25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿಯ 5 ಮಂದಿ ಕೃಷಿಕರಿಗೆ ಅತ್ಯುತ್ತಮ ಸಾವಯವ ಪ್ರೋತ್ಸಾಹ ರೈತ ಪ್ರಶಸ್ತಿ

ಬೆಳ್ತಂಗಡಿ: ಕರ್ನಾಟಕ ಸಾವಯವ ಕೃಷಿ ಯೋಜನೆ, ಮಂಗಳ ಕಿಸಾನ್ ಸಮೃದ್ಧಿ ವಿಭಾಗ ಬಿ.ಸಿ ರೋಡ್ ಬಂಟ್ವಾಳ ಇವರು ಕೊಡ ಮಾಡುವ ಅತ್ಯುತ್ತಮ ಸಾವಯವ ಕೃಷಿ ರೈತ ಪ್ರಶಸ್ತಿ ಪ್ರೋತ್ಸಾಹಕ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಪ್ರಗತಿಪರ ಕೃಷಿಕರಾದ ನಡ ಗ್ರಾಮದ ಕೃಷ್ಣಪ್ಪ ಪೂಜಾರಿ, ಬಳಂಜ ಗ್ರಾಮದ ರಮಾನಾಥ ಶೆಟ್ಟಿ,ನಾವರ ಗ್ರಾಮದ ನವೀನ್ ಪೂಜಾರಿ, ಕಣಿಯೂರು ಗ್ರಾಮದ ಅಜಿತ್ ಜೈನ್ ಹಾಗೂ ಇಳಂತಿಲ ಗ್ರಾಮದ ತಿಮ್ಮಪ್ಪ ಗೌಡ ಅವರು ಆಯ್ಕೆಗೊಂಡು ಆ. 10 ರಂದು ಬಿ.ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈಯವರಿಂದ ಪ್ರಶಸ್ತಿ ಪಡೆದು ಸನ್ಮಾನ ಸ್ವೀಕರಿಸಿದರು.


ಇವರು ಮಂಗಳ ಮತ್ತು ಸನ್ಮಾನ ‘ಕಿಸಾನ್ ಸಮೃದ್ಧಿ ಸಾವಯವ ಗೊಬ್ಬರವನ್ನು ತಮ್ಮ ಅಡಿಕೆ, ತೆಂಗು, ಕಾಳು ಮೆಣಸು, ಮತ್ತು ತರಕಾರಿ ಬೆಳೆಗಳಿಗೆ ಕಳೆದ 9 ವರ್ಷಗಳಿಂದ ಸತತವಾಗಿ ಬಳಕೆ ಮಾಡುವ ಮೂಲಕ ಉತ್ತಮ ಇಳುವರಿ ಪಡೆದ ಸಂತೃಪ್ತ ಬಳಕೆದಾರರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಮೋಹನ್ ಗೌಡ, ಅಶ್ವಿನಿ ಮೋಹನ್ ಗೌಡ, ಹಿರಿಯ ಅಧಿಕಾರಿ ಭಾರತಿ ರೈ,ದ.ಕ ಜಿಲ್ಲಾ, ಉಡುಪಿ, ಕಾಸರಗೋಡು, ಬೆಳ್ತಂಗಡಿ ಭಾಗಗಳಿಂದ, ಉದ್ಯೋಗಿಗಳು, ಬಳಕೆದಾರರು ಉಪಸ್ಥಿತರಿದ್ದರು.

Related posts

ನಾಳ: ಶ್ರೀ ದುರ್ಗಾ ಟ್ರೋಫಿ – 2026 ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಮ್ಮ ಮನೆ ಶಾಖೆಯ ವಾರ್ಷಿಕೋತ್ಸವ

Suddi Udaya

ಜೂನ್ 30 ರಂದು ತ್ರೈಮಾಸಿಕ ಜಿಲ್ಲಾ ಕೆ. ಡಿ.ಪಿ. ಸಭೆ

Suddi Udaya

ಸೆ.26: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ಮಡಂತ್ಯಾರು ಹಾಗೂ ಬಳ್ಳಮಂಜ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಎಂ.ಡಿ.ಎಸ್ ಪರೀಕ್ಷೆ: ರಾಜ್ಯಮಟ್ಟದಲ್ಲಿ ವೇಣೂರಿನ ಡಾ. ದೀಕ್ಷಾ ಅಶ್ವಿತ್‌ ಕುಲಾಲ್ ರವರಿಗೆ 5ನೇ ರ್‍ಯಾಂಕ್

Suddi Udaya
error: Content is protected !!