32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧೀಮತಿ ಜೈನ ಮಹಿಳಾ ಸಮಾಜದ ವತಿಯಿಂದ ಧಾರ್ಮಿಕ ಸಂವಾದ ಕಾರ್ಯಕ್ರಮ

ಉಜಿರೆ: ಇಲ್ಲಿನ ಧೀಮತಿ ಜೈನ ಮಹಿಳಾ ಸಮಾಜ , ಬಾಹುಬಲಿ ಮಹಿಳಾ ಸಮಾಜ ಧರ್ಮಸ್ಥಳ ಇದರ ಜಂಟಿ ಆಶ್ರಯದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ ಧರ್ಮಸ್ಥಳದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಜಿನ ಚೈತ್ಯಾಲಯದಲ್ಲಿ ಜಿನ ಮಂದಿರಕೆ ಹೋಗೋಣ ಬನ್ನಿ, ಜೈನ ಧರ್ಮದ ಸಾರವ ತಿಳಿಯೋಣ ಬನ್ನಿ ಎಂಬ ವಿನೂತನ ಧಾರ್ಮಿಕ ಸಂವಾದ ಕಾರ್ಯಕ್ರಮ ನಡೆಯಿತು.

ಜೈನ ಧರ್ಮದ ಮೂಲ ತತ್ವಗಳ ಕುರಿತಾದ ಧಾರ್ಮಿಕ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಧರ್ಮಸ್ಥಳದ ಜನಚೈತ್ಯಾಲಯದ ಪುರೋಹಿತ ಶಿಶಿರ್ ಕುಮಾರ್ ಇಂದ್ರ ಹಾಗೂ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಧಾರ್ಮಿಕ ಚಿಂತಕರಾದ ಡಾ.ಮಹಾವೀರ ಜೈನ್ ಇಚ್ಚಿಲಂಪಾಡಿ ಇವರು ಜೈನ ಧರ್ಮದ ಅಷ್ಟ ಮೂಲ ಗುಣಗಳು ಹಾಗೂ ಶ್ರಾವಕರ ಷಟ್ಕರ್ಮಗಳ ಬಗ್ಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಜೈನ ಧರ್ಮದ ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ಧರ್ಮದ ಆಚರಣೆಯ ಸಾರವನ್ನು ಪರಿಚಯಿಸುತ್ತಾ ವೈಜ್ಞಾನಿಕ ಹಿನ್ನೆಲೆಯಿಂದ ಜೈನ ಧರ್ಮೀಯರು ಆಚರಿಸಿಕೊಂಡು ಬರುತ್ತಿರುವ ಆಚರಣೆಗಳು ಇಂದಿಗೂ ಹೆಚ್ಚು ಪ್ರಸ್ತುತ ಎಂದರು. ಕಿರಿಯರಲ್ಲಿ ಧರ್ಮದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಜೈನ ಧರ್ಮದ ಸರಳ ಪರಿಚಯವನ್ನು ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಸುಪ್ರಿಯ ಹರ್ಷೇಂದ್ರ ಕುಮಾರ್ ಇವರು ಜೈನ ಧರ್ಮದ ಸರಳವಾದ ಪರಿಚಯ ಹಾಗೂ ಆಚರಣೆಯ ಪ್ರಾಮುಖ್ಯತೆಯನ್ನು ಇಂದಿನ ಎಳೆಯರು ಹಾಗೂ ಯುವ ಜನತೆಯಲ್ಲಿ ಮೂಡಿಸುವುದರ ಮೂಲಕ ಅಹಿಂಸಾತ್ಮಕ ದೃಷ್ಟಿಕೋನದ ಪ್ರಾಮುಖ್ಯತೆ ಹಾಗೂ ಧರ್ಮದ ಆಚರಣೆಯ ಪ್ರಸ್ತುತೆ ಯನ್ನು ಉಲ್ಲೇಖಿಸಿದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಹಂಪಿ ವಿಶ್ವವಿದ್ಯಾಲಯದಿಂದ ಪಿ ಹೆಚ್ ಡಿ ಪದವಿ ಪಡೆದ ಡಾ.ಮಹಾವೀರ ಜೈನ್ ಇವರನ್ನು ಧೀಮತಿ ಮಹಿಳಾ ಸಮಾಜ ದ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಧೀಮತಿ ಮಹಿಳಾ ಸಮಾಜದ ಅಧ್ಯಕ್ಷರಾದ ಡಾ. ರಜತ ಪಿ ಶೆಟ್ಟಿ ಸ್ವಾಗತಿಸಿ ಬಾಹುಬಲಿ ಮಹಿಳಾ ಸಮಾಜದ ಸದಸ್ಯೆ ಸಾವಿತ್ರಿ ವಂದಿಸಿದರು. ಶ್ರೀಮತಿ ಸೌಮ್ಯ ಸುಭಾಷ್ ಪ್ರಾರ್ಥಿಸಿ ದಿವ್ಯಕುಮಾರಿ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ: ಸಮಾಜ ಸೇವಕ ಚಾರ್ಮಾಡಿ ಹಸನಬ್ಬರವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಸೇವೆಯ ಅಂಬುಲೆನ್ಸ್ ಜಿಲ್ಲಾ ಉಸ್ತುವಾರಿ ಸಚಿವರಿಂದ ಲೋಕಾರ್ಪಣೆ

Suddi Udaya

ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಪ್ರಮುಖರಿಂದ ಸೇವಾಧಾಮಕ್ಕೆ ಭೇಟಿ

Suddi Udaya

ಕೇಳ ಪಂಚಲಿಂಗೇಶ್ವರ ದೇವಸ್ಥಾನ ಶಿಲಾನ್ಯಾಸ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಶಾಂತ್ ಪ್ರತಿನಿಧಿಸಿದ ತಂಡ ರಾಷ್ಟ್ರಮಟ್ಟದಲ್ಲಿ ಪ್ರಥಮ

Suddi Udaya

ಕೊಕ್ಕಡ: ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಶಬರಾಯ ನಿಧನ

Suddi Udaya

ಗುರುವಾಯನಕೆರೆಯಲ್ಲಿ ಹೊಟೇಲ್ ರೇಸ್ ಇನ್ ಬೋರ್ಡಿಂಗ್ & ಲಾಡ್ಜಿಂಗ್ ಶುಭಾರಂಭ

Suddi Udaya
error: Content is protected !!