32.9 C
ಪುತ್ತೂರು, ಬೆಳ್ತಂಗಡಿ
March 6, 2026
ವರದಿ

ಗೇರುಕಟ್ಟೆ ಆಟೋ ರಿಕ್ಷಾ ಚಾಲಕ- ಮಾಲೀಕರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಗೇರುಕಟ್ಟೆ: ಆ.15. ಗೇರುಕಟ್ಟೆ ಆಟೋ ರಿಕ್ಷಾ ಚಾಲಕ- ಮಾಲೀಕರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಘದ 25 ನೇ ವರ್ಷವನ್ನು ಸಂಭ್ರಮದಿಂದ ಆಚರಿಸಲಾಯಿತು.
ಗೇರುಕಟ್ಟೆ ಸ್ನೇಹ ಸಂಗಮ ಆಟೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಕೆ.
ಧ್ವಜಾರೋಹಣ ಮಾಡಿದರು.


ಸಂಘದ 25 ನೇ ವರ್ಷ ಪೂರೈಸಿದ ನೆನಪಿಗಾಗಿ ಗೇರುಕಟ್ಟೆ ಕೊರಂಜ ಸ.ಉ.ಹಿ.ಪ್ರಾ.ಶಾಲೆ ಹಾಗೂ ಗೇರುಕಟ್ಟೆ ಸರಕಾರಿ ಸಂಯುಕ್ತ ಫ್ರೌಡ ಶಾಲೆಗಳಿಗೆ ಆಫೀಸ್ ಟೇಬಲ್ ಮುಖ್ಯ ಶಿಕ್ಷಕರಿಗೆ ಹಸ್ತಾಂತರ ಮಾಡಿದರು.
ಸ್ಥಳೀಯ ಉದ್ಯಮಿ ಮನ್ಸೂರ್ ಗೇರುಕಟ್ಟೆ ಅವರನ್ನು ಸನ್ಮಾನಿಸಿ, ಗೌರವಿಸಿದರು.
ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಸಂದರ್ಭೋಚಿತವಾಗಿ ಮಾತನಾಡಿದರು.ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಂ, ಯಶೋಧರ ಶೆಟ್ಟಿ, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ,ನಾಳ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಶರತ್ ಕುಮಾರ್ ಕೆ.,ಗೇರುಕಟ್ಟೆ ಫ್ರೌಡ ಶಾಲಾ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಗೋಪಾಲ ಗೌಡ ಯಂ.ಉಪಸ್ಥಿತರಿದ್ದರು.ಸಂಘದ ಉಪಾಧ್ಯಕ್ಷ ನಾಸಿರ್, ಕಾರ್ಯದರ್ಶಿ ಮೈಕೆಲ್ ಮೊಂತೇರೊ,ಜತೆ ಕಾರ್ಯದರ್ಶಿ ವಿನಯ,ಕೋಶಾಧಿಕಾರಿ ತಾರಾನಾಥ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಧ್ವಜರೋಹಣ ಸಂದರ್ಭದಲ್ಲಿ ಕೊರಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೇರುಕಟ್ಟೆ ಸಂಯುಕ್ತ ಫ್ರೌಡ ಶಾಲೆ ಹಾಗೂ ಮನ್ಷ್ಯ ರ್ ಶಾಲಾ ಮಕ್ಕಳು ಮುಖ್ಯ ಶಿಕ್ಷಕರು,ಸಹ ಶಿಕ್ಷಕರು ಪೋಷಕರು
ಉಪಸ್ಥಿತರಿದ್ದರು. ಅಂಚೆ ಇಲಾಖೆ ನಿವೃತ್ತ ಡಾಕಯ್ಯ ಗೌಡ ಹೆಚ್. ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಘದ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪದ್ಮನಾಭ ಸ್ವಾಗತಿಸಿ, ಧನ್ಯವಾದವಿತ್ತರು.

Related posts

ಬಳಂಜ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ : ತಳಿರು ತೋರಣದಿಂದ ಅಲಂಕಾರ, ಆರತಿ ಬೆಳಗಿ ತಿಲಕವಿಟ್ಟು, ಹೂಗುಚ್ಚ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತ

Suddi Udaya

ಮುಂಡೂರು: ಕರುವಿನ ಮೇಲೆ ಚಿರತೆ ದಾಳಿ: ಆತಂಕದಲ್ಲಿ ಗ್ರಾಮಸ್ಥರು

Suddi Udaya

ಬಂಟ್ವಾಳ ವಲಯದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕಚೇರಿ ಮಚ್ಚಿನದಲ್ಲಿ ಉದ್ಘಾಟನೆ

Suddi Udaya

ರೈತರ, ಯುವಜನರ, ಬಡವರ, ಮಧ್ಯಮ ವರ್ಗದವರ ವಿರೋಧಿ ಬಜೆಟ್: ರಕ್ಷಿತ್ ಶಿವರಾಂ

Suddi Udaya

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 59.78 ಲಕ್ಷ ಲಾಭ , ಸದಸ್ಯರಿಗೆ ಶೇ. 7 ಡಿವಿಡೆಂಟ್ ಘೋಷಣೆ

Suddi Udaya

ಸುರ್ಯ ಸದಾಶಿವರುದ್ರ ದೇವಸ್ಥಾನಕ್ಕೆ ಮಂಗಳೂರು ಕೆ.ಎಂ.ಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ ಭೇಟಿ

Suddi Udaya
error: Content is protected !!