September 6, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿರಾಜಕೀಯವರದಿ

ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆ ದೌರ್ಜನ್ಯ ಮಾಡಿದರೆ ಭಾರತೀಯ ಜನತಾ ಪಾರ್ಟಿ ಸುಮ್ಮನಿರುವುದಿಲ್ಲ: ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರದ ಅಸ್ತಿತ್ವಕ್ಕೆ ಕೊಡಲಿ ಏಟು ಕೊಡುವಂತಹ ಎಡಪಂತೀಯ ವಿಚಾರಧಾರೆಯ ಮಾನಸಿಕತೆಗೆ ಖಂಡನೆ: ಎಸ್.ಐ.ಟಿ ತನಿಖೆಯ ಹಂತದಲ್ಲಿ ಒಬ್ಬ ಜನಪ್ರತಿನಿಧಿಯಾಗಿ ತನಿಖೆಗೆ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ: ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಹೇಳಿಕೆ

ಉಜಿರೆ: ಎಸ್.ಐ.ಟಿ ತನಿಖೆಯ ಹಂತದಲ್ಲಿ ಒಬ್ಬ ಜನ ಪ್ರತಿನಿಧಿಯಾಗಿ ತನಿಖೆಗೆ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಆದರೆ ಇತ್ತೀಚಿಗೆ ಧರ್ಮಸ್ಥಳದಲ್ಲಿ ನಡೆದಿರುವಂತಹ ಗಲಾಟೆಯಲ್ಲಿ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ವೈಫಲ್ಯವನ್ನು ಮಾಡಿರುತ್ತಾರೆ ಎಂದು ಶಾಸಕ ಹರೀಶ್ ಪೂಂಜ ಆಪಾದಿಸಿದರು.

ಅವರು ಆ.9ರಂದು ಉಜಿರೆಯ ಓಷಿಯನ್ ಪರ್ಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಮಾಜದ ಸ್ವಾಸ್ತ್ಯವನ್ನು ಕಾಪಾಡುವಂತ ನಿಟ್ಟಿನಲ್ಲಿ ಸುಮೋಟೋ ಕೇಸ್ ಹಾಕುವಂತಹ ಜವಾಬ್ದಾರಿ ಇರುವಂತಹದ್ದು ಪೊಲೀಸ್ ಇಲಾಖೆಗೆ. ಆದರೆ ಪೊಲೀಸ್ ಇಲಾಖೆ ಇವತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸುಮೋಟೋ ಕೇಸ್ ಹಾಕುತ್ತಿಲ್ಲ ಎಂಬುವುದು ನನ್ನ ಆಪಾದನೆ.ಸುಮೋಟೋ ಕೇಸ್ ಗಳು ಹಾಕಬೇಕಾದಂತಹ ಸಂದರ್ಭ ಬಂದಾಗ ಬಿಜೆಪಿಯ ಹಿಂದೂ ಕಾರ್ಯಕರ್ತರ ಮೇಲೆ ವಿನಾ: ಕಾರಣ ಮೊಕದ್ದಮೆಗಳನ್ನು ಹಾಕಿ, ಅವರ ಮನೆ ಮನೆಗೆ ತೆರಳಿ ಅವರಿಗೆ ಹಿಂಸೆ ನೀಡುವಂತಹ ಪರಿಪಾಠವನ್ನು ಪೊಲೀಸ್ ಇಲಾಖೆ ನಿನ್ನೆಯಿಂದ ಪ್ರಾರಂಭ ಮಾಡಿದ್ದಾರೆ. ಯಾವುದೇ ರೀತಿಯ ಪ್ರಕರಣಗಳಲ್ಲಿ ಭಾಗವಹಿಸದ ನಿರಪರಾಧಿಗಳನ್ನು ಸಿಲುಕಿಸುವಂತಹ ಷಡ್ಯಂತ್ರವನ್ನು ಪೊಲೀಸ್ ಇಲಾಖೆ ಮಾಡಿದರೆ ಖಂಡಿತವಾಗಿಯೂ ಭಾರತೀಯ ಜನತಾ ಪಾರ್ಟಿವಿರೋಧ ವ್ಯಕ್ತಪಡಿಸುತ್ತದೆ ಎಂದರು.

