September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಂಡಿಂಜೆ ಗ್ರಾಮ ಪಂಚಾಯತ್ ನಲ್ಲಿ ಅರಿವು ಕಾರ್ಯಕ್ರಮ

ಅಂಡಿಂಜೆ: ಗ್ರಾಮ ಪಂಚಾಯತ್ ಅಂಡಿಂಜೆಯಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವು ಜು.18ರಂದು ನಡೆಯಿತು.

ಸಭೆಯ ಅಧ್ಯಕ್ಷ ಸ್ಥಾನವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ನಿತಿನ್ ಎಮ್ ವಹಿಸಿಕೊಂಡಿದ್ದರು.

ಕೃಷಿ ಸಹಾಯಕ ನಿರ್ದೇಶಕ ವೀರಭದ್ರಪ್ಪ ಮಾತನಾಡಿ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕೃಷಿ ಮಿಷನ್ ನಡಿ ಅಂಡಿಂಜೆ ಪಂಚಾಯಿತಿನ ಮೂರು ಗ್ರಾಮಗಳಾದ ಸಾವ್ಯ ,ಕೊಕ್ರಾಡಿ, ಅಂಡಿಂಜೆ ಗ್ರಾಮದ ರೈತರಿಗೆ ಮಾಹಿತಿ ನೀಡಿದರು. ರಾಸಾಯನಿಕಗಳನ್ನು ಹೆಚ್ಚಾಗಿ ಬಳಸದೆ ಆದಷ್ಟು ಸಾವಯವ ಕೃಷಿಯನ್ನು ಬಳಸುವಂತೆ ತಿಳಿಸಿದರು. ಆತ್ಮ ಯೋಜನೆಯ ಸಿಬ್ಬಂದಿ ಅಭಿಲಾಶ್ ಮಾತನಾಡಿ ಇಲಾಖೆಯ ಸೌಲಭ್ಯಗಳ ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ನಿತಿನ್ ಎಂ ಮುಂಡೆವು ಇವರು ಮಾತನಾಡಿ ಗ್ರಾಮದ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು. ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್, ಪಂಚಾಯತ್ ಕಾರ್ಯದರ್ಶಿಯಾದ ಶ್ರೀಮತಿ ಚಂಪಾ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಶ್ರೀಮತಿ ಮಮತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಉಪಾಧ್ಯಕ್ಷೆ ಶ್ರೀಮತಿ ಶ್ವೇತಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಶ್ರೀಮತಿ ಆಶಾ , ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ತರಬೇತಿಯಲ್ಲಿ 98 ರೈತರು ಭಾಗವಹಿಸಿದ್ದರು. ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು , ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು. ಕೃಷಿ ಸಖಿ ಶ್ರೀಮತಿ ವತ್ಸಲಾ ಸ್ವಾಗತಿಸಿದರು . ಪಂಚಾಯತ್ ಸಿಬ್ಬಂದಿಯಾದ ಶೀನ ಕಾರ್ಯಕ್ರಮ ನಿರೂಪಣೆ ಮಾಡಿದರು. ಕ್ಲಸ್ಟರ್ ಆದ ಶ್ರೀಮತಿ ನಯನ ಸಹಕರಿಸಿದರು. ಎಲ್ ಸಿ ಆರ್ ಪಿ ಯಾದ ಶ್ರೀಮತಿ ಸುರೇಖಾ ಧನ್ಯವಾದ ನೀಡಿದರು.

Related posts

ಇಳಂತಿಲ ಗ್ರಾ.ಪಂ. ಸದಸ್ಯೆ ರೇಖಾ ನಿಧನ

Suddi Udaya

ಎಕ್ಸೆಲ್ ಪರ್ಬದ ‘ಅಕ್ಷರೋತ್ಸವ’ ಕವಿಗೋಷ್ಠಿಯಲ್ಲಿ ಪವಿತ್ರಾದಿನೇಶ್ ರವರ “ಗೋಮಾತೆ” ಕವನಕ್ಕೆ ಅಭಿನಂದನಾ ಗೌರವ

Suddi Udaya

ಮೂರು ತಿಂಗಳ ಹಿಂದೆ ಗೇರುಕಟ್ಟೆ ಕೆರೆಯಲ್ಲಿ ಸಿಕ್ಕ ಶವದ ಗುರುತು ಪತ್ತೆ: ಮೃತಪಟ್ಟವರು ಗೇರುಕಟ್ಟೆಯ ಉಮರ್ ಫಾರೂಕ್ ಡಿಎನ್‌ಎ ವರದಿಯಲ್ಲಿ ದೃಢ

Suddi Udaya

ಎ.17 : ಬೆಳ್ತಂಗಡಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಆ‌ರ್ ಮತಪ್ರಚಾರ:ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಪತ್ರಿಕಾಗೋಷ್ಠಿ

Suddi Udaya

ಸೆ.15 ರಂದು ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡರಿಂದ ಪ್ರಚಾರಕ್ಕೆ ಚಾಲನೆ

Suddi Udaya

ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ: ಬೆಳ್ತಂಗಡಿಯ ಸುಬ್ರಹ್ಮಣ್ಯ ಶಾಸ್ತ್ರಿ ಸಹಿತ ಮೂವರನ್ನು ಬಂಧಿಸಿದ ಬೆಂಗಳೂರು ಸಿಸಿಬಿ ಪೊಲೀಸರು

Suddi Udaya
error: Content is protected !!