September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಛತಾ ಜಾಗೃತಿ ಅಭಿಯಾನ ಕಾರ್ಯಕ್ರಮ

ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಛತಾ ಜಾಗೃತಿ ಅಭಿಯಾನ ಕಾರ್ಯಕ್ರಮದ ಭಾಗವಾಗಿ ಆಡಳಿತ ಮಂಡಳಿಯು ಅಧಿಕಾರಿಗಳೊಂದಿಗೆ ಪಂಚಾಯತ್ ವ್ಯಾಪ್ತಿಯ ಹಲವು ಅಂಗಡಿ, ಹೋಟೆಲ್, ಪ್ಲ್ಯಾಟ್ ಗಳಲ್ಲಿರುವ ಮನೆಗಳಿಗೆ ಮತ್ತು ವಿವಿಧ ಕಡೆ ಸಂಚರಿಸಿ ಎಲ್ಲೆಂದರಲ್ಲಿ ರಸ್ತೆ ಬದಿ ಮತ್ತು ಇತರ ಜನ ವಸತಿ ಪ್ರದೇಶದಲ್ಲಿ ತ್ಯಾಜ್ಯವನ್ನು ಎಸೆಯುವುದರ ಬಗ್ಗೆ ಜಾಗೃತಿ ಮೂಡಿಸಿ ಒಣ ಕಸವನ್ನು ಬೇರ್ಪಡಿಸಿ ಪಂಚಾಯತ್ ನೀಡಿರುವ ಚೀಲದಲ್ಲಿ ಶೇಖರಿಸಿಟ್ಟು 2 ದಿನಗಳಿಗೊಮ್ಮೆ ಬರುವ ಪಂಚಾಯತ್ ಸ್ವಚ್ಛತಾ ವಾಹನಕ್ಕೆ ಹಸ್ತಾಂತರಿಸುವಂತೆ ಮಾಹಿತಿ ತಿಳಿಸಿ ಪಂಚಾಯತ್ ನೊಂದಿಗೆ ಸಹಕರಿಸುವಂತೆ ವಿನಂತಿಸಿ ಮುಂದೆ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಹಾಕಿದರೆ ಕಾನೂನು ಕ್ರಮ ಮತ್ತು ಸ್ಥಳದಲ್ಲೇ ದಂಡ ವಿಧಿಸುವುದು ಮತ್ತು ಅಂಗಡಿಯವರಾದರೆ ಲೈಸನ್ಸ್ ರದ್ದುಪಡಿಸಿ ಪಂಚಾಯತ್ ನಿಂದ ಕಠಿಣ ಕ್ರಮಕ್ಕೆಗೊಳ್ಳುವುದೆಂಬ ಪ್ರತಿಯೊಬ್ಬರಿಗೂ ಎಚ್ಚರಿಕೆಯ ನೋಟಿಸು ನೀಡಲಾಯಿತು.

ಪಂಚಾಯತ್ ಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಸಂಪೂರ್ಣ ಸಹಕಾರ ನೀಡಬೇಕೆಂದು ಗೇರುಕಟ್ಟೆ ಸ್ನೇಹ ಸಂಗಮ ಅಟೋ ಚಾಲಕ ಮಾಲಕ ಸಂಘದ ಸದಸ್ಯರಲ್ಲಿ ವಿನಂತಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ದಿವಾಕರ ಎಮ್ ಉಪಾಧ್ಯಕ್ಷೆ ಶ್ರೀಮತಿ ಇಂದಿರಾ ಬಿ , ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಸದಸ್ಯರುಗಳಾದ ಸುದಾಕರ ಮಜಲು, ಅಬ್ದುಲ್ ಕರೀಮ್, ಮೋಹಿನಿ, ಕುಸುಮಾ ಎನ್ ಬಂಗೇರ, ಲತೀಫ್ ಪರಿಮ, ವಿಜಯ ಗೌಡ, ಹರೀಶ್ ಕುಮಾರ್, ಯಶೋದರ ಶೆಟ್ಟಿ, ಮರೀಟಾ ಪಿಂಟೋ, ಪುಷ್ಪಾ ನಾಳ, ಶ್ವೇತಾ ಕೆ, ಸಿಬ್ಬಂದಿಗಳಾದ ಸುಚಿತ್ರಾ, ಶಶಿಕಲಾ ಎಮ್, ಪ್ರಮೀಳಾ, ನಂದಿನಿ ಪಿ ರೈ, ರವಿ ಎಚ್, ಸುರೇಶ್ ಗೌಡ, ರಂಜಿನಿ, ವಿಮಲ ಹಾಜರಿದ್ದರು.

Related posts

ಧರ್ಮಸ್ಥಳ ಶ್ರೀ ಧ.ಮಂ. ಭಜನಾ ಪರಿಷತ್ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ರವರಿಗೆ ತಾಲೂಕು ಭಜನಾ ಪರಿಷತ್ ವತಿಯಿಂದ ಅಭಿನಂದನೆ

Suddi Udaya

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡದ ಶಿಬಿರಕ್ಕೆ ಸುಲ್ಕೇರಿಯ ಶಶಿಕಾಂತ್ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಪರಿಷ್ಕೃತ ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ

Suddi Udaya

ಕಲ್ಮಂಜ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮ: ಚಿಣ್ಣರ ಉತ್ಸವ

Suddi Udaya

ಇಳ0ತಿಲ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾಗಿ ಸುರೇಶ್ ಗೌಡ ಆಯ್ಕೆ

Suddi Udaya
error: Content is protected !!