23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯ ಅಮೋಘ ಸಾಧನೆ: ಧಾರವಾಡ ಐಐಟಿಯಲ್ಲಿ ಪ್ರವೇಶಾತಿ ಗಿಟ್ಟಿಸಿಕೊಂಡ ಬೆಳ್ತಂಗಡಿಯ ಅಚಿಂತ್ಯದಾಸ್

ಬೆಳ್ತಂಗಡಿ : ರಾಜ್ಯದ ಮೊಟ್ಟ ಮೊದಲ ಧಾರವಾಡ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಬೆಳ್ತಂಗಡಿಯ ವಿದ್ಯಾರ್ಥಿ ಅಚಿಂತ್ಯದಾಸ್ ಪ್ರವೇಶಾವಕಾಶ ಗಿಟ್ಟಿಸಿಕೊಂಡಿದ್ದಾನೆ. ಈ ಮೂಲಕ ಬೆಳ್ತಂಗಡಿ ತಾಲೂಕಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಧಾರವಾಡ ಐಐಟಿಗೆ ಪ್ರವೇಶಾತಿ ಪಡೆದಿರುವ ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಯ ಮೊದಲ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತಾಲೂಕಿನ ಅಳದಂಗಡಿ ಗ್ರಾಮದ ಕೆದ್ದುವಿನಲ್ಲಿ ನೆಲೆಸಿರುವ ಮೋಹನ್ ದಾಸ್ ಮತ್ತು ಸುರೇಖಾ ದಂಪತಿಗಳ ಸುಪುತ್ರ. ಅಂಚಿತ್ಯದಾಸ್ ಗುರುವಾಯನಕೆರೆ ಎಕ್ಸೆಲ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ. ರಾಷ್ಟ್ರೀಯ ಜೆಇಇ ಮೈನ್ಸ್‌ ನಲ್ಲಿ ಆಯ್ಕೆಯಾಗಿ, ಕಳೆದ ಎಪ್ರಿಲ್ ತಿಂಗಳಿನಲ್ಲಿ ನಡೆದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ1542 ರ‍್ಯಾಂಕ್ ಪಡೆದು ವಿದ್ಯಾಕಾಶಿ ಧಾರವಾಡದ ಹೊರವಲಯದ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ ಆಯ್ಕೆಯಾಗಿ ವ್ಯಾಸಂಗಕ್ಕೆ ತೆರಳಿದ್ದಾರೆ.


ತಾಲೂಕಿನ ಮೊದಲ ವಿದ್ಯಾರ್ಥಿ: ದೇಶದಲ್ಲಿ 23 ಪ್ರಮುಖ ಐಐಟಿಗಳಿವೆ, ಈ ಪೈಕಿ ರಾಜ್ಯದ ಮೊದಲ ಧಾರವಾಡ ಐಐಟಿಯಾಗಿದೆ. 2023ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೊಸ ಕ್ಯಾಂಪಸ್ ಉದ್ಘಾಟಿಸಿದ್ದರು. ಉತ್ತಮ ಕ್ಯಾಂಪಸ್ ಹೊಂದಿರುವ ಧಾರವಾಡ ಐಐಟಿಯಲ್ಲಿ ವ್ಯಾಸಂಗಕ್ಕೆ ಮೆರಿಟ್ ಸೀಟು ಮೂಲಕ ಪ್ರವೇಶಾತಿ ಪಡೆದುಕೊಂಡಿರುವ ತಾಲೂಕಿನ ಪ್ರಥಮ ವಿದ್ಯಾರ್ಥಿ ಅಂಚಿತ್ಯದಾಸ್ ಹೆಗ್ಗಳಿಕೆ ಪಾತ್ರರಾಗಿದ್ದಾರೆ.


