September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಧಮ೯ಸ್ಥಳ ಶವ ಹೂತಿಟ್ಟ ಪ್ರಕರಣ ವಿಧಾನಸಭಾ ಕಲಾಪದಲ್ಲಿ ಕಾವೇರಿದ ಚರ್ಚೆ: ಸಿದ್ದರಾಮಯ್ಯ ವಿರುದ್ದ 28 ಕೊಲೆ ಆರೋಪಕ್ಕೆ ಸರಕಾರದ ವಿರುದ್ಧ ಮುಗಿಬಿದ್ದ ವಿಪಕ್ಷ: ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಕಾನೂನು ಕ್ರಮಕ್ಕೆ ಗೃಹ ಸಚಿವರ ಸೂಚನೆ

ಬೆಂಗಳೂರು: ಧರ್ಮಸ್ಥಳದ ಶವ ಹೂತು ಹಾಕಿದ ಪ್ರಕರಣ ವಿಚಾರದಲ್ಲಿ ಸೋಮವಾರ ವಿಧಾನಸಭಾ ಕಲಾಪದಲ್ಲಿ ಕಾವೇರಿದ ಚರ್ಚೆ ನಡೆದಿದ್ದು, ಬಿಜೆಪಿ ಶಾಸಕರು ಸಿಎಂ ಸಿದ್ದರಾಮಯ್ಯ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ಅವರು ಕೊಲೆ ಆರೋಪ ಮಾಡಿದ್ದಾರೆ ಎಂದು ಪ್ರಸ್ತಾವಿಸಿ ಸರಕಾರದ ವಿರುದ್ಧ ಮುಗಿಬಿದ್ದರು.

ವಿಪಕ್ಷ ನಾಯಕ ಆ‌ರ್. ಅಶೋಕ್ ಅವರು ಧರ್ಮಸ್ಥಳದ ವಿಚಾರ ಪ್ರಸ್ತಾಪಿಸಿ “ಸಿಎಂ ಸಿದ್ದರಾಮಯ್ಯ ವಿರುದ್ದ 28 ಕೊಲೆ ಆರೋಪ ಮಾಡಿದ್ದಾರೆ. ಹೇಳಿಕೆ ನೀಡಿ 48 ಗಂಟೆ ಆಗಿದೆ. ಈ ಸರಕಾರಕ್ಕೆ ಕಿವಿಯೂ ಇಲ್ಲ. ಏನೂ ಇಲ್ಲ. ಸರಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ದೇಶದ ನಂಬರ್ 1 ಗೃಹ ಸಚಿವರು ಉತ್ತರಿಸಬೇಕು” ಎಂದು ಪಟ್ಟು ಹಿಡಿದರು. ಶಾಸಕ ಸುನಿಲ್ ಕುಮಾರ್ ಕೂಡ ಕಿಡಿ ಕಾರಿ ‘ಸಿಎಂ ವಿರುದ್ಧ ಮಾಡಿರುವ ಆರೋಪವನ್ನು ಹೌದು ಅಂತ ಒಪ್ಪಿಕೊಳ್ಳುತ್ತೀರಾ? ಸುಮ್ಮನೆ ಇದ್ದೀರಿ ಅಂದರೆ ಕೊಲೆಗಳನ್ನು ಮಾಡಿದ್ದೀರಿ ಎಂದರ್ಥ” ಎಂದರು.

