September 6, 2026
ವರದಿ

ಯುವವಾಹಿನಿ ಬೆಂಗಳೂರು ಘಟಕದ ಪದಪ್ರದಾನ ಸಮಾರಂಭ

ಬೆಳ್ತಂಗಡಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಬೆಂಗಳೂರು ಘಟಕದ 2025-26ನೇ ಸಾಲಿನ ಪದಗ್ರಹಣ ಸಮಾರಂಭವು ಜು.13 ರಂದು ಬಿಬಿಎಂಪಿ ಜ್ಞಾನಸೌಧ, ಹೆಚ್.ಎನ್ಅನಂತ ಕುಮಾರ್ ಸಭಾಂಗಣ ನಾಗರಬಾವಿಯಲ್ಲಿ ಅಧ್ಯಕ್ಷರಾದ ಪ್ರಸಾದ್ ಕುಮಾರ್ ಕಲ್ಲಾಜೆರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬೆಳಗ್ಗೆ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ದೀಪವನ್ನು ಬೆಳಗುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಆರ್ಯ ಈಡಿಗ ಮಹಾಸಂಸ್ಥಾನ ಮಠ ಸೋಲೂರು, ರಾಮನಗರದ ಮಠಾಧೀಶರಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.ಬೆಳ್ತಂಗಡಿ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ದೀಪ ಪ್ರಜ್ವಲಿಸಿ ಪದಗ್ರಹಣ ನೇರವೇರಿಸಿ ಶುಭ ಕೋರಿದರು. ಘಟಕದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು, ಮೂಡಬಿದ್ರೆ ಶಾಸಕರಾದ ಉಮನಾಥ ಕೋಟ್ಯಾನ್,ನಂದಗುಡಿ ಹೊಸಕೋಟೆ ಬೆಂಗಳೂರಿನ ಸರ್ಕಲ್ ಇನ್ಸ್ಪೆಕ್ಟರ್ ಶಾಂತರಾಮ್,ಉದ್ಯಮಿ ದಯಾನಂದ ಬಂಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.2025-26 ನೇ ಸಾಲಿನ ಚುನಾವಣಾ ಸಮಿತಿಯ ಸಂಚಾಲಕ ಶ್ರೀಧರ್ ಡಿ ಪೂಜಾರಿ ನೂತನ ಪದಾಧಿಕಾರಿಗಳನ್ನು ವೇದಿಕೆಗೆ ಬರಮಾಡಿಕೊಂಡರು.ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಡೆನ್ನಾನ ಡೆನ್ನನ 2024 ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಸವಿ ನೆನಪಿಗಾಗಿ ವಿಡಿಯೋ ಪ್ರದರ್ಶಿಸಲಾಯಿತು, ಡೆನ್ನಾನ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಕಾರಣಿಕರ್ತರಾದ ನಿರ್ದೇಶಕರಾದ ಸ್ಮಿತೇಶ್ ಬಾರ್ಯ,ಅನೀಶ್ ಪೂಜಾರಿ ವೇಣೂರು ಇವರನ್ನು ಗೌರವಿಸಲಾಯಿತು.

ಅಕಾಲಿಕವಾಗಿ ಅಗಲಿದ ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿಯವರ ಕುಟುಂಬಕ್ಕೆ ಸಾಂತ್ವನ ನಿಧಿಯನ್ನು ಹಸ್ತಾಂತರಿಸಲಾಯಿತು.ಅರ್ಹಬಡ ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿಯನ್ನು ನೀಡಲಾಯಿತು.ಘಟಕದ ಸಂಘಟನೆ ಬಲವರ್ಧನೆಗೆ, ಹಾಗೂ ಘಟಕದ ಬೆಳವಣಿಗೆ, ಘಟಕದ ಪ್ರತಿ ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಿ ಯುವವಾಹಿನಿಗೆ ಶಕ್ತಿಯಾಗಿರುವ ಸದಸ್ಯರ ಸೇವೆಯನ್ನು ಗೌರವಿಸಿ ಯುವಶ್ರಮಿಕ 2024 ಪುರಸ್ಕಾರದೊಂದಿಗೆ ಶ್ರೀಯುತ ಸುಧೀರ್ ಎಸ್ ಪೂಜಾರಿ ಸಚಿಂದ್ರ ಕೋಟ್ಯಾನ್,ಶರತ್ ಕೆ ಪೂಜಾರಿ,ದೀಪಿಕಾ,ಪವಿತ್ರ ಚೇತನ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.ಅಕ್ಷತಾ ಸುಧೀರ್ ಪ್ರಾರ್ಥನೆ ಹಾಡಿದರು.ಘಟಕಾಧ್ಯಕ್ಷ ಪ್ರಸಾದ್ ಕುಮಾರ್ ಕಲ್ಲಾಜೆ ಸ್ವಾಗತಿಸಿದರು. ಕಾರ್ಯದರ್ಶಿ ಧನುಷ್ ಘಟಕದ 2024-25 ನೇ ಸಾಲಿನ ವಾರ್ಷಿಕ ವರದಿಯನ್ನು ವೀಡಿಯೋ ಮೂಲಕ ಸಭೆಗೆ ಮಂಡಿಸಿದರು.ನೂತನ ಕಾರ್ಯದರ್ಶಿ ಸಂತೋಷ್ ಪೂಜಾರಿ ಧನ್ಯವಾದವಿತ್ತರು.

Related posts

ಕೊಯ್ಯೂರು ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಮುಂಡಾಜೆ ಕೀರ್ತನ ಕಲಾತಂಡದಿಂದ ‘ಆಟಿಡೊಂಜಿ ಐತಾರಾ’ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ ಕಾಪು ಉಪ್ಪರಡ್ಕ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ಜಾತ್ರೆ

Suddi Udaya

ಭತ್ತದ ತಳಿಗಳ ಸಂರಕ್ಷಕ ಬಿ.ಕೆ. ದೇವ ರಾವ್‌ಗೆ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ

Suddi Udaya

ಭಜನಾ ಪರಿಷತ್ ಲಾಯಿಲ ವಲಯದ ಅಧ್ಯಕ್ಷರಾಗಿ ಪಿ. ಚಂದ್ರಶೇಖರ ಸಾಲ್ಯಾನ್, ಕಾರ್ಯದರ್ಶಿಯಾಗಿ ಅಖಿಲೇಶ್ ಚಂದ್ಕೂರು, ಕೋಶಾಧಿಕಾರಿಯಾಗಿ ದಿನೇಶ್ ಜಾನ್ಲಪು

Suddi Udaya

ಬೆಳ್ತಂಗಡಿ: ಧ.ಮಂ.ಆಂಗ್ಲ ಮಾಧ್ಯಮ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಬ್ ಬುಲ್ ಬುಲ್ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರಶಸ್ತಿ

Suddi Udaya
error: Content is protected !!