September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಮನಃಶಾಸ್ತ್ರ ವಿಭಾಗದಿಂದ ಕಾರ್ಯಾಗಾರ


ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಧರ್ಮಸ್ಥಳದಲ್ಲಿ ಮನೋವಿಜ್ಞಾನ ವಿಭಾಗ
ಎಸ್‌ಡಿಎಂ ಕಾಲೇಜು ಉಜಿರೆ (ಸ್ವಾಯತ್ತ) ಇದರ ಸಂಯುಕ್ತ ಆಶಯದೊಂದಿಗೆ ಸ್ವಾಸ್ಥ್ಯ ಮನಸ್ ಶಿಕ್ಷಾ ಎಂಬ ಶೀರ್ಷಿಕೆ ಅಡಿಯಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರದ ಸಂಘಟಕರಾದ ಶ್ರೀಮತಿ ಪದ್ಮಶ್ರೀ. ಕೆ ಸಹಾಯಕ ಪ್ರಾಧ್ಯಾಪಕರು ಮನೋವಿಜ್ಞಾನ ವಿಭಾಗ
ಎಸ್‌ಡಿಎಂ ಕಾಲೇಜು ಉಜಿರೆ (ಸ್ವಾಯತ್ತ) ಇವರು ಆಗಮಿಸಿದ್ದರು. ಇವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮನೋವಿಜ್ಞಾನ ವಿಭಾಗ ಎಸ್‌ಡಿಎಂ ಕಾಲೇಜು ಉಜಿರೆ ಇಲ್ಲಿನ ವಿದ್ಯಾರ್ಥಿಗಳು ಈ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಕಾರ್ಯಗಾರದಲ್ಲಿ ವಿದ್ಯಾರ್ಥಿಗಳ ಮನಸ್ಸಿನ ಹಿಡಿತ, ಓದಿನ ಕಡೆಗಿನ ಗಮನ ,ಸಮಯದ ಸದುಪಯೋಗ ಹಾಗೂ ಅದನ್ನ ಉಪಯೋಗಿಸುವ ಕಲೆ, ಜೊತೆಗೆ ವಿದ್ಯಾರ್ಥಿಗಳ ಸಾಧನೆಗೆ ಇರುವ ವಿವಿಧ ದಾರಿಗಳು ಇತ್ಯಾದಿಗಳ ಕುರಿತಾಗಿ ಹಲವಾರು ಉದಾಹರಣೆ, ಚಟುವಟಿಕೆ ಇತ್ಯಾದಿಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಈ ಕಾರ್ಯಕ್ರಮದ ಕುರಿತಾಗಿ ಹಾಗೂ ಇದರ ಅಗತ್ಯತೆಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. . ಶಾಲಾ ವಿದ್ಯಾರ್ಥಿನಿ ಕುಮಾರಿ ನಿವೇದ್ಯಯ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕುಮಾರಿ ತನ್ವಿ ಸ್ವಾಗತಿಸಿ, ವಿಜಯ್ ಸಂಘಟಕರ ಕಿರುಪರಿಚಯವನ್ನು ನೀಡಿ ಕುಮಾರಿ ಸಿಂಧೂರ ಧನ್ಯವಾದವಿತ್ತರು.

Related posts

ಶ್ರಮದಾನದ ಮೂಲಕ ಐತನಡ್ಕ ಸೇತುವೆ ಪರಿಸರ ಸ್ವಚ್ಛಗೊಳಿಸಿದ ಗ್ರಾಮಸ್ಥರು-ಪೊದೆಗಳಿಂದ ಸಂಚಾರಕ್ಕೆ ಉಂಟಾಗಿದ್ದ ತೊಂದರೆ ನಿವಾರಣೆ-ಸಾರ್ವಜನಿಕರಿಂದ ಮೆಚ್ಚುಗೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ 666ನೇ ವಾತ್ಸಲ್ಯ ಮನೆ ಹಸ್ತಾಂತರ ಹಾಗೂ ಮಾಸಾಶನ ಜನಮಂಗಳ ಕಾರ್ಯಕ್ರಮ: ಪರೋಪಕಾರ ಮತ್ತು ಭಕ್ತಿಯ ಭಗವಂತನ ಆರಾಧನೆಯಿಂದ ಜೀವನ ಪಾವನ: ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು

Suddi Udaya

ವೇಣೂರು: ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಮಂತ್ರಿ ಮಂಡಲ ರಚನೆ

Suddi Udaya

ಬ್ರೈಟ್ ಹೊರೈಝನ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ‘ವಿಂಗ್ಸ್ ಆಫ್ ವಿಸ್ಡಮ್’ ವೇದಿಕೆ

Suddi Udaya

ಸುಲ್ಕೇರಿಮೊಗ್ರು ಹಿ.ಪ್ರಾ. ಶಾಲೆಯ ನೀರಿನ ನಳ್ಳಿಗಳನ್ನು ತುಂಡರಿಸಿದ ಕಿಡಿಗೇಡಿಗಳು

Suddi Udaya

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅನಾರು-ಪಟ್ರಮೆ ಇದರ 2024ರ ಕ್ಯಾಲೆಂಡರ್ ಬಿಡುಗಡೆ

Suddi Udaya
error: Content is protected !!