September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಲೂಮೋಸ್ – ಟೆಸರಾಕ್ಟ್ ಫಿಲ್ಮ್ ಸೊಸೈಟಿ ವಾರ್ಷಿಕ ಸಮಾರೋಪ ; ನಮ್ಮ ಕಲ್ಪನೆಯೇ ನಮ್ಮ ಮಿತಿ: ಡಾ. ರಾಘವೇಂದ್ರ

ಉಜಿರೆ: “ಸಿನಿಮಾ ಹಾಗೂ ಡಿಜಿಟಲ್ ಕ್ಷೇತ್ರ ಎಲ್ಲರಿಗೂ ಒಂದು ಕ್ರಿಯೇಟಿವ್ ಸ್ವಾತಂತ್ರ್ಯ ನೀಡುತ್ತದೆ. ಆದರೆ ಆ ಸ್ವಾತಂತ್ರ್ಯದ ಜೊತೆಗೆ ಜವಾಬ್ದಾರಿಗಳೂ ಇರುತ್ತವೆ. ಸಿಕ್ಕ ಸ್ವಾತಂತ್ರ್ಯವನ್ನು ಸಮಾಜಕ್ಕೆ ಪೂರಕವಾಗಿ ಬಳಸಬೇಕಾಗಿರುವುದೇ ನಮ್ಮ ಜವಾಬ್ದಾರಿ ಆಗಿದೆ” ಎಂದು ಎಸ್ಡಿಎಂ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಎಸ್ ಹೇಳಿದರು.

ಎಸ್ಡಿಎಂ ಕಾಲೇಜಿನ ಬಿ. ವೋಕ್. ಡಿಜಿಟಲ್ ಮೀಡಿಯಾ ಹಾಗೂ ಫಿಲ್ಮ್ ಮೇಕಿಂಗ್ ವಿಭಾಗದ ಲೂಮೋಸ್ ಹಾಗೂ ಟೆಸರಾಕ್ಟ್ ಫಿಲ್ಮ್ ಸೊಸೈಟಿ ವಾರ್ಷಿಕ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, “ಸಿನಿಮಾ ಕ್ಷೇತ್ರ ಇಂದು ವ್ಯಾಪಾರೀಕರಣ ಆಗುತ್ತಿರುವುದು ಕಳವಳಕಾರಿ ಸಂಗತಿ. ಆದರೆ ನಾವು ಜವಾಬ್ದಾರಿಯುತ ಕ್ರಿಯೇಟರ್‌ಗಳಾಗಿ ಸಮಾಜಕ್ಕೆ ಉಪಯೋಗ ಆಗುವಂತಹ ಕಂಟೆಂಟ್ ಕೊಡುವವರಾಗಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಅಂಕಿತಾ ಹಾಗೂ ವಿದ್ಯಾರ್ಥಿ ಅಚ್ಯುತ್, ಕ್ರಮವಾಗಿ ಲೂಮೋಸ್ ಸಂಘ ಹಾಗೂ ಟೆಸರಾಕ್ಟ್ ಸೊಸೈಟಿಯ ವಾರ್ಷಿಕ ವರದಿಯನ್ನು ವಾಚಿಸಿದರು.

ಈ ಸಂದರ್ಭದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಶ್ವಿನಿ ಜೈನ್, ಇಂದುಧರ್ ಕಿಣಿ ಹಾಗೂ ತೇಜಸ್ವಿನಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

Related posts

ವಿಶ್ವ ಏಡ್ಸ್ ದಿನ : ಉಜಿರೆ ಶ್ರೀ ಧ.ಮಂ.ಪದವಿಪೂರ್ವ ಕಾಲೇಜಿನಲ್ಲಿ ಜಾಗೃತಿ ಉಪನ್ಯಾಸ

Suddi Udaya

ಬೆಳ್ತಂಗಡಿ ಯುವ ವಕೀಲರ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಿಭಾಗದ ಅಧಿಕಾರಿಗಳೊಂದಿಗೆ ಅದಾಲತ್ ಕಾರ್ಯಕ್ರಮ- ಸಾವ೯ಜನಿಕ ಅಹವಾಲು

Suddi Udaya

ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ಕರಿಮಣಿ ಉತ್ಸವ: 500 ವೆರೈಟಿಯ ಕರಿಮಣಿ ಉತ್ಸವ ಇನ್ನೂ ಕೇವಲ 6 ದಿನ ಬಾಕಿ

Suddi Udaya

ನಾಲ್ಕೂರಿನಲ್ಲಿ ಹುಲ್ಲು ಕತ್ತರಿಸುವಾಗ ನಡೆದ ಆಕಸ್ಮಿಕ ಘಟನೆ ಯಂತ್ರಕ್ಕೆ ಸಿಲುಕಿದ ವ್ಯಕ್ತಿಯ ಎರಡು ಕೈಗಳುಒಂದು ಕೈಯ ಅಂಗೈ ತುಂಡು, ಇನ್ನೊಂದು ಕೈಯ ಬೆರಳು ಕಟ್

Suddi Udaya

ಕುಪ್ಪೆಟ್ಟಿ ಸ.ಉ.ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!