ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಕಾಮರ್ಸ್ ಕ್ಯಾಂಪಸ್ ಅಸೋಸಿಯೇಶನ್ ಉದ್ಘಾಟನೆ

ಉಜಿರೆ: ಜೀವನದಲ್ಲಿ ದೊಡ್ಡ ಸ್ಥಾನಕ್ಕೆ ನಾವು ಹೋಗಬಯಸುವುದಾದರೆ, ನಮ್ಮಲ್ಲಿ ದೊಡ್ಡ ಕನಸಿರಬೇಕು, ಜೊತೆಗೆ ನಮ್ಮ ಗುರಿಯತ್ತ ಮುನ್ನಡೆಸುವುದಕ್ಕೆ ಉತ್ತಮ ಗುರು ಇರಬೇಕು” ಎಂದು ನಟ ಹಾಗೂ ಬೆಂಗಳೂರಿನ ಎಸ್ ಜಿ ಅಡ್ವೈಸರಿ ಸರ್ವೀಸಸ್ ನ ಪ್ರಾಕ್ಟೀಸಿಂಗ್ ಕಂಪನಿ ಸೆಕ್ರೆಟರಿ, ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿ ಗಣೇಶ್ ಶೆಣೈ ಹೇಳಿದರು.

ಕಾಲೇಜಿನಲ್ಲಿ ಇಂದು (ಜು.30) ಅವರು ಕಾಮರ್ಸ್ ಕ್ಯಾಂಪಸ್ ಅಸೋಸಿಯೇಶನ್ (ಸಿಸಿಎ) ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಾಲೇಜಿನ ವಾಣಿಜ್ಯ ವಿಭಾಗ ಮತ್ತು ವ್ಯವಹಾರ ಆಡಳಿತ ವಿಭಾಗದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

“ಸಾಧನೆಗೆ ಅವಕಾಶಗಳು ಎಂದಿಗೂ ಕಡಿಮೆಯಾಗುವುದಿಲ್ಲ. ಯಾವುದು ನಿಮ್ಮ ಕ್ಷೇತ್ರವೋ ಅದರಲ್ಲಿ ನೀವು ಬೆಳೆಯಬಹುದು. ಆದರೆ ಎಲ್ಲದಕ್ಕೂ ಕೂಡ ನೀವು ಪಡುವ ಶ್ರಮ, ಶ್ರದ್ಧೆ ಮಾತ್ರ ಬಹಳ ದೊಡ್ಡ ಪಾತ್ರವಹಿಸುತ್ತದೆ. ಗುರಿಯ ಬಗ್ಗೆ ಸ್ಪಷ್ಟತೆ, ಗುರುವಿನ ಮಾರ್ಗದರ್ಶನವಿದ್ದರೆ ಯಶಸ್ಸು ಸಾಧ್ಯ” ಎಂದು ಅವರು ಕಿವಿಮಾತು ಹೇಳಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., “ಕಲಿಕೆಗೆ ಪೂರಕವಾದ ಎಲ್ಲಾ ಸೌಲಭ್ಯಗಳು ಇಂದು ವಿದ್ಯಾರ್ಥಿಗಳಿಗೆ ಸುಲಭವಾಗಿ ಲಭ್ಯವಿದೆ. ಇದನ್ನೆಲ್ಲಾ ಬಳಸಿಕೊಂಡು ಯಾವ ರೀತಿ ಜ್ಞಾನವನ್ನು ಪಡೆದುಕೊಳ್ಳಬೇಕು ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಇದರ ಜೊತೆಗೆ ಇರುವ ಜ್ಞಾನವನ್ನು ಯಾವ ರೀತಿ ಎಲ್ಲಿ ಬಳಸಬೇಕು ಎನ್ನುವುದನ್ನು ಸರಿಯಾಗಿ ತಿಳಿದುಕೊಂಡು ವಿದ್ಯಾರ್ಥಿಗಳು ಮುನ್ನಡೆಯಬೇಕಿದೆ” ಎಂದರು.


ವಿಭಾಗದ ಭಿತ್ತಿಪತ್ರಿಕೆ ‘ವಣಿಕ’ ಬಿಡುಗಡೆಗೊಳಿಸಲಾಯಿತು. ವಾಣಿಜ್ಯ ನಿಕಾಯದ ಡೀನ್ ಶಕುಂತಳಾ ಅವರು ಸಿ ಸಿ ಎ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ., ಸಿಸಿಎ ಸಂಯೋಜಕರಾದ ಫಾತಿಮಾ ಸಫೀರಾ, ಗುರುರಾಜ್ ಮತ್ತು ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.

Related posts

ಬೆಳಾಲು: ರೈತರ ಸದಸ್ಯತ್ವ ನೋಂದಾವಣೆ ಮತ್ತು ರೈತರಿಗೆ ಮಾಹಿತಿ ಕಾರ್ಯಕ್ರಮ

Suddi Udaya

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಸಮ್ಮರ್ ಪ್ಯಾರಡೈಸ್ ಸಮಾರೋಪ ಸಮಾರಂಭ

Suddi Udaya

ಧರ್ಮಸ್ಥಳಕ್ಕೆ ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯ ಎಂ.ಬಿ.ಎ. ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ

Suddi Udaya

ನ.4: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶಾಲೆಗಳಿಗೆ ಪೀಠೋಪಕರಣಗಳ ಸಾಗಾಟ ವಾಹನಗಳ ಚಾಲನೆ

Suddi Udaya

ವಿ.ಎ.ಓ ಪರೀಕ್ಷೆ : ವಿದ್ಯಾಮಾತಾದಿಂದ ಉಚಿತ ತರಬೇತಿ ಕಾರ್ಯಾಗಾರ

Suddi Udaya

ನೆರಿಯದಲ್ಲಿ ಹಿಂದೂ ರುದ್ರಭೂಮಿಗಾಗಿ ಗ್ರಾಮಸ್ಥರ ಪ್ರತಿಭಟನೆ: ಮೃತದೇಹವನ್ನು ಪಂಚಾಯತ್ ಎದುರಿನಲ್ಲಿಟ್ಟು ಪ್ರತಿಭಟನೆಗೆ ಸಿದ್ದತೆ: ಸ್ಥಳಕ್ಕೆ ತಹಶೀಲ್ದಾರರು ಬರಬೇಕು,ಇಂದೇ ಹಿಂದೂ ರುದ್ರಭೂಮಿಗೆ ಸ್ಥಳ ಮಂಜೂರುಗೊಳಿಸಬೇಕೆಂದು ಒತ್ತಾಯ

Suddi Udaya
error: Content is protected !!