22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾಳ: ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಟೋಟ ಸ್ಪರ್ಧೆ

ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪುಯುಕ್ತ ವಿವಿಧ ಆಟೋ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆ. 15ರಂದು ಜರಗಿದವು.

ಕಳಿಯ ಬೀಡಿನ ಸುರೇಂದ್ರ ಕುಮಾ‌ರ್ ಜೈನ್ ಸಾಂಪ್ರದಾಯಿಕವಾಗಿ ತೆಂಗಿನ ಸಸಿ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ಪುರುಷರು, ಮಹಿಳೆಯರು ಹಾಗೂ ಬಾಲಕ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಜೊತೆಗೆ ಮುದ್ದುಕೃಷ್ಣ ಸ್ಪರ್ಧೆ ಶ್ರೀಕೃಷ್ಣ ದೇವರ ಭಕ್ತಿಗೀತೆ ಸ್ಪರ್ಧೆ, ಶ್ರೀ ಕೃಷ್ಣ ದೇವರ ಚಿತ್ರ ಬಿಡಿಸುವ ಸ್ಪರ್ಧೆ ಸಾರ್ವಜನಿಕರಿಗೆ ಭಕ್ತಿ ಗೀತೆ ಸ್ಪರ್ಧೆ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ಪುರುಷರಿಗೆ ವಾಲಿಬಾಲ್ ಹಗ್ಗ ಜಗ್ಗಾಟ, ಮಡಕೆ ಹೊಡೆಯುವುದು, ಕಬಡ್ಡಿ ಪಂದ್ಯಾಟ ಜರುಗಿದರೆ, ಮಹಿಳೆಯರಿಗೆ ತ್ರೋಬಾಲ್ ಹಗ್ಗ ಜಗ್ಗಾಟ ಮಡಕ ಹೊಡೆಯುವ ಸ್ಪರ್ಧೆ ಲಕ್ಕಿ ಗೇಮ್, ಸಂಗೀತ ಕುರ್ಚಿ ಹಾಗೂ ಎರಡು ವಿಭಾಗದಲ್ಲಿ ನಿಧಾನ ದ್ವಿಚಕ್ರವಾಹನ ಚಾಲನಾ ಸ್ಪರ್ಧೆ ಜರಗಿತು ಹಾಗೂ ಬಾಲಕ ಬಾಲಕಿಯರಿಗೆ ವಿವಿಧ ಸ್ಪರ್ಧೆಗಳು ಜರುಗಿತು.

ಸಂಜೆ ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ. ಹರೀಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗಿತು. ಈ ಸಭೆಯಲ್ಲಿ ಸತೀಶ್ ಕುಮಾರ್ ಆರ್.ಎನ್., ಪ್ರಶಾಂತ್ ಉದ್ಯಮಿ ಬೆಳ್ತಂಗಡಿ, ಕೇಶವ ಪೂಜಾರಿ ನಾಳ ದಿನೇಶ್ ಗೌಡ ಕಲಾಯಿತೊಟ್ಟು, ವಿಕ್ರಂ ವಂಜಾರ, ಬೇಬಿಗೌಡ ಪೇರಾಜೆ ಹರೀಶ್ ರಾವ್ ನಾಳ, ನಿತಿನ್ ಶೆಟ್ಟಿ ನಿತೇಶ್ ಮಜಲು,ಡಾ ಅನಂತ್ ಭಟ್, ಜನಾರ್ದನ ಗೌಡ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಯಕ್ಷ ಕೂಟ ನಾಳ ಇವರ ಸಂಯೋಜನೆಯೊಂದಿಗೆ ಅಸಿಕ ಪರಿಣಯ ಎಂಬ ಯಕ್ಷಗಾನ ಬಯಲಾಟ ಜರಗಿತು. ವ್ಯವಸ್ಥಾಪನ ಸಮಿತಿ ಸದಸ್ಯರು ರಾಘವ. ಎಚ್, ಶರತ್ ಶೆಟ್ಟಿ, ಹರೀಶ್ ಗೌಡ, ರೀತಾ ಚಂದ್ರಶೇಖರ್, ಮೋಹಿನಿ ಗೌಡ, ನೀನಾ ನಾಯ್ಕ್ ಹಾಗೂ ಸಿಬ್ಬಂದಿ ಗಿರೀಶ್ ಶೆಟ್ಟಿ, ದೇವಸ್ಥಾನದ ಅಭಿವೃದ್ಧಿ ಸಮಿತಿ, ಮಾತೃ ಮಂಡಳಿ, ಭಜನಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಯುವ ಭಕ್ತರು ಹಾಜರಿದ್ದು ಸಹಕರಿಸಿದರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಭೇಟಿ

Suddi Udaya

ಕಕ್ಕಿಂಜೆ ಸೈಂಟ್‌ ಜೋಸೆಫ್‌ ಆಸ್ಪತ್ರೆಯ ಸೀಲ್ ಕಳವು

Suddi Udaya

ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾಮಠ ಕಾವೂರು ಮಂಗಳೂರು ಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರಿಂದ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಟ್ರಸ್ಟ್‌ನ ಲೋಗೋ ಅನಾವರಣ

Suddi Udaya

ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೇಳ (ಐಎನ್‌ಎಸ್‌ಇಎಫ್) 2024-25″ – ಶ್ರೀ ಧ.ಮಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯ ಅಧೀಶ್ ಬಿ.ಸಿ ಮತ್ತು ಆಲಾಪ್.ಎಂ ಗೆ ಚಿನ್ನದ ಪದಕ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ.

Suddi Udaya

ಪುಂಜಾಲಕಟ್ಟೆಯಲ್ಲಿ ಹೆಸರಾಂತ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್ ವಿಸ್ತೃತ ನೂತನ ಮಳಿಗೆಯ ಶುಭಾರಂಭ

Suddi Udaya

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ; ಸತತ ಮೂರನೇ ಅವಧಿಗೆ ಅಧ್ಯಕ್ಷರಾಗಿ ಉದ್ಯಮಿ, ಸಂಘಟಕ ಸುಂದರ ಹೆಗ್ಡೆ ಹಾಗೂ ಉಪಾಧ್ಯಕ್ಷರಾಗಿ ರತ್ನಾಕರ ಪೂಜಾರಿ ಅವಿರೋಧ ಆಯ್ಕೆ

Suddi Udaya
error: Content is protected !!