September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ತೆಂಕಕಾರಂದೂರು: ಅಕ್ರಮ ಮರಳು ಸಾಗಟ: ಆರೋಪಿ ಸಹಿತ ಪಿಕಪ್ ವಾಹನ ವಶ

ತೆಂಕಕಾರಂದೂರು : ತೆಂಕಕಾರಂದೂರು ಗ್ರಾಮದ ಗಿಂಡಾಡಿ ಎಂಬಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವಾಹನವನ್ನು ವೇಣೂರು ಪೊಲೀಸರು ವಶಪಡಿಸಿಕೊಂಡ ಘಟನೆ ಆ. 9 ರಂದು ಬೆಳಿಗ್ಗೆ ನಡೆದಿದೆ.

ಆ. 09 ರಂದು ವೇಣೂರು ಪೊಲೀಸ್ ಠಾಣೆಯ ಕೃಷ್ಣ ಕೆ.ಬಿ , ರವರು ಬೀಟ್‌ ವ್ಯಾಪ್ತಿಯ ಗ್ರಾಮದಲ್ಲಿ ಕರ್ತವ್ಯದಲ್ಲಿರುವ ಸಮಯ ತೆಂಕಕಾರಂದೂರು ಗ್ರಾಮದ ಗಿಂಡಾಡಿ ಎಂಬಲ್ಲಿ ಗಿಂಡಾಡಿ- ಪೆರೊಡಿತ್ತಾಯ ಕಟ್ಟೆ ಸಾರ್ವಜನಿಕ ರಸ್ತೆಯಲ್ಲಿ ಗಿಂಡಾಡಿ ಕಡೆಯಿಂದ ಪೆರೊಡಿತ್ತಾಯಕಟ್ಟೆ ಕಡೆಗೆ ಪಿಕಪ್‌ ವಾಹನ ನಂಬ್ರ KA19 AA 2615 ನೇದರಲ್ಲಿ ಮರಳು ಸಾಗಾಟ ಮಾಡುತ್ತಿರುವುದನ್ನು ಕಂಡು ವಾಹನವನ್ನು ತಡೆದು ನಿಲ್ಲಿಸಿ ಆರೋಪಿ ಪಿಕಪ್‌ ವಾಹನ ಚಾಲಕ ತೆಂಕಕಾರಂದೂರು ಹುಲಿಯಡಿ ಮನೆ ನಿವಾಸಿ ಆರೀಸ್‌ (30) ನಲ್ಲಿ ಯಾವುದೇ ದಾಖಲೆ/ಪರವಾನಿಗೆ ಇರುವುದಿಲ್ಲವಾಗಿಯೂ ಅಲ್ಲದೇ ಸದ್ರಿ ಮರಳನ್ನು ತೆಂಕಕಾರಂದೂರು ಗ್ರಾಮದ ಗಿಂಡಾಡಿ ಡ್ಯಾಂ ಬಳಿ ಹರಿಯುವ ನದಿಯಿಂದ ತುಂಬಿಸಿ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿ ತಪ್ಪೊಪ್ಪಿಕೊಂಡಿದ್ದು, ಸದ್ರಿ ವಾಹನವನ್ನು ಪರಿಶೀಲಿಸಲಾಗಿ ಇದರಲ್ಲಿ ಸುಮಾರು 40 ಬುಟ್ಟಿ ಮರಳು ಇದ್ದು ಅದರ ಅಂದಾಜು ಮೌಲ್ಯ ರೂ 2,500/- ಹಾಗೂ ಸಾಗಾಟಕ್ಕೆ ಬಳಸಿದ ವಾಹನದ ಅಂದಾಜು ಮೌಲ್ಯ ರೂ 2 ಲಕ್ಷ ಗಳಾಗಿರಬಹುದು. ಈ ಬಗ್ಗೆ ಪ್ರಕರಣ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಆಂಬುಲೆನ್ಸ್ ಚಾಲಕರಿಗೆ ಸನ್ಮಾನ

Suddi Udaya

ಉಜಿರೆಯಿಂದ ಬೆಳಾಲು ಕೊಯ್ಯೂರು ಕೆಎಸ್ಆರ್ ಟಿ. ಸಿ ಬಸ್ ಸಂಚಾರ ಉದ್ಘಾಟನೆ

Suddi Udaya

ಬಳಂಜ ಅಭಿಮಾನಿ ಬಳಗದಿಂದ ಮಾಜಿ ಶಾಸಕ ವಸಂತ ಬಂಗೇರರಿಗೆ ಸಾರ್ವಜನಿಕ ನುಡಿನಮನ

Suddi Udaya

ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಖರೀದಿಯ ಮೇಲೆ ಶೇ.20 ಸ್ಪೆಷಲ್ ಡಿಸ್ಕೌಂಟ್ ಆಫರ್

Suddi Udaya

ತೆಂಕಕಾರಂದೂರು: ಹಿಂದೂ ಸಂಗಮ ಬಳಂಜ ಮಂಡಲ ಆಮಂತ್ರಣ ಪತ್ರಿಕೆ ಬಿಡುಗಡೆ: ಜ 25 ಬಳಂಜ ಮಂಡಲದಿಂದ ಬೃಹತ್ ಹಿಂದೂ‌‌ ಸಂಗಮ ಶೋಭಾಯಾತ್ರೆ

Suddi Udaya

ಶಾಸಕ ಹರೀಶ್ ಪೂಂಜರಿಗೆ ಕರ್ನಾಟಕ ಟಿವಿ “ಲೀಡರ್ ಅವಾರ್ಡ್ಸ್”

Suddi Udaya
error: Content is protected !!