September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ ಗ್ರಾ. ಪಂ. ನಲ್ಲಿ ಸಾಮಾಜಿಕ ಪರಿಶೋದನಾ ವಿಶೇಷ ಗ್ರಾಮ ಸಭೆ

ಅಳದಂಗಡಿ ಗ್ರಾಮ ಪಂಚಾಯತ್ ನ 2025-26 ನೇ ಸಾಲಿನ ಸಾಮಾಜಿಕ ಪರಿಶೋದನಾ ವಿಶೇಷ ಗ್ರಾಮ ಸಭೆಯ ಜು. 19ರಂದು ಅಳದಂಗಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

2024-25 ನೇ ಸಾಲಿನ ಮಹತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಮತ್ತು 15 ನೇ ಹಣಕಾಸು ಯೋಜನೆ, 2020 ರಿಂದ 2024-25 ನೇ ರಾಜ್ಯ ಹಣಕಾಸು ಯೋಜನೆಯಲ್ಲಿ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತಿನಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನ ಗೊಂಡ ಕಾಮಗಾರಿಗಳ ಸಾಮಾಜಿಕ ಪರಿಶೋದನೆ ಮಾಡಲಾಯಿತು.

ಸಭೆಯ ಮಾರ್ಗದರ್ಶನ ಅಧಿಕಾರಿಯಾಗಿ ತಾಲೂಕು ಶಿಕ್ಷಣಾಧಿಕಾರಿ ರವರು ಕಾಮಗಾರಿಯ ಗುಣಮಟ್ಟವನ್ನು ಉತ್ತಮ ರೀತಿಯಲ್ಲಿ ಕಾಪಾಡಲು ಸರಕಾರ ಈ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಗಿದೆ ಎಂದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಪೂರ್ಣಿಮ ಜೆ ಸ್ವಾಗತಿಸಿದರು. ಸಾಮಾಜಿಕ ಪರಿಶೋದನೆಯ ತಾಲೂಕು ಸಂಯೋಜಕ ರಾಜೀವ ಸಾಲಿಯಾನ್ ಸಾಮಾಜಿಕ ಪರಿಶೋದನೆ ಮೂಲ ಉದ್ದೇಶವನ್ನು ತಿಳಿಸಿದರು.

ಸಾಮಾಜಿಕ ಪರಿಶೋದನೆಯ ಸಂಪನ್ಮೂಲ ವ್ಯಕ್ತಿಗಳು ಸಾಮಾಜಿಕ ಪರಿಶೋದನೆಯ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಸಭೆಯಲ್ಲಿ ನರೇಗ ಯೋಜನೆಯ ಇಂಜಿನಿಯರ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಲೆಕ್ಕ ಸಹಾಯಕರು, ಸಿಬ್ಬಂದಿವರ್ಗದವರು ಸಭೆಯಲ್ಲಿ ಹಾಜರಿದ್ದರು.

Related posts

ಬಿಜೆಪಿ ತನ್ನ ಗುರಿಯನ್ನು ಮೀರಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಲಿದೆ: ಹರೀಶ್ ಪೂಂಜ

Suddi Udaya

ಬೆಳ್ತಂಗಡಿ: ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ, ಹೊಗೆ ರಹಿತ ವಾಹನ ನಿರ್ಮಲ ಪರಿಸರದ ಜೀವನ ಬಗ್ಗೆ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಗ್ರಾ.ಪಂ. ಪಿಡಿಒ ಉಮೇಶ್ ಕೆ. ಸೇವಾ ನಿವೃತ್ತಿ: ಧರ್ಮಸ್ಥಳ ಬೀಳ್ಕೊಡುಗೆ ಸಮಾರಂಭ ಸಮಿತಿಯಿಂದ ಬೀಳ್ಕೊಡುಗೆ

Suddi Udaya

ಲಾಯಿಲ ವಲಯದ ಭಜನಾ ಪರಿಷತ್ ಅಧ್ಯಕ್ಷರಾಗಿ ಜನಾರ್ಧನ ಆಯ್ಕೆ

Suddi Udaya

ಕುವೆಟ್ಟು ಸ.ಉ.ಪ್ರಾ. ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳ ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿ ವರ್ತಕರ ಸಂಘದಿಂದ ವೃದ್ದಾಶ್ರಮಕ್ಕೆ ಭೇಟಿ,ಗೃಹೋಪಯೋಗಿ ವಸ್ತುಗಳ ಹಸ್ತಾಂತರ

Suddi Udaya
error: Content is protected !!