September 6, 2026
ವರದಿಸಂಘ-ಸಂಸ್ಥೆಗಳು

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ವಾರ್ಷಿಕ ವ್ಯವಹಾರ ರೂ.300 ಕೋಟಿ – ಲಾಭ ರೂ.1.13 ಕೋಟಿ – ಶೇ.16 ಡಿವಿಡೆಂಟ್

ಗೇರುಕಟ್ಟೆ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.10ರಂದು ಸಂಘದ ಸಹಕಾರಿ ಸಭಾಭವನದಲ್ಲಿ ಜರುಗಿತು. ಸಂಘದ ವಸಂತ ಮಜಲು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ ಈ ಸಾಲಿನಲ್ಲಿ ರೂ.300. 34.ಕೋಟಿ ವ್ಯವಹಾರ ನಡೆಸಿ, ರೂ.1.13 ಕೋಟಿ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.16ಡಿವಿಡೆಂಡ್ ನೀಡುವುದಾಗಿ ಪೋಷಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ , ನಿರ್ದೇಶಕರಾದ ಹರಿದಾಸ್ ಪಡಂತ್ತಾಯ, ಬಾಲಕೃಷ್ಣ ಬಿರ್ಮೊಟ್ಟು, ಉದಿತ್, ಕೇಶವ ಪೂಜಾರಿ, ಗೋಪಾಲ ಬನ, ಲೋಕೇಶ್, ಕುಶಾಲಪ್ಪ ಗೌಡ, ಮಮತಾ, ಚಂದ್ರಾವತಿ ಹಾಗೂ ಸಂಘದ ಸರ್ವ ಸದಸ್ಯರು, ಡಿ.ಸಿ.ಸಿ. ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.

ಅತಿ ಹೆಚ್ಚು ಪೈಪ್ ಬಿಡಿ ಭಾಗಗಳನ್ನು ಖರೀದಿಸಿದ ಸಂಘದ ಸದಸ್ಯರಾದ ಅನುದೀಪ್, ಲಕ್ಷ್ಮಿ, ಶೀಲಾ, ಶಿವರಾಮ ಮಡಿವಾಳ, ಲೀಲಾವತಿ, ಶಿವರಾಮ, ಅತಿ ಹೆಚ್ಚು ರಸಗೊಬ್ಬರ ಖರಿದಿ ಪೆಲಿಕ್ಷ್ ಕೊರಯ ಅವರನ್ನು ಗುರುತಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಶಿಕ್ಷಕರಾದ ಲಕ್ಷ್ಮೀನಾರಾಯಣ, ನಿವೃತ್ತ ಅಂಚೆಪಾಲಕ ಡಾಕಯ್ಯ ಗೌಡ ಕ್ರೀಡೆಯಲ್ಲಿ , ಚಿರಾಗ್, ಶ್ರಜನ್ ರನ್ನು ಅತಿ ಹೆಚ್ಚು ಅಂಕ ಗಳಿಸಿದ ನಮೃತಾ, ಆಕಾಂಕ್ಷ, ಮಾನ್ಯ ವೈ., ಆಕರ್ಷ ಇವರನ್ನು ಸನ್ಮಾನಿಸಲಾಯಿತು .

ನಿರ್ದೇಶಕ ಶೇಖರ್ ನಾಯ್ಕ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕವಿತಾ ವಾರ್ಷಿಕ ವರದಿ ವಾಚಿಸಿದರು. ಲೆಕ್ಕ ಪತ್ರ ಸಿಬ್ಬಂದಿ ಸಂತೋಷ ವಾಚಿಸಿದರು ರಾಜೇಶ್ ಪೆಂರ್ಬಡ ಕಾರ್ಯಕ್ರಮ ನಿರೂಪಿಸಿಸಿಬ್ಬಂದಿ ಸಂತೋಷ್ ಕುಮಾರ್ ಧನ್ಯವಾದವಿತ್ತರು.

Related posts

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ದೀಪ ಪ್ರದಾನ ಕಾರ್ಯಕ್ರಮ

Suddi Udaya

ರಾಜ್ಯಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟ :ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ಚಾಂಪಿಯನ್

Suddi Udaya

ಲೋಕಸಭಾ ಚುನಾವಣೆ ದಿನಾಂಕ ಪ್ರಕಟ: ಇಂದಿನಿಂದ ನೀತಿ ಸಂಹಿತೆ ಜಾರಿ: ದ.ಕ. ಲೋಕಸಭಾ ಕ್ಷೇತ್ರದಲ್ಲಿ ಎ. 26ರಂದು ಮತದಾನ

Suddi Udaya

ಧರ್ಮಸ್ಥಳದಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya

ದುಬೈ : ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಆಯೋಜಿಸಿದ ಸ್ನೇಹ ಸಮ್ಮಿಲನ ಕಾರ್ಯಕ್ರಮ

Suddi Udaya

ಶಿವಾಜಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಳಂಜ ಶಾಲಾ ಮಕ್ಕಳಿಗೆ ಐಡಿ ಕಾರ್ಡ್ ಹಾಗೂ ಬೆಲ್ಟ್ ವಿತರಣೆ

Suddi Udaya
error: Content is protected !!