September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮದ್ದಡ್ಕ ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ – ಟಿಆರ್‌ಎಮ್ ಮದ್ದಡ್ಕ ಇದರ ಮಹಾಸಭೆಯು ಮುರ್ಶಿದುಲ್ ಅನಾಮ್ ಅರೆಬಿಕ್ ಮದರಸ ಆಲಂದಿಲದಲ್ಲಿ ಜರುಗಿತು.


ನೂರುಲ್ ಹುದಾ ಜುಮಾ ಮಸ್ಜಿದ್ ಅಧ್ಯಕ್ಷ ಅಶ್ರಫ್ ಚಿಲಿಂಬಿ ಅದ್ಯಕ್ಷತೆ ವಹಿಸಿದ್ದರು. ಉಸ್ಮಾನ್ ಸಖಾಫಿ ಆರಂಭಿಕ ದುಆ ನೆರವೇರಿಸಿದರು. ಈ ವೇಳೆ 2025-26 ನೇ ಸಾಲಿಗೆ ಪದಾಧಿಕಾರಿಗಳನ್ನು ಆರಿಸಲಾಯಿತು.


ಅಧ್ಯಕ್ಷರಾಗಿ ರಾಝಿಯುದ್ದಿನ್ ಸಬರಬೈಲ್, ಉಪಾಧ್ಯಕ್ಷರಾಗಿ ರಿಯಾಝ್ ಆಲಂದಿಲ ಮತ್ತು ಇಸ್ಮಾಯಿಲ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ರವೂಫ್, ಕಾರ್ಯದರ್ಶಿಯಾಗಿ ಮುಸ್ತಫ ಮತ್ತು ಜಮಾಲುದ್ದೀನ್ ಲತ್ವೀಫಿ, ಕೋಶಾಧಿಕಾರಿಯಾಗಿ ಉಸ್ಮಾನ್ ಹಾಜಿ ಆಲಂದಿಲ, ಲೆಕ್ಕ ಪರಿಶೋಧಕರಾಗಿ ಹಾಜಿ ಉಮರ್ ಮಾಸ್ಟರ್ ಆಯ್ಕೆಯಾದರು.


ಸಭೆಯಲ್ಲಿ ನೂರುಲ್ ಹುದಾ ಜುಮಾ ಮಸ್ಜಿದ್ ಖತೀಬ್ ಹಾಫಿಳ್ ಮುಈನುದ್ದೀನ್ ಅಮ್ಜದಿ ಇವರ ನೇತೃತ್ವದಲ್ಲಿ ಸಯ್ಯಿದ್ ಕೂರತ್ ತಂಙಳ್ ಅನುಸ್ಮರಣೆ ನಡೆಸಲಾಯಿತು. ಸಲಹಾ ಸಮೀತಿಯ ಸದಸ್ಯರಾದ ರಾಝಿಯುದ್ದೀನ್ ಸಬರಬೖಲ್, ಅಬ್ಬೋನು ಮದ್ದಡ್ಕ, ಉಸ್ಮಾನ್ ಹಾಜಿ ಆಲಂದಿಲ, ಅಶ್ರಫ್ ಚಿಲಿಂಬಿ, ಹಾಜಿ ಉಮರ್ ಮಾಸ್ಟರ್ ಮದ್ದಡ್ಕ, ಮುಹಮ್ಮದ್ ರಫೀಕ್ ಚಿಲಿಂಬಿ, ಎಂ. ಹೆಚ್. ಅಬೂಬಕ್ಕರ್ ಕಿನ್ನಿಗೋಳಿ, ಹೆಚ್. ಎಂ. ಹಸನಬ್ಬ ಚಿಲಿಂಬಿ, ಎಂ ಉಮರಬ್ಬ (ಯು. ಆರ್.) ಎಂ ಹೈದೆರ್ ಹಾಜಿ ಮದ್ದಡ್ಕ ಉಪಸ್ಥಿತರಿದ್ದರು. ನೂರುಲ್ ಹುದಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಎಂ. ಬದ್ರುದ್ದೀನ್ ಮದ್ದಡ್ಕ ಇವರು ಸಂಸ್ಥೆಗೆ ಶುಭ ಹಾರೈಸಿದರು.

Related posts

ಇಂದಿನಿಂದ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವ: ಸಂಜೆ ಹೊರೆಕಾಣಿಕೆ ವೈಭವ ಹಾಗೂ ಒಂದು ಸಾವಿರ ಅಧಿಕ ಮಕ್ಕಳಿಂದ ನೃತ್ಯ ಭಜನೆ

Suddi Udaya

ಬಂದಾರು : ಪೆರ್ಲ -ಬೈಪಾಡಿಯಲ್ಲಿ ನೂತನ ಶಾಖಾ ಅಂಚೆ ಕಚೇರಿ ಉದ್ಘಾಟನೆ

Suddi Udaya

ಮುಳಿಯದಲ್ಲಿ ಡೈಮಂಡ್ ಫೆಸ್ಟ್ ಗೆ ಚಾಲನೆ : -ವಿಶಿಷ್ಟ ವಿನೂತನ ವಜ್ರಾಭರಣ ಖರೀದಿಗೆ ಸುಮಧುರ ಅವಕಾಶ

Suddi Udaya

ಎಸ್.ಡಿ.ಎಂ. ಐಟಿಐ ವೇಣೂರಿನಲ್ಲಿ ಕ್ಯಾಂಪಸ್ ಸಂದರ್ಶನ

Suddi Udaya

ತೋಟತ್ತಾಡಿ: ಚಿಬಿದ್ರೆ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ನೂತನ ಪದಾಧಿಕಾರಿಗಳ ಸಮಿತಿ ರಚನೆ

Suddi Udaya

ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ನಿಡ್ಲೆ ಬಿ.ಎಸ್. ಎನ್.ಎಲ್ ಟವರ್: ನೆಟ್ವರ್ಕ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾದ ಗ್ರಾಹಕರು

Suddi Udaya
error: Content is protected !!