ಬಿಜೆಪಿ ಸದಸ್ಯರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, “ಸಿಎಂ ವಿರುದ್ಧ ಹೇಳಿಲ್ಲ. ಅವರ ಹೇಳಿಕೆ ಗಮನಿದ್ದೇನೆ. ನಿಮ್ಮ ಪಕ್ಷದ ನಾಯಕರ ವಿರುದ್ಧನೂ ಮಾತನಾಡಿದ್ದಾರೆ. ಆದರೆ ಸದನದಲ್ಲಿ ಅವರ ಹೆಸರು ಉಲ್ಲೇಖ ಮಾಡಿ ಅವರನ್ನು ದೊಡ್ಡವರಾಗಿ ಮಾಡಬೇಡಿ. ಅವರು ಮಾತನಾಡಿದ ಹೇಳಿಕೆ ಸಿಎಂಗೆ ತಿಳಿಸಿದ್ದೇನೆ. ಅದಕ್ಕೆ ಅವರು ಗೃಹ ಸಚಿವರಿಗೆ ಸೂಚನೆ ನೀಡಿದ್ದಾರೆ”ಎಂದು ಸದನಕ್ಕೆ ಮಾಹಿತಿ ನೀಡಿದರು.
ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ “ನಾವು ಅಷ್ಟೊದು ಅಸಹಾಯಕರಲ್ಲ.ಆರ್.ಅಶೋಕ್ ಅವರೇ ನೀವು ಬಹಳ ಪ್ರಭಾವಿ ಗೃಹ ಸಚಿವರಾಗಿ ಕೆಲಸ ಮಾಡಿದ್ದೀರಿ ಎಂದು ಕುಟುಕಿದರು. ನಾನೇನು ಉದ್ವೇಗಕ್ಕೆ ಒಳಗಾಗಲ್ಲ ಎಂದು ಸುನಿಲ್ ಕುಮಾರ್ ಅವರಿಗೂ ತಿರುಗೇಟು ನೀಡಿದರು.

”ವ್ಯಕ್ತಿ ಮೇಲೆ ಹತ್ತಾರು ಕೇಸುಗಳಿವೆ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈ ರೀತಿಯ ವ್ಯಕ್ತಿಗಳನ್ನು ಸಮಾಜದಲ್ಲಿ ಬಿಡುವುದಕ್ಕೆ ಸಾಧ್ಯವಿಲ್ಲ. ಕಾನೂನು ಇದೆ, ಅದನ್ನು ಚಲಾಯಿಸುತ್ತೇವೆ” ಎಂದು ಪರಮೇಶ್ವ‌ರ್ ಹೇಳಿದರು.
ಇದೇ ವೇಳೆ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಮಧ್ಯ ಪ್ರವೇಶ ಮಾಡಿ, “ಸಿಎಂ 28 ಕೊಲೆ ಮಾಡಿದ್ದಾರೆಂಬ ಆರೋಪದ ಬಗ್ಗೆ ಎಸ್ ಐ ಟಿ ರಚನೆ ಮಾಡಿ” ಎಂದು ಒತ್ತಾಯಿಸಿದರು.

Related posts

ಜ.16-25: ಕಾಜೂರು ಮಖಾಂ ಉರೂಸ್: ಶಾಂತಿ ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಜೊತೆ ಸಮನ್ವಯ ಸಭೆ

Suddi Udaya

ಉಜಿರೆ: ಎಸ್ ಡಿ ಯಂ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ದಕ ಜಿಲ್ಲಾ ಕೇಂದ್ರ ಸಹಕಾರಿ ಸಂಘದಿಂದ ಸಾಧನಾ ಪ್ರಶಸ್ತಿ

Suddi Udaya

ಸಿ.ಎ ಪರೀಕ್ಷೆಯಲ್ಲಿ ಕುವೆಟ್ಟು ಮೇಗೇಶ್ ಯು. ಶೆಟ್ಟಿ ಉತ್ತೀರ್ಣ

Suddi Udaya

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಪಾಕೃತಿಕ ವಿಕೋಪಗಳ ಬಗ್ಗೆ ಪೂರ್ವ ತಯಾರಿ ಸಭೆ

Suddi Udaya

ಬೆಳ್ತಂಗಡಿ: ಒಂದೇ ದಿನ 3 ಕಡೆಗಳಲ್ಲಿ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಧರ್ಮಸ್ಥಳದ ಸ್ನೇಕ್ ಪ್ರಕಾಶ್

Suddi Udaya
error: Content is protected !!