25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಪ್ರೌಢಶಾಲೆಯಲ್ಲಿ ಹುತಾತ್ಮ ಮೋಹನ್ ದಾಸನ್ ರವರ ಭಾವಚಿತ್ರ ಅನಾವರಣ

ಮುಂಡಾಜೆ : ಕೇಂದ್ರೀಯ ಮೀಸಲು ಪಡೆ (CRPF Group center) ಯಲಹಂಕ ಬೆಂಗಳೂರು ಇದರ ಸಬ್ ಇನ್ಸ್ಪೆಕ್ಟರ್ ಹನುಮಂತರಾಜ್ ಇವರ ನೇತೃತ್ವದಲ್ಲಿ ಸಿ ಆರ್.ಪಿ ಎಫ್ ನಲ್ಲಿ 1991ರಿಂದ 1998 ರ ತನಕ ಸಿ ಆರ್ ಪಿ ಸೇವೆಯನ್ನು ಸಲ್ಲಿಸಿ ದಿನಾಂಕ 14/07/1998 ರಂದು ದೇಶ ಸೇವೆಯಲ್ಲಿ ತೊಡಗಿರುವಾಗ ಹುತಾತ್ಮರಾದ ಮೋಹನ್ ದಾಸನ್ ಇವರು ಮುಂಡಾಜೆ ಪ್ರೌಢಶಾಲೆ ಮುಂಡಾಜೆಯ ಹಿರಿಯ ವಿದ್ಯಾರ್ಥಿ, ಇವರ ಸ್ಮರಣ ಪುಣ್ಯತಿಥಿಯನ್ನು ಅವರ ಭಾವಚಿತ್ರ ಅನಾವರಣದೊಂದಿಗೆ ಮುಂಡಾಜೆ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ CRPF GC ಬೆಂಗಳೂರು ಯಲಹಂಕ ಇದರ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹನುಮಂತರಾಜು ಇವರು ಭಾಗವಹಿಸಿ ವೀರಯೋಧನಿಗೆ ನಮನವನ್ನು ಸಲ್ಲಿಸಿ ವಿದ್ಯಾರ್ಥಿಗಳಿಗೆ ರಾಷ್ಟ್ರಪ್ರೇಮದ ಬಗ್ಗೆ ಸೇನೆಯ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸಂಚಾಲಕ ನಾರಾಯಣ ಪಡ್ಕೆ, ಕಾರ್ಯದರ್ಶಿ ನಾರಾಯಣ ಗೌಡ ಕೊಳಂಬೆ, ಸದಸ್ಯರಾದ ವಿಶ್ವನಾಥ ಶೆಟ್ಟಿ, ಮುಂಡಾಜೆಯ ಕಾರ್ಗಿಲ್ ವನ ಇದರ ಸ್ಥಾಪಕ ಸಚಿನ್ ಭೀಡೆ, ಶಿಕ್ಷಕರು, ಸಿಬ್ಬಂದಿ ವರ್ಗದವರು ಮತ್ತು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಜಯಂತಿ ಟಿ ಸ್ವಾಗತಿಸಿ, ಸಹ ಶಿಕ್ಷಕ ಸುರೇಶ್ ಎಂ.ಟಿ ಕಾರ್ಯಕ್ರಮವನ್ನು ನಿರೂಪಿಸಿ, ಸಹ ಶಿಕ್ಷಕಿ ಶ್ರೀಮತಿ ಪಾರ್ವತಿ ಯು ಧನ್ಯವಾದವಿತ್ತರು. ಶಿಕ್ಷಕ ಆನಂದ ಜಿ, ಗುಣಪಾಲ್ ಎಮ್.ಎಸ್. ಶ್ರೀಮತಿ ಸಹನಾ ಶ್ರೀಮತಿ ಪದ್ಮಲತಾ ಸಹಕರಿಸಿದರು.

Related posts

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 59.78 ಲಕ್ಷ ಲಾಭ , ಸದಸ್ಯರಿಗೆ ಶೇ. 7 ಡಿವಿಡೆಂಟ್ ಘೋಷಣೆ

Suddi Udaya

ಉಜಿರೆಯಲ್ಲಿ ಟ್ರಾಫಿಕ್ ಪೊಲೀಸರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವ ಮತ್ತು ಕಾನೂನು ಪಾಲನ ಕುರಿತು ಮಾಹಿತಿ ಕಾರ್ಯ

Suddi Udaya

ಗೇರುಕಟ್ಟೆ: ಹಿದಾಯ ತುಸ್ಸಿಬಿಯಾನ್ ಮದರಸದಲ್ಲಿ ಈದ್ ಮಿಲಾದ್ ಪ್ರಯುಕ್ತ ಮದರಸ ಮಕ್ಕಳ ಕಲಾ ಕಲರವ ಕಾರ್ಯಕ್ರಮ “ಎಂಬ್ರೆಝ್ ಮದೀನಾ”

Suddi Udaya

ಬಳಂಜ ವೈಭವದ ಶಾರದೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉರುವಾಲು ಮಹಮ್ಮಾಯಿ ಭೈರವ ಗುಡಿಯ ಶಿಲಾನ್ಯಾಸ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಹುಟ್ಟು ಹಬ್ಬದ ಸಂಭ್ರಮ: ಭಾರತೀಯ ಜೀವ ವಿಮಾ ನಿಗಮ ದಿಂದ ಡಾ.ಹೆಗ್ಗಡೆಯವರಿಗೆ ಗೌರವಾರ್ಪಣೆ; ಡಾ. ಹೆಗ್ಗಡೆಯವರ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆ

Suddi Udaya
error: Content is protected !!