ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಚ್ಚಿನ : ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ

ಮಚ್ಚಿನ: ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಬಳ್ಳಮಂಜ ಇದರ ಆಶ್ರಯದಲ್ಲಿ 31 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಆ.16 ರಂದು ಸಾರ್ವಜನಿಕ ಕ್ರೀಡಾಂಗಣ ಬಳ್ಳಮಂಜದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಅನಂತ ಕೃಷ್ಣ ಭಟ್ ಕುಕ್ಕಿಲ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾಧ್ಯಕ್ಷರಾಗಿ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನಾರಾಯಣ ಪೂಜಾರಿ ವಹಿಸಿದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರುಕ್ಮಿಣಿ, ಮೆಡಿಸಿಟಿ ಕ್ಲಿನಿಕ್ ವೈದ್ಯರಾದ ತೇಜಸ್ವಿ ಬಳ್ಳಮಂಜ, ಆಪ್ಯo ಕ್ಲಿನಿಕ್ ವೈದ್ಯರಾದ ಹೇಮಚಂದ್ರ ಶೆಟ್ಟಿ, ಸುಧೀರ್ ಶೆಟ್ಟಿ ಕೋರಬೆಟ್ಟು ಉಪಸ್ಥಿತರಿದ್ದರು. ನವೀನ್ ಸ್ವಾಗತಿಸಿ, ನಿಶಾಂತ್ ಧನ್ಯವಾದ ಕೋರಿದರು.

ನಂತರ ಮಕ್ಕಳಿಗೆ ಪುರುಷರಿಗೆ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ಸುಮಾರು 40 ಮುದ್ದು ಮಕ್ಕಳಿಂದ ಕೃಷ್ಣ ವೇಷ ಸ್ಪರ್ಧೆ ನಡೆಯಿತು ಮತ್ತು ಬೈಕ್ ರೇಸ್, ಹಗ್ಗ ಜಗ್ಗಾಟ , ಗೋವಿಂದ ಸ್ಪರ್ಧೆ ಬಳ್ಳಮಂಜ ಪೇಟೆಯಿಂದ ಕ್ರೀಡಾಂಗಣದವರೆಗೆ, ಅಟ್ಟಿ ಗೋವಿಂದ ಶ್ರೀ ಕೃಷ್ಣ ಲೀಲೋತ್ಸವ ನೀರ ಓಕುಳಿ ಆಟದೊಂದಿಗೆ ಭವ್ಯ ಮೆರವಣಿಗೆ ನಡೆಯಿತು.

ಸಂಜೆ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾದ. ಕೆ. ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ, ಮಹಾವೀರ ಕಾಲೇಜ್ ಮೂಡಬಿದ್ರೆಯ ಪ್ರಾಂಶುಪಾಲರಾದ ರಾಧಾಕೃಷ್ಣ ಶೆಟ್ಟಿ, ಬಸವನಗುಡಿ ಕ್ಷೇತ್ರದ ಆಡಳಿತ ಮೊಕ್ತೇಶ್ವರರಾದ ಪ್ರಶಾಂತ್ , ಕುತ್ಕೊಳಿ ಗರೋಡಿ ಕ್ಷೇತ್ರದ ಅಧ್ಯಕ್ಷ ಸುನಿಲ್ ಕುಮಾರ್ ಅಗರಿ, ದ.ಕ ಜಿಲ್ಲಾ ಅಸಂಘಟಿತ ಕಾರ್ಮಿಕರ ಘಟಕ ಅಧ್ಯಕ್ಷ ಅಬ್ಬಸ್ ಆಲಿ, ರೋಟರಿ ಕ್ಲಬ್ ಕಾರ್ಯದರ್ಶಿ ಜಿ. ವಾಸುದೇವ ಗೌಡ ಮಡಂತ್ಯಾರ್ ಜೆಸಿಐ ಮಡಂತ್ಯಾರ್ ಇದರ ಅಧ್ಯಕ್ಷ ಅಮಿತಾ ಅಶೋಕ್ ಗುಂಡಿಪಲ್ಕೆ, ಮಡಂತ್ಯಾರು ಬಿಲ್ಲವ ಸಂಘದ ಅಧ್ಯಕ್ಷ ವೆಂಕಪ್ಪ ಪೂಜಾರಿ, ಮಂಗಳೂರು ಉದ್ಯಮಿಗಳಾದ ಅನೀಶ್ ಕರ್ಕೆರ, ಬಂಗೇರಕಟ್ಟೆ ಉದ್ಯಮಿಗಳಾದ ಪಿ. ಕೆ ಇಸ್ಮಾಯಿಲ್ ಉಪಸ್ಥಿತರಿದ್ದರು .

ಬಳ್ಳಮಂಜದ ಮಹಿಳಾ ಯುವ ಉದ್ಯಮಿಗಳಾದ ಕುಮಾರಿ ಶ್ರೇಯಾ ಶೆಟ್ಟಿ, ಮಚ್ಚಿನ ಪ್ರೌಢಶಾಲಾ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ. ಅಮೃತ ಕೆ. ಸಾಕೆತ್ ಬಿ. ದಿಶಾಂತ್ ಇವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡೆಗಳ ಬಹುಮಾನ ವಿತರಿಸಲಾಯಿತು. ಲಾನ್ಸಿ ಸ್ವಾಗತಿಸಿ, ಸದಾಶಿವ ಹೆಗ್ಡೆ ವಂದಿಸಿದರು.

✍️ವರದಿ ಹರ್ಷ ಬಳ್ಳಮಂಜ

Related posts

ಕೊಯ್ಯೂರು: ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಿಡ್ಲೆ: ರಾಧಾಕೃಷ್ಣ ಆಚಾರ್ಯ ನಿಧನ

Suddi Udaya

ಗುರುವಾಯನಕೆರೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ಆಡಳಿತ ಮಂಡಳಿಗೆ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಪೋಸ್ಟ್‌ : ಮುಂಬಯಿಯ ಶ್ರೀನಾಥ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

Suddi Udaya

ಮುಂಡೂರು: ದುರ್ಗಾ ನಗರ ನಿವಾಸಿ ಕಾರ್ತಿಕ್ ಹೆಗ್ಡೆ ನಿಧನ

Suddi Udaya

ಉಜಿರೆ ಯು.ಎಸ್ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ 79ನೇ ಸ್ವಾತಂತ್ರೋತ್ಸವ ಆಚರಣೆ

Suddi Udaya
error: Content is protected !!