ಇಂದು ಎಡಪಂಥಿಯ ಸಂಘಟನೆಗಳು ಮತ್ತು ಎಸ್.ಡಿ.ಪಿ.ಐ ನಂತಹ ಸಂಘಟನೆಗಳು ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತರ ಹೆಸರು ಕೊಟ್ಟಿದ್ದಾರೆ ಎಂಬ ಮಾತು ಕೇಳಿ, ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆ ದೌರ್ಜನ್ಯ ಮಾಡುವುದಕ್ಕೆ ಬಂದರೆ ಭಾರತೀಯ ಜನತಾ ಪಾರ್ಟಿ ಸುಮ್ಮನಿರುವುದಿಲ್ಲ ಎಂದರು.ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಪ್ರಾಮಾಣಿಕರಿದ್ದಾರೆ. ಅವರು ಈ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಹದ್ದುಬಸ್ತಿಗೆ ತರುವಂತಹ ಪ್ರಾಮಾಣಿಕ ಕೆಲಸವನ್ನು ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ಬಿಜೆಪಿ ಹಿಂದೂ ಕಾರ್ಯಕರ್ತರ ಮೇಲೆ ಯಾವುದೇ ರೀತಿಯಲ್ಲಿ ದೌರ್ಜನ್ಯಗಳು ನಡೆಯದ ರೀತಿಯಲ್ಲಿ ನೀವು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರದ ಅಸ್ತಿತ್ವಕ್ಕೆ ಕೊಡಲಿ ಏಟು ಕೊಡುವಂತಹ ಎಡಪಂತೀಯ ವಿಚಾರಧಾರೆಯ ಮಾನಸಿಕತೆಯನ್ನು ಖಂಡಿಸುತ್ತೇನೆ. ಹಿಂದೂ ಸಮಾಜ ಶ್ರದ್ದೆಯಿಂದ ನಂಬಿಕೊಂಡು ಬಂದಿರುವಂತಹ ಶ್ರದ್ದಾ ಕೇಂದ್ರಗಳ ಮೇಲೆ ಗೂಬೆ ಕೂರಿಸುವಂತಹ ಪ್ರಯತ್ನವನ್ನು ಮಾಡುವುದಕ್ಕೆ ಹೊರಟಿರುವಂತಹ ಯಾವುದೇ ರೀತಿಯ ವ್ಯವಸ್ಥೆಯನ್ನು ನಾವು ಸಹಿಸುವುದಿಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್,ಬಿಜೆಪಿ ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಉಪಸ್ಥಿತರಿದ್ದರು.

Related posts

ರೋಟರಿ ಕ್ಲಬ್ ಬೆಳ್ತಂಗಡಿ : ರಾಷ್ಟ್ರೀಯ ರೈತರ ದಿನ ಆಚರಣೆ

Suddi Udaya

ಯುವಕರು, ಕೃಷಿಕರು, ರೈತರು, ದುಡಿವ ವರ್ಗಕ್ಕೆ ಶಕ್ತಿ ತುಂಬಿದ ರಾಜ್ಯ ಬಜೆಟ್: ಜಿಲ್ಲಾ ಕೆ ಡಿ ಪಿ ಸದಸ್ಯ ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲ

Suddi Udaya

ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಜ.22 : ಧರ್ಮಸ್ಥಳದಲ್ಲಿ‌ ಶುಭಾರಂಭಗೊಳ್ಳಲಿದೆ ಕಸ್ತೂರಿ ವೆರೈಟಿ ಸೆಂಟರ್

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನ ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಶಿರ್ಲಾಲು: ಪೆರಾಲ್ಡಡಿ ತಡೆಗೋಡೆ ಕುಸಿತ

Suddi Udaya
error: Content is protected !!