September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಕೀರ್ತನ ಕಲಾತಂಡದಿಂದ ‘ಆಟಿಡೊಂಜಿ ಐತಾರಾ’ ಕಾರ್ಯಕ್ರಮ

ಮುಂಡಾಜೆ : ಇಲ್ಲಿಯ ಕೀರ್ತನ ಕಲಾತಂಡ ಇದರ ಆಶಯದಲ್ಲಿ ಆಟಿಡೊಂಜಿ ಐತಾರಾ ಕಾರ್ಯಕ್ರಮವು ಜು.20ರಂದು ಮುಂಡಾಜೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ರತ್ನರಾಜ ಹೆಗಡೆ ನೆಯ್ಯಾಲ್ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಬು ಪೂಜಾರಿ ಕೂಳೂರು ವಹಿಸಿ, ಆಟಿ ತಿಂಗಳಿನ ವಿಶೇಷತೆ ಹಾಗೂ ಆಟಿ ತಿಂಗಳಿನ ಮಹತ್ವವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಕುಂಜಣ್ಣ ನಾಯ್ಕ ಹುರ್ತಜೆ, ರಾಮಚಂದ್ರ ಭಟ್ ಅರೆಕಲ್, ಗಣೇಶ ಬಂಗೇರ, ಚೆನ್ನಕೇಶವ ಅರಸಮಜಲು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭರತ್ ಶೆಟ್ಟಿ, ಚಂದ್ರಕಾಂತ ಪ್ರಭು ನಿಡಿಗಲ್, ಜಯರಾಜ್ ಸಾಲಿಯಾನ್, ಯೋಗೀಶ್ ಗುಡಿಗಾರ್ ಕಟ್ಟಡಬೈಲು, ಶೀನಪ್ಪ ಗೌಡ, ಲೀಲಾವತಿ ಬಾಲಕೃಷ್ಣ ನಾಯ್ಕ, ಸದಾಶಿವ ನಾಯ್ಕ ಪಣಿಕ್ಕಲ್ ಇವರು ಉಪಸ್ಥಿತರಿದ್ದರು.

ಕಲಾತಂಡದ ಅಧ್ಯಕ್ಷ ಸದಾನಂದ ಬಿ ಮುಂಡಾಜೆ ಸ್ವಾಗತಿಸಿ, ವಿನಿತ್ ಧನ್ಯವಾದವಿತ್ತರು. ಕುಮಾರಿ ಜಿತೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಕೀರ್ತನ ಕಲಾ ತಂಡದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಂದಂತಹ ಅತಿಥಿಗಳಿಗೆ ಹಾಗೂ ಸಭಿಕರಿಗೆ ತಂಡದ ಸದಸ್ಯರು ತಯಾರಿಸಿದಂತಹ ವಿವಿಧ ತಿಂಡಿ ತಿನಿಸುಗಳನ್ನು ನೀಡಲಾಯಿತು. ಮಧ್ಯಾಹ್ನದ ನಂತರ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

Related posts

ಉಜಿರೆ: ರಾಜ್ಯಹ್ಯಾಂಡ್ ಬಾಲ್ ತಂಡಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತರಬೇತಿ

Suddi Udaya

ಇಂದಬೆಟ್ಟು: ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ: ಹಾನಿ

Suddi Udaya

ಕಳೆಂಜ ನಂದಗೋಕುಲ ಗೋಶಾಲೆ ವತಿಯಿಂದ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ. ಪುಷ್ಪಗಿರಿ ರವರಿಗೆ ಗೌರವಾರ್ಪಣೆ

Suddi Udaya

ಸೌತಡ್ಕ ದೇವಸ್ಥಾನದಲ್ಲಿ ಯಾತ್ರಾರ್ಥಿಗಳಿಂದ ಹಲ್ಲೆ: ಶೌಚಾಲಯ ಕ್ಲೀನ್ ಮಾಡುತ್ತಿದ್ದ ಸಿಬ್ಬಂದಿಗೆ ಗಂಭೀರ ಗಾಯ

Suddi Udaya

ನಾಳೆ(ಜ.11): ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಪರೀಕ್ಷಾ ನಿಮಿತ್ತ ವಿಶೇಷ ಕಾರ್ಯಾಗಾರ:ಎಕ್ಸೆಲ್ ಬೆಳಕು ಫೌಂಡೇಶನ್ಉಚಿತ ಶಿಕ್ಷಣ ಯೋಜನೆ ಬಗ್ಗೆ ವಿಸ್ಕೃತ ಮಾಹಿತಿ ನೀಡಲಿದ್ದೇವೆ: ಸುಮಂತ್ ಕುಮಾರ್ ಜೈನ್:ಬರುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ,ಕಾರ್ಯಾಗಾರವೂ ಮಧ್ಯಾಹ್ನ 2:00 ರಿಂದ ಸಂಜೆ 4:30 ರ ವರೆಗೆ ಜರುಗಲಿದೆ

Suddi Udaya

ಆಮಂತ್ರಣ ಪರಿವಾರ ಮತ್ತು ಆಮಂತ್ರಣ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಆಯೋಜಿಸಿರುವ ರಾಜ್ಯಮಟ್ಟದ ಮುದ್ದುಕೃಷ್ಣ ಸ್ಪರ್ಧೆಯ ಫಲಿತಾಂಶ

Suddi Udaya
error: Content is protected !!