರ್, ಜಿಲ್ಲಾ ಸಹಾಯಕ ಆಯುಕ್ತರುಗಳಾದ ಬಿ ವಿಠಲ್ ಶೆಟ್ಟಿ, ಬಿ ಸೋಮಶೇಖರ್ ಶೆಟ್ಟಿ, ಉಪಾಧ್ಯಕ್ಷರಾದ ಸುಲೋಚನಾ, ಕಾರ್ಯದರ್ಶಿ ಪ್ರಮೀಳಾ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ, ಕೋಶಾಧಿಕಾರಿ ಬೆಳಿಯಪ್ಪ ಕೆ ರೋವರ್ ಸ್ಕೌಟ್ ಲೀಡರ್ ವಾಣಿ ಪದವಿಪೂರ್ವ ಕಾಲೇಜ್ ಹಾಗೂ ಸ್ಕೌಟ್ಸ್ ಗೈಡ್ಸ್ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ಯವರು ಶಿಕ್ಷಕ ಶಿಕ್ಷಕಿಯರಿಗೆ ಸ್ಕೌಟ್ಸ್ ಗೈಡ್ಸ್ ನ ಬಗ್ಗೆ ಮಾರ್ಗದರ್ಶನ ನೀಡಿದರು.

   ನಿರೂಪಣೆ ಯಲ್ಲಿ ಲಕ್ಷ್ಮೀಶ ರೋವರ್ ಸ್ಕೌಟ್ ಲೀಡರ್ ಎಸ್ ಡಿ ಎಂ ಪದವಿಪೂರ್ವ ಕಾಲೇಜು ಉಜಿರೆ ನೇರವೆರಿಸಿ , ಕಾರ್ಯಕ್ರಮ ದಲ್ಲಿ ಪದ್ಮಕುಮಾರ್ ಸ್ವಾಗತಿಸಿ ಪ್ರಮೀಳಾ ವಂದಿಸಿದರು.

Related posts

ಹಳ್ಳಿಂಗೇರಿ ಹಾ.ಉ. ಮಹಿಳಾ ಸಹಕಾರ ಸಂಘದ ಕಟ್ಟಡ ರಚನಾ ಸಮಿತಿ ರಚನೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ವೇಣೂರು: ಬಜಿರೆ ಬತ್ತಾರುನಲ್ಲಿ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ ಸಂಪನ್ನ

Suddi Udaya

ತೋಟತ್ತಾಡಿ : ಚಿಬಿದ್ರೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವಸಿದ್ಧತಾ ಸಭೆ

Suddi Udaya

ಪಿಲಾತಬೆಟ್ಟುನಲ್ಲಿ ಧರ್ಮಸ್ಥಳ ಪೊಲೀಸ್ ಇಲಾಖೆಯ ಬೊಲೆರೋ ಜೀಪ್‌ ಗೆ ಡಿಕ್ಕಿ ಹೊಡೆದ ಸ್ಕೂಟಿ

Suddi Udaya
error: Content is protected !!