September 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ನೇರ್ತನೆ ಪರಿಸರದ ಕೃಷಿ ತೋಟಗಳಿಗೆ ನುಗ್ಗಿದ ಕಾಡಾನೆಗಳು: ಅಪಾರ ಕೃಷಿ ನಾಶ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿಯೂ ಬುಧವಾರ ತಡ ರಾತ್ರಿ ಕಾಡಾನೆಗಳು ದಾಳಿ ನಡೆಸಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡಿದೆ.

ಇಲ್ಲಿನ ನೇರ್ತನೆ ಪರಿಸರದಲ್ಲಿ ರಾತ್ರಿಯವೇಳೆ ಕಾಡಾನೆಗಳು ಕಾಣಿಸಿಕೊಂಡಿದ್ದು ಶ್ರೀನಿವಾಸ ಎಂಬವರ ತೋಟದ ತೆಂಗಿನ ಗಿಡಗಳನ್ನು ಹಾಗೂ ಅಡಿಕೆ ಗಿಡಗಳನ್ನು ನಾಶಪಡಿಸಿದೆ.

ಈ ಪರಿಸರದ ಇತರ ಹಲವರ ತೋಟಗಳಿಗೂ ಕಾಡಾನೆ ನುಗ್ಗಿದ್ದು ಅಲ್ಲಲ್ಲಿ ಹಾನಿಯುಂಟುಮಾಡಿದೆ. ಮುಖ್ಯ ರಸ್ತೆಯ ಬದಿಯಲ್ಲಿ ಕಾಡಾನೆಗಳು ಓಡಾಟ ನಡೆಸುತ್ತಿದೆ. ಕೊಕ್ಕಡದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾಗಿರುವುದು ಧರ್ಮಸ್ಥಳ ನೇರ್ತನೆ ಪರಿಸರದ ಜನರಲ್ಲಿಯೂ ಆತಂಕ ಮೂಡಿಸಿದೆ. ರಾತ್ರಿಯ ವೇಳೆ ರಸ್ತೆಯಲ್ಲಿ ಓಡಾಡಲೂ ಜನ ಭಯ ಪಡುವಂತಾಗಿದೆ.

Related posts

ಹೊಸಂಗಡಿ : ಬಡಕೋಡಿ ಕರಿಮಣೇಲು ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ಉಜಿರೆ :ಶ್ರೀ ಧ. ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರ ಬೀಳ್ಕೊಡುಗೆ

Suddi Udaya

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪೋಷಕ ಮತ್ತು ಶಿಕ್ಷಕ ಸಭೆ

Suddi Udaya

ವೇದ ವಿದ್ವಾಂಸರಾದ ವೇದಮೂರ್ತಿ ಶಂಭು ಭಟ್ ಚಾವಡಿಬಾಗಿಲು “ಹವ್ಯಕ ವೇದ ರತ್ನ” ಪ್ರಶಸ್ತಿಗೆ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಪೋಸ್ಟ್‌ : ಮುಂಬಯಿಯ ಶ್ರೀನಾಥ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

Suddi Udaya

ಪಿಲಿಚಾಮುಂಡಿಕಲ್ಲು ದೊಂಪದಬಲಿ ಉತ್ಸವ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್ ನಿಧನ

Suddi Udaya
error: Content is protected !!