25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧಾರ್ಮಿಕ ಶ್ರದ್ಧಾ ಕೇಂದ್ರದ ಮೇಲೆ ನಡೆಯುತ್ತಿರುವ ದಾಳಿ ನಿಲ್ಲಬೇಕು. ಕೂಡಲೇ ಎಸ್ ಐ ಟಿ ಸರ್ಕಾರಕ್ಕೆ ಮದ್ಯಂತರ ವರದಿ ಸಲ್ಲಿಸಲಿ: ರಕ್ಷಿತ್ ಶಿವರಾಂ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ವ್ಯಕ್ತಿಯ ದೂರಿನಂತೆ ನಡೆದಿದೆ ಎನ್ನಲಾದ ಪ್ರಕರಣಗಳ ಕುರಿತು ತನಿಖೆಗಾಗಿ ಸರ್ಕಾರ ಎಸ್ಐಟಿಯನ್ನು ರಚಿಸಿದ್ದು.ನಿಷ್ಪಕ್ಷಪಾತವಾಗಿ ತನಿಖೆಯೂ ಕೂಡ ನಡೆಯುತ್ತಿದೆ.

ಎಸ್ಐಟಿ ತನಿಖೆಯನ್ನು ನಡೆಸುತ್ತಿರುವ ಸಂದರ್ಭದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರ ಮತ್ತು ವ್ಯಕ್ತಿಗತವಾಗಿ ಮೌಖಿಕ ಮತ್ತು ಸಾಮಾಜಿಕ ಜಾಲತಾಣದ ಮುಖಾಂತರ ಗುರಿಯಾಗಿಸಿ ಅವಹೇಳನಕಾರಿಯಾಗಿ ಬಿಂಬಿಸುವುದು ನಾಗರಿಕ ಸಮಾಜಕ್ಕೆ ಶೋಭೆ ತರುವಂತದ್ದಲ್ಲ. ತನಿಖೆಯೂ ಯಾರ ಪರವೂ ಅಲ್ಲ ವಿರೋಧವೂ ಅಲ್ಲ , ಈ ನೆಲದ ಕಾನೂನು ಪ್ರತಿಯೊಬ್ಬ ಪ್ರಜೆಯ ಗಣತೆ, ಗೌರವವನ್ನು ಕಾಪಾಡುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹರಡುತ್ತಿರುವವರ ವಿರುದ್ಧವು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು.

ಎಸ್ಐಟಿ ತನ್ನ ತನಿಖೆಯ ಮಧ್ಯಾಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಸಾರ್ವಜನಿಕ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಕೆ.ಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ ತಿಳಿಸಿದ್ದಾರೆ.

Related posts

ಕಸರತ್ತ್ ತುಳು ವೆಬ್ ಸೀರೀಸ್ ನ ಮೊದಲ ಪೋಸ್ಟರ್ ಬಿಡುಗಡೆ

Suddi Udaya

ಕೊಕ್ಕಡ: ಕೋರಿ ಜಾತ್ರೆಯಲ್ಲಿ ಕೋಣಗಳ ಯಜಮಾನರಿಗೆ ಗೌರವಾರ್ಪಣೆ

Suddi Udaya

ಗುರುವಾಯನಕೆರೆ ಯಡೂ೯ರು ರಾತ್ರಿ ಮನೆಯೊಳಗಡೆ ಬಿದ್ದು ರಕ್ತಸ್ರಾವವಾಗಿ ಮುರಳಿಧರ ಭಟ್ ಮೃತ್ಯು

Suddi Udaya

ಕೊಕ್ಕಡ ಶ್ರೀ ಕ್ಷೇ. ಧ.ಗ್ರಾ. ಯೋಜನೆಯ ಉಪ್ಪಾರಪಳಿಕೆ ಕಾರ್ಯಕ್ಷೇತ್ರದಲ್ಲಿ ವಿಶ್ವಜ್ಯೋತಿ ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ

Suddi Udaya

ಬೆಳಾಲು ಶ್ರೀ ಧ.ಮಂ.ಅ. ಪ್ರೌಢ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ಪ್ರಶಿಕ್ಷಣ ಕಾರ್ಯಾಗಾರ

Suddi Udaya
error: Content is protected !!