September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಮೃತ್ ಮಿತ್ರ 2.0 ಮಿಷನ್ ಯೋಜನೆಯಡಿ ಕುಡಿಯುವ ನೀರಿನ, ನೀರಿನ ಗುಣಮಟ್ಟದ ಪರೀಕ್ಷೆಯ ಕುರಿತಾದ ಪ್ರಾಯೋಗಿಕ ತರಬೇತಿ

ಬೆಳ್ತಂಗಡಿ: ಭಾರತ ಸರ್ಕಾರದ ಅಮೃತ್ ಮಿತ್ರ 2.0 ಮಿಷನ್ ಅಡಿಯಲ್ಲಿ ಬೆಳ್ತಂಗಡಿ ನಗರ ಪ್ರದೇಶದ ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರುಗಳ ಮೂಲಕ ಕುಡಿಯುವ ನೀರಿನ, ನೀರಿನ ಗುಣಮಟ್ಟದ ಪರೀಕ್ಷೆಯ ಕುರಿತಾದ ಪ್ರಾಯೋಗಿಕ ತರಬೇತಿಯು ಬೆಳ್ತಂಗಡಿ ಪಟ್ಟಣ ಪಂಚಾಯತ್ ನಲ್ಲಿ‌ ಜು.18 ರಂದು ಜರುಗಿತು.

ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಟಿ. ಜಯಾನಂದ ಗೌಡ ರವರು‌ ಅಧ್ಯಕ್ಷತೆ ವಹಿಸಿ ಮಾತನಾಡಿ, “ನಗರ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಯುವ ಮಹಿಳೆಯರ ಜೀವನೋಪಾಯ ಕಂಡು ಕೊಳ್ಳುವುದಕ್ಕೆ ಇದೊಂದು ಹೊಸ ದಿಕ್ಕನ್ನು ತೋರಿಸಿಕೊಟ್ಟ ಹಾಗೆ ಆಗುತ್ತದೆ” ಎಂದು ತಿಳಿಸಿದರು.


ಮುಖ್ಯಾಧಿಕಾರಿ ರಾಜೇಶ್ ಕೆ. ಇವರು “DAY-NULM ಯೋಜನೆ ಅಡಿಯಲ್ಲಿ ರಚನೆಗೊಂಡಿರುವ ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರುಗಳು ಕೊಳವೆ ನೀರಿನ ಮೂಲ ಮತ್ತು ಇತರೆ ಬಿಂದುಗಳಾದ ಬಾವಿಗಳು ಮತ್ತು ತೆರೆದ ಬಾವಿಗಳ ನೀರಿನ ಗುಣಮಟ್ಟ ಪರಿಶೀಲನೆಯ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ನೀರಿನ ಗುಣಮಟ್ಟ ಪರೀಕ್ಷೆಗಾಗಿ ನೀರಿನ ಪರೀಕ್ಷಾ ಕಿಟ್‌ಗಳನ್ನು ಸ್ವ ಸಹಾಯ ಸಂಘಗಳ ಮೂಲಕ ವಿತರಿಸಿ, ನಿತ್ಯ ನೀರಿನ ಮಾದರಿಗಳನ್ನು ಸಂಗ್ರಹಿಸಿ ಫಲಿತಾಂಶಗಳ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.


ಅಚ್ಯುತ ನಾಯ್ಕ್ ಮೂಡುಬಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ “AMRUT MITRA (ಅಟಲ್ ಪುನಶ್ಚೇತನ ಮತ್ತು ನಗರ ಪರಿವರ್ತನೆ ಮಿಷನ್) ಅಡಿಯಲ್ಲಿ ಪ್ರತಿ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಆದ್ಯತೆಯಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರುಗಳ ಭಾಗವಹಿಸುವಿಕೆ ಶ್ಲಾಘನೀಯ ಮತ್ತು ಗಮನಾರ್ಹ” ಎಂದು ತಿಳಿಸಿದರು.

ಸುರೇಖಾ ಮತ್ತು ವಿಶಾಲಾಕ್ಷಿ ಸಮುದಾಯ ಸಂಪನ್ಮೂಲ ವ್ಯಕ್ತಿ ಸೋಮೇಶ್ವರ ಪುರಸಭೆ ಇವರು ತಾಂತ್ರಿಕ ಪ್ರಾತ್ಯಕ್ಷತೆಯ ಮೂಲಕ ತರಬೇತಿ ನೀಡಿದರು. ಮೆಟ್ಟಿಲ್ದಾ ಡಿ’ಕೋಸ್ಟ ಸಮುದಾಯ ಸಂಘಟಕರು ಕಾರ್ಯಕ್ರಮವನ್ನು ಆಯೋಜಿಸಿ, ನಿರ್ವಹಣೆ ಮಾಡಿದರು.

Related posts

ಬೆಳ್ತಂಗಡಿ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Suddi Udaya

ಪೆರಿಂಜೆ : ಮಿಲಾದ್ ಆಚರಣೆಯ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳಿಂದ ‘ನೂರುನ್ ಆಲಾ ನೂರ್ ‘ಕಾರ್ಯಕ್ರಮ

Suddi Udaya

ಬಿಜೆಪಿ ಯುವಮೋರ್ಚಾ ದ.ಕ. ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಪ್ರಮೋದ್ ದಿಡುಪೆ ಮರು ನೇಮಕ

Suddi Udaya

ಜಿಲ್ಲಾ ಮಟ್ಟದ ಕ್ರೀಡಾಕೂಟ: ಬಜಿರೆ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಜಾತಕ ತೋರಿಸಲು ಬಂದ ಯುವತಿಯ ಹಿಂದೆ ಬಿದ್ದ ಜ್ಯೋತಿಷಿ: ವಿವಾಹಯಾಗುವಂತೆ ಒತ್ತಾಯಿಸಿ ಮಾಟಮಂತ್ರ ಮಾಡಿದ ಜ್ಯೋತಿಷಿಯನ್ನು ಬಂಧಿಸಿದ ಪೊಲೀಸರು

Suddi Udaya

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!