ಎಕ್ಸೆಲ್‌ಗೆ ಮಗದೊಂದು ಮೈಲುಗಲ್ಲು: ಕಳೆದ ಆರು ವರ್ಷಗಳ ಹಿಂದೆ ಅನುಭವಿ ಉಪನ್ಯಾಸಕರು ಗುರುವಾಯನಕೆರೆಯಲ್ಲಿ ಸ್ಥಾಪಿಸಿದ ಎಕ್ಸೆಲ್ ಪದವಿಪೂರ್ವ ಕಾಲೇಜು, ಸುಮಂತ್ ಕುಮಾರ್ ಜೈನ್ ಸಾರಥ್ಯದಲ್ಲಿ ಪ್ರಾರಂಭಗೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ದೇಶಾದ್ಯಂತ ಹೆಸರುವಾಸಿಯಾಗಿದೆ. ಶೈಕ್ಷಣಿಕ ಕಾಂತ್ರಿ ನಡೆಸುತ್ತಿರುವ ಸಂಸ್ಥೆ ತಾಲೂಕಿಗೆ ಕೀರ್ತಿ ತರುತ್ತಿದೆ. ಪಿಯುಸಿ ಬೋರ್ಡ್, ಸ್ಪರ್ಧಾತ್ಮಕ ಪರೀಕ್ಷೆ, ಆಧುನಿಕ ವೃತ್ತಿಪರ ಕೋರ್ಸುಗಳಿಗೆ ಸುಲಭ ಪ್ರವೇಶಕ್ಕಾಗಿ ಶ್ರಮಿಸುತ್ತಿದೆ. ನೀಟ್‌ನಲ್ಲಿ ಅದ್ವಿತೀಯ ಸಾಧನೆ, ವೈದ್ಯಕೀಯ ಸೀಟುಗಳನ್ನು ಅತ್ಯಧಿಕ ಸಂಖ್ಯೆಯಲ್ಲಿ ಪಡೆದ ವಿದ್ಯಾಸಂಸ್ಥೆ ಹೆಗ್ಗಳಿಕೆಗೆ ಕೂಡ ಎಕ್ಸೆಲ್‌ನದ್ದಾಗಿದೆ. ಫಾರೆನ್ಸಿಕ್ ಸೈನ್ಸ್ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಅರ್ಹರಾಗಿರುವುದು ವಿಶೇಷ. ಸಾಧನೆಗಳ ಶಿಖರವನ್ನೆರುತ್ತಿರುವ ಸಂಸ್ಥೆಯ ಮೈಲುಗಲ್ಲಿಗೆ ಮಗದೊಂದು ಸಾಧನೆ ಸೇರ್ಪಡೆಯಾಗಿದೆ. ಮಕ್ಕಳ ಸಾಧನೆಯಲ್ಲಿ ಅಗ್ರಗಣ್ಯವೆನಿಸುವ ದಕ್ಷ ಪ್ರಾಧ್ಯಾಪಕ ವರ್ಗವಿದೆ. ಪಠ್ಯಕ್ರಮದಲ್ಲಿ ಸುಮಾರು ೧೦ರಿಂದ ೨೦ ವರ್ಷ ಅನುಭವವುಳ್ಳ ಪ್ರಾಧ್ಯಾಪಕ ವೃಂದ ಮಕ್ಕಳ ಸಾಧನೆ ಮತ್ತು ಏಳಿಗೆಗಾಗಿ ಶ್ರಮಿಸುತ್ತಿದೆ.


ಅಚಿಂತ್ಯದಾಸ್ ಅವರು ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ, 8 ಅಳದಂಗಡಿ ಸರಕಾರಿ ಪ್ರೌಢ ಶಾಲೆ ಹಾಗೂ 9, 10 ಉಜಿರೆ ಎಸ್‌ಡಿಎಂ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದ್ದಾರೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.91.8% ಫಲಿತಾಂಶ ಪಡೆದಿದ್ದು ಗಣಿತ ವಿಷಯದಲ್ಲಿ 100 ಅಂಕ ಗಳಿಸಿದ್ದಾರೆ. ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ಪಿಸಿಎಂಬಿ ವಿಭಾಗದಲ್ಲಿ ವಿದ್ಯಾಭ್ಯಾಸ ನಡೆಸಿ 95.85% ಫಲಿತಾಂಶ ಗಿಟ್ಟಿಸಿಕೊಂಡಿದ್ದಾರೆ. ಇದರೊಂದಿಗೆ ಜೆಜೆಇ ಮೈನ್ಸ್ ಹಾಗೂ ಅಡ್ವಾನ್ಸ್ ಕೋಚಿಂಗ್ ಪಡೆದು ಜೆಇಇ ಅಡ್ವಾನ್ಸ್ ನಲ್ಲಿ 15452 ರ‍್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ಚೆಸ್ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸಿರುವ ಇವರು ಎನ್‌ಸಿಸಿಯಲ್ಲಿದ್ದಾರೆ. ರೋಟರಿ ಇಂಟರಾಕ್ಟ್ ಕ್ಲಬ್‌ನಲ್ಲಿ ಕಾರ್ಯದರ್ಶಿಯಾಗಿದ್ದರು. ಬಡವರ್ಗದ ಕುಟುಂಬದವರಾದ ಇವರು ತಂದೆ ಮೋಹನ್‌ದಾಸ್ ಅವರು ಟೈಲರ್ ಪ್ರವೃತ್ತಿ ಹೊಂದಿದ್ದಾರೆ. ತಾಯಿ ಸುರೇಖಾ ಅವರು ಅಳದಂಗಡಿ ಗ್ರಾಮ ಪಂಚಾಯತ್‌ನ ಗ್ರಂಥಾಲಯದಲ್ಲಿ ಗ್ರಂಥಪಾಲಕಿಯಾಗಿದ್ದಾರೆ.

