ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, 79 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು..ಸಂಘದ ಹಿರಿಯ ಸದಸ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಪ್ರವೀಣ್ ರೈ ಸ್ವಾಗತಿಸಿ ಧ್ವಜಾರೋಹಣ ನಡೆಸಿ ಭಾರತ ದೇಶದ ಸೈನಿಕರ ಸೇವೆಯಿಂದ ನಾವು ಇಂದು ಊರಿನ ಜನರೆಲ್ಲ ಸೇರಿಕೊಂಡು ನಿರ್ಭಿತಿಯಿಂದ ಸದ್ಭಾವನೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಅತಿಥಿ ಜೆರೋಮ್ ಬ್ರಾಗ್ಸ್ ಮಾತನಾಡಿ ಹಿಂದೆ ನಾವು ಸ್ವತಂತ್ರರಾಗಿ ಇದ್ದ ಸಂಧರ್ಭ ನಮ್ಮೊಳಗಿನ ತಾರತಮ್ಯ ಮೇಲು ಕೀಳು, ಜಾತಿ ಮತ ಬೇರೆ ಬೇರೆ ಭಾಷೆ ಊರು ಎಂಬ ಬೇದ ಭಾವ ಇರುವುದನ್ನು ಅರಿತ ಬ್ರಿಟಿಷರು ನಮ್ಮನ್ನು ಸೋಲಿಸಿ ಸ್ವಾತಂತ್ರ್ಯಕಳೆದುಕೊಳ್ಳ ಬೇಕಾಯಿತು, ಸ್ವಾತಂತ್ರ ಸಿಕ್ಕಿದ ನಂತರ ನಾವು ಅದನ್ನು ಉಳಿಸ ಬೇಕಾದರೆ ಎಲ್ಲರೂ ಜಾತಿ ಮತ ಪಕ್ಷ ಮರೆತು ಒಗ್ಗಟ್ಟಾಗಿ ನಾವೆಲ್ಲರೂ ಓಂದೇ ಭಾರತೀಯರು ಎಂಬ ರಾಷ್ಟ್ರೀಯ ಭಾವನೆಯಿಂದ ಒಟ್ಟಾಗಿ ಜೀವನ ನಡೆಸಬೇಕು ಎಂಬುದಾಗಿ ಹೇಳಿದರು,

ಹಿರಿಯ ಸದಸ್ಯರಾದ ಉಮ್ಮರಬ್ಬ, ಅಣ್ಣಿ ಪೂಜಾರಿ ಚೀಮುಳ್ಳು ಅತಿಥಿಗಳಾಗಿ ಪಾಲ್ಗೊಂಡರು. ಸಂಘದ ಉಪಾಧ್ಯಕ್ಷ ಶಿವರಾಮ ನ್ಯಾಕ್, ನಿರ್ದೇಶಕರಾದ ರಾಜೇಶ್ ರೈ, ಪ್ರಸನ್ನ ಗೌಡ, ಪಾಶ್ವ೯ನಾಥ್ ಜೈನ್, ಶೇಷಪ್ಪ ಸಾಲಿಯಾನ್, ಮೋಹನ್ ಗೌಡ ಅಜಿರ, ಚಂದ್ರಶೇಖರ, ಅರುಣ ಬಂಗೇರ, ಶ್ರೀಮತಿ ಲಿಡಿಯಾ ಜೆರೋಮ್ ಬ್ರಾಗ್ಸ್, ಶ್ರೀಮತಿ ಸವಿತಾ ವೆಂಕಟೇಶ್ ಪೂಜಾರಿ, ತೆಕ್ಕಾರು ಪ್ರಾ.ಕ್ರ.ಪ.ಸ ಸಂಘದ ಮುಖ್ಯ ಕಾರ್ಯನಿರ್ವಹನಾಧಿಕಾರಿ ರಾಘವೇಂದ್ರ ಅಡಪ, ಶಾಖಾ ಮ್ಯಾನೇಜರ್ ಶಶಿಧರ ಅಡಪ, ಪ್ರಶಾಂತ್ ಪೈ, ಮೋನಪ್ಪ ಗೌಡ ಮನಿಲ, ಅಬೂಬಕ್ಕರ್ ಕಳೆಂಜಿ ಬೈಲ್, ಹಾಗೂ ಇತರ ಸದಸ್ಯರು, ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಟಿ ವಂದಿಸಿದರು.

Related posts

ಕನ್ಯಾಡಿ ಸೇವಾಭಾರತಿ ಇದರ 20ನೇ ವರ್ಷದ ಸಂಭ್ರಮ: ನೂತನ ಕಟ್ಟಡಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ

Suddi Udaya

ಇಂದಬೆಟ್ಟು-ನಾವೂರು ವಿಶ್ವ ಹಿಂದೂ ಪರಿಷತ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ವೇಣೂರು: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಕುಕ್ಕಾವುನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಜಡಿಮಳೆಗೆ ಕೊಯ್ಯೂರು ಮಾಧವ ಶೆಟ್ಟಿಗಾರ್ ಅವರ ಮನೆ ಬಳಿ ಗುಡ್ಡ ಕುಸಿತ: ಆತಂಕದಲ್ಲಿ ಕುಟುಂಬ -ಸ್ಥಳಕ್ಕೆ ಗ್ರಾ.ಪಂ ಪಿಡಿಒ ಭೇಟಿ ಪರಿಶೀಲನೆ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಜಿಲ್ಲಾಧಿಕಾರಿ ಮುಲೈ ಮುಹಿಲನ್, ಎಸ್.ಪಿ ರಿಷ್ಯಂತ್, ಮಾಜಿ ಸಚಿವ ರಮಾನಾಥ ರೈ ಹಾಗೂ ಜನಪ್ರತಿನಿಧಿಗಳು

Suddi Udaya
error: Content is protected !!