July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉರುವಾಲು ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕುಣಿತಾ ಭಜನಾ ಉದ್ಘಾಟನೆ

ಕೊರಿಂಜ :ಕೊರಿಂಜ ಉರುವಾಲು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕುಣಿತ ಭಜನಾ ಉದ್ಘಾಟನಾ ಕಾರ್ಯಕ್ರಮವು ಶ್ರೀ ಕ್ಷೇತ್ರದ ಸಹ ಆಡಳಿತ ಮೋಕ್ತೇಸರ ಸೇಸಪ್ಪ ರೈ ಕೊರಿಂಜ ಇವರು ಉದ್ಘಾಟಿಸಿ ಮಾತನಾಡಿ ದೇವಸ್ಥಾನದಲ್ಲಿ ಕುಣಿತ ಭಜನಾ ಉದ್ಘಾಟನೆ ಆಗಿರುವುದರಿಂದ ಒಳ್ಳೆಯ ಪೂರಕ ವಾತಾವರಣ ನಿರ್ಮಾಣವಾಗಿದೆ. ಭಜನೆಯಿಂದ ವಿಭಜನೆ ಇಲ್ಲ ಎಂಬ‌ ನುಡಿಯಂತೆ ಪ್ರತಿಯೊಬ್ಬರು ಕೂಡ ನಮ್ಮ ಧರ್ಮವನ್ನು ಉಳಿಸಲು ಭಜನೆಯಿಂದ ಸಾಧ್ಯವಿದೆ ಎಂದರು.

ಕುಣಿತ ಭಜನಾ ತರಬೇತಿಯ ಗುರುಗಳಾದ ನಾಗೇಶ ಬಿ‌ ನೆರಿಯ ಪ್ರಾಸ್ತಾವಿಕವಾಗಿ ಮಾತನಾಡಿ ಇಂದಿನ ಯುಗದಲ್ಲಿ ಭಜನೆಯಿಂದ ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಧರ್ಮ ಇವುಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ತಾವೆಲ್ಲರೂ ಪ್ರತಿದಿನ ಮನೆಗಳಲ್ಲಿ ಭಜನೆಯನ್ನು ಮಾಡಬೇಕೆಂದು ತಿಳಿಸಿದರು.

ವೇದಿಕೆಯಲ್ಲಿ ಭಜನಾ ತರಬೇತುದಾರರಾದ ಅಭಿಷೇಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಮೇಲ್ವಿಚಾರಕಿ ಶ್ರೀಮತಿ ವಾರಿಜ ವಿ ಶೆಟ್ಟಿ ಉಪಸ್ಥಿತರಿದ್ದರು.

ಚಿಣ್ಣರ‌ ಬಳಗ ಭಜನಾ ತಂಡದ ಸದಸ್ಯರಾದ ಜ್ಞಾನೇಶ್ ಆಳ್ವ ಕೊರಿಂಜ ಪ್ರಾರ್ಥಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉರುವಾಲು ವಿಭಾಗದ ಸೇವಾ ಪ್ರತಿನಿಧಿ ಸೀತಾರಾಮ ಆಳ್ವ ಕೊರಿಂಜ ನಿರೂಪಿಸಿ ಹಾಗೂ ವಂದಿಸಿದರು. ಈ‌ ಸಂದರ್ಭದಲ್ಲಿ ಸತ್ಯನಾರಾಯಣ ಭಜನಾ ಮಂಡಳಿ ಸದಸ್ಯ ಗಣೇಶ ಗೌಡ ಬನಾರಿ‌ ಹಾಗೂ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಸದಸ್ಯ ಪ್ರದೀಪ್ ನಾಯ್ಕ ಸಹಕರಿಸಿದರು.

Related posts

ಉಜಿರೆ ರಬ್ಬರ್ ಸೊಸೈಟಿಗೆ ಅಪೋಲೋ ಗೋಲ್ಡ್ ಪಾರ್ಟ್ನರ್ ಅವಾರ್ಡ್

Suddi Udaya

ಸುಮಾರು 700 ವರ್ಷಗಳ ಇತಿಹಾಸ ಹೊಂದಿದ್ದ ತೆಕ್ಕಾರಿನ ಶ್ರೀಗೋಪಾಲಕೃಷ್ಣ ದೇವರಿಗೆ ನೂರೈವತ್ತು ವರ್ಷಗಳ ನಂತರ ಬಾಲಾಲಯದಲ್ಲಿ ಪ್ರಥಮ ಪೂಜೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಚಿದಾನಂದ ಇಡ್ಯ, ಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ ಆಯ್ಕೆ

Suddi Udaya

ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ನಿಧಿ ವಿತರಣೆ

Suddi Udaya

ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲು

Suddi Udaya

ಶಿಶಿಲ ಸೃಷ್ಟಿ ಸಂಜೀವಿನಿ ಒಕ್ಕೂಟದ ವತಿಯಿಂದ ಆಟಿಡೊಂಜಿ ದಿನ

Suddi Udaya
error: Content is protected !!