September 6, 2026
ಅಪಘಾತಗ್ರಾಮಾಂತರ ಸುದ್ದಿವರದಿಸಮಸ್ಯೆ

ಶಿಶಿಲದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಬಂಡಿಹೊಳೆ ಕೆಮ್ಮಣ್ಣು ಎಂಬಲ್ಲಿ ಬರೆ ಜರಿದು ರಸ್ತೆ ಬಂದ್

ಶಿಶಿಲ: ಇಂದು (ಆ. 5)ಸಂಜೆ ಪ್ರಾರಂಭವಾದ ಮಳೆ ಎಡೆಬಿಡದೆ ಬರುತ್ತಿದ್ದು ಶಿಶಿಲ ಪರಿಸರದಲ್ಲಿ ಆತಂಕದ ಸನ್ನಿವೇಶ ನಿರ್ಮಾಣವಾಗಿದೆ.ಶಿಶಿಲೇಶ್ವರ ದೇವಸ್ಥಾನದೊಳಗೆ ನೀರು ನುಗ್ಗಿ ಪರಿಸ್ಥಿತಿ ಹದಗೆಟ್ಟಿರುತ್ತದೆ. ಬಂಡಿಹೊಳೆ ಕೆಮ್ಮಣ್ಣು ಎಂಬಲ್ಲಿ ಬರೆ ರಸ್ತೆಗೆ ಜರಿದು ಅರಸಿನಮಕ್ಕಿ- ಶಿಶಿಲ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.

ಬರ್ಗುಳ ಎಂಬಲ್ಲಿ ಅರಣ್ಯದಿಂದ ಬರುವ ನೀರು ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿ ಹೊಳೆಯಂತಾಗಿ ವಾಹನ ಸಂಚರಿಸಲು ಆಗದಂತ ಪರಿಸ್ಥಿತಿ ಉಂಟಾಗಿದೆ. ಮುಚ್ಚಿರಡ್ಕ ಕೃಷ್ಣಪ್ಪ ಗೌಡರವರ ಮನೆಯ ಬಳಿ ಗುಡ್ಡ ಜರಿದು ಮನೆಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ರಸ್ತೆ -ಹಳ್ಳ ತೋಡುಗಳು ನೀರಿನಿಂದ ತುಂಬಿವೆ.

ಪರಿಸ್ಥಿತಿಯನ್ನು ನಿಭಾಯಿಸಲು ಗ್ರಾ.ಪಂ. ಅಧ್ಯಕ್ಷ ಸುಧೀನ್, ಶೌರ್ಯ ವಿಪತ್ತು ನಿರ್ವಹಣಾ ತಂಡ, ಗ್ರಾ.ಪಂ ಹಾಗೂ ಗ್ರಾಮಸ್ಥರು ಶ್ರಮಿಸುತ್ತಿದ್ದಾರೆ. ರಸ್ತೆಗೆ ಬಿದ್ದ ಮಣ್ಣನ್ನು ತೆಗೆಯಲು ಹಿಟಾಚಿ ಮೂಲಕ ಪ್ರಯತ್ನಿಸಲಾಗುತ್ತಿದೆ.ಅರಸಿನಮಕ್ಕಿಯಿಂದ ಬೂಡುಮುಗೇರು ಕಡೆ ಬರುವಲ್ಲಿ ಕೂಡಾ ಬರೆ ಜರಿದು ರಸ್ತೆಗೆ ಮಣ್ಣು ಬಿದ್ದಿದ್ದೆ. ಪಟ್ರಮೆ ಮಸೀದಿ ಬಳಿ ನದಿ ನೀರು ರಸ್ತೆಗೆ ಬಂದಿರುತ್ತದೆ. ಮಣಿಯೇರು ರಸ್ತೆ, ಕೂಟೇಲು ಬಳಿ ನೀರು ತುಂಬಿ ಸಂಪರ್ಕ ಕಡಿದಿದೆ.

Related posts

ಬಳಂಜ ಒಕ್ಕೂಟದ ವತಿಯಿಂದ ಬಳಂಜ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ

Suddi Udaya

ಬೆಳ್ತಂಗಡಿ, ಪುತ್ತೂರು ಮತ್ತು ಬಂಟ್ವಾಳದ ಹಲವು ಕಡೆ ಎನ್‌ಐಎ ದಾಳಿ

Suddi Udaya

ಬೆಳ್ತಂಗಡಿ: ಸರಕಾರಿ ಆಸ್ಪತ್ರೆಯಲ್ಲಿ ಹಜ್ ಯಾತ್ರಾರ್ಥಿಗಳಿಗೆ ವೈದ್ಯಕೀಯ ತಪಾಸಣೆ

Suddi Udaya

ಉಜಿರೆ ಅನುಗ್ರಹ ಕಾಲೇಜಿನಲ್ಲಿ ಅನುಖ -2025 ರ ಸಂಭ್ರಮಾಚರಣೆ

Suddi Udaya

ಮಾಲಾಡಿ: ಕೊಲ್ಪೆದಬೈಲ್ ಉಮೇಶ್ ಶೆಟ್ಟಿಯವರ ಮನೆಯಲ್ಲಿ ಪ್ರೇತ ಬಾಧೆ: ಬೆಂಕಿ ಹಿಡಿದು ಉರಿಯುವ ಬಟ್ಟೆ-ನೆಲಕ್ಕೆ ಬೀಳುತ್ತಿರುವ ಪಾತ್ರೆ ಬಟ್ಟಲು; ಮನೆಯವರಲ್ಲಿ ಆತಂಕ ಸೃಷ್ಟಿ

Suddi Udaya
error: Content is protected !!