September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ವೇಣೂರು:- ಇಲ್ಲಿನ ಎಕ್ಸೆಲ್ ಟೆಕ್ನೋ ಸ್ಕೂಲ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಸಂಸ್ಥೆಯ ವಿದ್ಯೋದಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ವಿದ್ಯೋದಯ ವಿದ್ಯಾ ಸಂಸ್ಥೆತ ಅಧ್ಯಕ್ಷ ಕೆ. ಶಿವರಾಮ ಹೆಗ್ಡೆ, ಎಕ್ಸೆಲ್ ಟೆಕ್ನೋ ಸ್ಕೂಲ್ ಇದರ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ ಅವರ ತೀರ್ಥರೂಪರುಗಳಾದ ಸತೀಶ್ ಕುಮಾರ್ ಆರಿಗ ಮತ್ತು ಶುಭಲತಾ, ಪೆರ್ಮಾಣು ಗುತ್ತಿನ ಶ್ರೀ ಸುರೇಶ್ ಆರಿಗ, ಎಕ್ಸೆಲ್ ಟೆಕ್ನೋ ಸ್ಕೂಲ್ ಇದರ ಆಡಳಿತಾಧಿಕಾರಿ ಶಾಂತಿ ರಾಜ್ ಜೈನ್, ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ಬಿ ಉಪಸ್ಥಿತರಿದ್ದು ಧ್ವಜಾರೋಹಣ ನೆರವೇರಿಸಿ ಸಂದರ್ಭೋಚಿತವಾಗಿ ಮಾತನಾಡಿದರು.

ಬಳಿಕ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ದಿಶ್ಯಾ ಎಸ್ ಶೆಟ್ಟಿ ಮತ್ತು ಪ್ರಣಾಮ್ ಸುವರ್ಣ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ ಮಾರ್ಗದರ್ಶನ ಮಾಡಿದರು. ಶಿಕ್ಷಕರುಗಳಾದ ಶ್ವೇತಾ ಎ. ಜೈನ್ ಸ್ವಾಗತಿಸಿ, ಪೂಜಿತಾ ಬಿ.ಕೆ ಮತ್ತು ಮಾಲತಿ ವಿಜೇತರ ಪಟ್ಟಿ ವಾಚಿಸಿ, ಸನ್ಮತಿ ಧನ್ಯವಾದವಿತ್ತು, ಕೃಷ್ಣಪ್ಪ ಎಂ‌.ಕೆ ನಿರೂಪಿಸಿ, ಅಕ್ಷತಾ ಹೆಗ್ಡೆ,ನಮನಾ, ತೀರ್ಥ ಪ್ರಸಾದ್, ವಿಂದ್ಯಾ ಮತ್ತು ಶಿಕ್ಷಕ‌ – ಶಿಕ್ಷೇತರ ಬಂಧುಗಳು‌ ಸಹಕರಿಸಿದರು.

Related posts

ನಾಳ ಗೋಪಾಲಕೃಷ್ಣ ಕಾಮತ್ ನಿಧನ

Suddi Udaya

ಕರಾಡ ಬ್ರಾಹ್ಮಣ ಸಮಾಜದಿಂದ ಸಂಸ್ಕರಣೆ ಹಾಗೂ ನುಡಿನಮನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ:ಕಾಂಗ್ರೆಸ್ ನಿಂದ ಸಂವಿಧಾನ ,ಪ್ರಜಾಪ್ರಭುತ್ವ ,ಶಿಷ್ಟಾಚಾರ ವಿರೋಧಿ ನಡವಳಿಕೆ. ರಾಜ್ಯದ ಮಂತ್ರಿಗಳ ಸರ್ವಾಧಿಕಾರಿ ಧೋರಣೆ, ಹಿರಿಯಕ್ಕನ ಚಾಳಿ ಮನೆ ಮಂದಿಗೆಂಬಂತೆ ಇದು ತಳಮಟ್ಟಕ್ಕೂ ತಲುಪುತ್ತಿದೆ: ವಿಧಾನಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಆರೋಪ

Suddi Udaya

ಅರಸಿನಮಕ್ಕಿ: ಜೋತಿಷ್ಯಿ ರಾಮಕೃಷ್ಣ ಖಾಡಿಲ್ಕರ್ ನಿಧನ

Suddi Udaya

ಸೆ.10: ನಾಲ್ಕೂರು ಯುವಶಕ್ತಿ ಫ್ರೆಂಡ್ಸ್ ನಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ: ಧಾರ್ಮಿಕ ಕಾರ್ಯಕ್ರಮ, ಮುದ್ದು ಕೃಷ್ಣ ಸ್ಪರ್ಧೆ, ವಿವಿಧ ಆಟೋಟ ಸ್ಪರ್ದೆಗಳು

Suddi Udaya

ಬಳಂಜ: ನಾಲ್ಕೂರು ನಿವಾಸಿ ಲೀಲಾವತಿ ನಿಧನ

Suddi Udaya
error: Content is protected !!