ಮಡಂತ್ಯಾರು ಸೆಕ್ರೇಡ್ ಹಾರ್ಟ್ ಶಿಕ್ಷಣ ಸಂಸ್ಥೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಜಂಟಿ ಕಾರ್ಯದರ್ಶಿ ರೆವರೆಂಡ್ ಡಾಕ್ಟರ್ ಸ್ಟ್ಯಾನಿ ಗೋವಿಯಸ್ ರಾಷ್ಟ್ರಧ್ವಜಾರೋಹಣ ಮಾಡಿದರು. ವಿದ್ಯಾರ್ಥಿನಿ ಮಾನ್ವಿತಾ ಮಾತನಾಡಿದರು.
ಎನ್‌ಸಿಸಿ, ಸ್ಕೌಟ್ಸ್, ಬುಲ್‌ಬುಲ್, ಗೈಡ್‌ಗಳಿಂದ ಪಥ ಸಂಚಲನ ಆಕರ್ಷಣೀಯವಾಗಿತ್ತು.
ಈ ಸಂದರ್ಭದಲ್ಲಿ ಸಹಾಯಕ ಗುರು ಕ್ಲಾರಿ ಪಿಂಟೊ, ಗುರು ದೀಪಕ್ ದೇಸಾ, ಪ್ಯಾರಿಷ್ ಕೌನ್ಸಿಲ್ ಉಪಾಧ್ಯಕ್ಷ ಜೆರಾಲ್ಡ್ ಮೊರಾಸ್, ಪ್ರಿ ಯೂನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲ ಸೂರಜ್ ಚಾರ್ಲ್ಸ್ , ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾಂತಿ ಮೇರಿ, ಗಾರ್ಡಿಯನ್ ಏಂಜಲ್ಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೆಲೆನ್ ಲೋಬೊ ಉಪಸ್ಥಿತರಿದ್ದರು.
ಪ್ರೊಫೆಸರ್ ಇವಾನ್ ಅಲೆಕ್ಸ್ ಸಿಕ್ವೇರಾ ಸ್ವಾಗತಿಸಿದರು. ಉಪನ್ಯಾಸಕ ವಸಂತ್ ನಿರೂಪಿಸಿದರು.