ಮಗ ದೇಶದ ಪ್ರತಿಷ್ಠಿತ ಧಾರವಾಡ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಪ್ರವೇಶಾತಿ ಪಡೆದುಕೊಂಡಿರುವುದು ಸಂತಸ ತಂದಿದೆ. ಧಾರವಾಡ ಐಐಟಿಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಗೆ ವಂದನೆಗಳು. -ಅಂಚಿತ್ಯದಾಸ್ ಪೋಷಕರು.

ಅತ್ಯುತ್ತಮ ಸಾಧನೆ ಸಂತೋಷ ತಂದಿದೆ: -ಸುಮಂತ್ ಕುಮಾರ್ ಜೈನ್ ಅಧ್ಯಕ್ಷರು ಎಕ್ಸೆಲ್ ಕಾಲೇಜು
ಅಚಿಂತ್ಯದಾಸ್ ಜೆಇಇ ಅಡ್ವಾನ್ಸ್ನಲ್ಲಿ ೧೫೪೨ನೆಯ ರ‍್ಯಾಂಕ್ ಪಡೆದು, ಮಾಡಿರುವ ಸಾಧನೆ ನಮಗೆಲ್ಲಾ ಸಂತೋಷ ತಂದಿದೆ. ಜೆಇಇ ಅಡ್ವಾನ್ಸ್ನಲ್ಲಿ ರಾಷ್ಟçಮಟ್ಟದಲ್ಲಿ ೪೫ನೇ ರ‍್ಯಾಂಕ್ ನಮ್ಮ ಇನ್ನೋರ್ವ ವಿದ್ಯಾರ್ಥಿ ವೀರಭದ್ರೇಶ್ ಕಟಗೇರಿಗೆ ಬಂದಿದೆ. ಅದೇ ರೀತಿ ಇನ್ನೂ 5 ಮಂದಿಗೆ ಒಳ್ಳೆಯ ಅಡ್ವಾನ್ಸ್ ರ‍್ಯಾಂಕಿಂಗ್ ಬಂದಿದೆ. ನೀಟ್ /ಜೆಇಇ/ಸಿಇಟಿಯಲ್ಲಿ ಹಾಗೂ ಬೋರ್ಡ್ ಎಕ್ಸಾಂನಲ್ಲಿ ನಮ್ಮ ವಿದ್ಯಾರ್ಥಿಗಳು ಎಂದಿನಂತೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಂತೂ ಯಾವತ್ತೂ ನಮ್ಮದೇ ಪ್ರಥಮ ಸ್ಥಾನ ಎನ್ನುವುದು ಅಭಿಮಾನದ ವಿಷಯ.

Related posts

ನ್ಯಾಯತರ್ಪು ಮತ್ತು ಕಳಿಯ ಗ್ರಾಮದಲ್ಲಿ ಬಿಜೆಪಿ ಬಿರುಸಿನ ಮತ ಬೇಟೆ

Suddi Udaya

ಎ.18: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ನಾಮಪತ್ರ ಸಲ್ಲಿಕೆ

Suddi Udaya

ಬಿರುಗಾಳಿ: ಹಲೇಜಿ -ಕಲಾಯಿಯಲ್ಲಿ ನೂರಕ್ಕೂ ಹೆಚ್ಚು ಅಡಿಕೆ ಗಿಡಗಳು ಹಾಗೂ ನಾಲ್ಕು ಕರೆಂಟ್ ಕಂಬಗಳು ಧಾರಾಶಾಹಿ

Suddi Udaya

ಕುವೆಟ್ಟು: ಸ.ಉ.ಹಿ. ಪ್ರಾ. ಶಾಲೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ಹಾಗೂ ಬೀಳ್ಕೊಡುಗೆ ಸಮಾರಂಭ

Suddi Udaya

ಚಿರನಿದ್ರೆಗೆ ಜಾರಿದ ಮಾಜಿ ಶಾಸಕ ಕೆ. ವಸಂತ ಬಂಗೇರ ಮೇ9 ರಂದು (ನಾಳೆ) ಬೆಳಿಗ್ಗೆ ಹಳೆಕೋಟೆ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನ

Suddi Udaya

ಎಕ್ಸೆಲ್ ಪಿಯು ಕಾಲೇಜಿನಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯ ಜಯಂತಿ ಆಚರಣೆ ಹಾಗೂ ಎಕ್ಸೆಲ್ ಸ್ವಚ್ಛತಾ ಅಭಿಯಾನ

Suddi Udaya
error: Content is protected !!