September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ತಾ.ಪಂ. ನಲ್ಲಿ ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ

ಬೆಳ್ತಂಗಡಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಬೆಳ್ತಂಗಡಿ ಹಿಂದುಳಿದ ವರ್ಗಗಳು ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110 ನೇ ಜನ್ಮದಿನಾಚರಣೆಯನ್ನು ಆ.20 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ದ.ಕ.ಜಿಲ್ಲಾ ಡಾ.ಎಂ.ಪಿ.ಶ್ರೀನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರ ಮನಸ್ಸಿನಲ್ಲಿ ಶಾಶ್ವತವಾಗಿ ದೇವರಾಜ ಅರಸುರವರ ಹೆಸರು ಅಜರಾಮರವಾಗಿದೆ. ಅವರ ಕಾಲದಲ್ಲಿ ಮಾಡಿರುವ ಕಾರ್ಯವೈಖರಿಗಳು ನೂರಾರು ವರ್ಷಗಳ ಕಾಲ ಶಾಶ್ವತ. ಜನ್ಮದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ವಿದ್ಯಾರ್ಥಿಗಳು ಅವರ ಸಾಧನೆ ಚರಿತ್ರೆಯನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ಪೃಥ್ವಿ ಸಾನಿಕಮ್ ಮಾತನಾಡಿ, ದೊಡ್ಡ ಆಸ್ತಿವಂತರಾಗಿದ್ದ ಅರಸು ಮನೆತನದ ದೇವರಾಜ ಅರಸರು ಭೂ ಮಸೂದೆ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಆರ್ಥಿಕ ಚೈತನ್ಯ, ಶಿಕ್ಷಣ, ಮೀಸಲಾತಿ ವಿಚಾರವಾಗಿ ಅಂದು ತಂದ ಕಾಯ್ದೆಗಳು, ನಿರ್ಧಾರಗಳು ಸಮಾನತೆಯನ್ನು ಸೃಷ್ಟಿಸಿದವು. ಭವಿಷ್ಯದ ದೃಷ್ಟಿಕೋನ ಬದಲಾವಣೆಗೆ ಕಾರಣವಾಯಿತು ಎಂದರು.

ವಿದ್ಯಾರ್ಥಿನಿ ಪ್ರಿಯಾ ಮಾತನಾಡಿ, ಕರುನಾಡಿನ ಜನತೆಯ ಶಕ್ತಿ ಅರಸರು. ಹಿಂದುಳಿದ ವರ್ಗಗಳು ಜನತೆಗೆ ಆತ್ಮಸ್ಥೈರ್ಯ ತುಂಬಿದವರು. ಸಿಎಂ ಅರಸುರವರ ಯುಗ ರಾಜ್ಯದ ಸುವರ್ಣ ಯುಗವಾಗಿತ್ತು. ಭೂಸುಧಾರಣೆ ಸಹ ಅನೇಕ ಯೋಜನೆಗಳನ್ನು ಕೊಡುಗೆಯಾಗಿ ನೀಡಿರುವ ಅರಸು ಮಹಾನ್ ನಾಯಕ. ಬಹುತೀಕವಾಗಿ ಕಣ್ಮರೆಯಾಗಿರುವ ಅರಸುರವರ ಬಡವರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಮಾತನಾಡಿ, ಭೂ ಸುಧಾರಣೆ ಮೂಲಕ ಸಾಮಾಜಿಕ ನ್ಯಾಯ ದೊರೆಕುವಂತೆ ಮಾಡಿದವರು. ಇದರಿಂದ ಸಮಾಜದಲ್ಲಿ ಸಮಾನತೆ ಸೃಷ್ಟಿಯಾಯಿತು. ಅದೊಂದು ಕ್ರಾಂತಿಕಾರಿ ಬದಲಾವಣೆಯಾಗಿದೆ. ಹಿಂದುಳಿದ ವರ್ಗಕ್ಕೆ ದೊಡ್ಡ ಹರಿಕಾರರಾದವರು. ದ.ಕ. ಜಿಲ್ಲೆಯಲ್ಲಿ ಶಿಕ್ಷಣ ಹಬ್ ಆಗಿ ಪರಿಣಮಿಸಿದೆ. ನಮ್ಮ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳು ಮಾತ್ರವಲ್ಲದೆ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯಲು ರಾಜ್ಯದ ಮೂಲೆಮೂಲೆಯಿಂದ ಬರುತ್ತಿದ್ದಾರೆ. ಇದು ಅರಸು ಅವರ ಕ್ರಾಂತಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಪ.ಪಂ. ಮುಖ್ಯಾಧಿಕಾರಿ ರಾಜೇಶ್ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಎಸೆಸೆಲ್ಸಿ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಬಂಧ, ಭಾಷಣ, ಚಿತ್ರಕಲೆ, ಕ್ರೀಡಾ ಕ್ಷೇತ್ರದ ಸಾಧಕರಿಗೆ ಬಹುಮಾನ ನೀಡಿ ಗುರುತಿಸಲಾಯಿತು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಧಿಕಾರಿ ಜೋಸೆಫ್ ಪಿ.ಎಸ್. ಪ್ರಾಸ್ತಾವಿಸಿ, ಸ್ವಾಗತಿಸಿದರು. ನಿಲಯ ಪಾಲಕ ಲೋಕೇಶ್ ನಿರೂಪಿಸಿದರು. ನಿಲಯ ಮೇಲ್ವಿಚಾರಕ ಸುನಿಲ್ ವಂದಿಸಿದರು.

Related posts

ಗೇರುಕಟ್ಟೆ :ಸಂವಿಧಾನ ಜಾಗೃತಿ ಜಾಥಾ

Suddi Udaya

ಬಲ್ಲಾಳರಾಯನ ದುರ್ಗಕ್ಕೆ ಟ್ರಕ್ಕಿಂಗ್ ಬಂದು ಕಾಡಿನ ಮಧ್ಯೆ ದಾರಿ ತಪ್ಪಿದ ಕಾಲೇಜು ವಿದ್ಯಾರ್ಥಿಗಳ ತಂಡ

Suddi Udaya

ಅಳದಂಗಡಿ ಬೆಟ್ಟದ ಬಸದಿ ಭಗವಾನ್ ಶ್ರೀ ಬ್ರಹ್ಮದೇವರ ಬಸದಿ, ಜೀರ್ಣೋದ್ಧಾರಕ್ಕೆ ಸರ್ಕಾರದಿಂದ 50 ಲಕ್ಷ ಮತ್ತು ಸವಣಾಲು ಶ್ರೀ ಆದಿನಾಥ ಸ್ವಾಮಿ ಬಸದಿ, ಜೀರ್ಣೋದ್ಧಾರಕ್ಕೆ 9 ಲಕ್ಷ ಅನುದಾನ ಮಂಜೂರು: ರಕ್ಷಿತ್ ಶಿವರಾಂ

Suddi Udaya

ಯುವವಾಹಿನಿ ವೇಣೂರು ಘಟಕದ ವಾರ್ಷಿಕ ಮಹಾಸಭೆ: ಪದಾಧಿಕಾಗಳ ಆಯ್ಕೆ

Suddi Udaya

ಶಾಸಕ ಹರೀಶ್ ಪೂಂಜರಿಂದ ಬಳಂಜ ಶಾಲಾ ಎಲ್.ಕೆ.ಜಿ ಕೊಠಡಿ ಉದ್ಘಾಟನೆ ಮತ್ತು ಅಶ್ವಥ್ ಹೆಗ್ಡೆ ಫೌಂಡೇಶನ್ ನಿಂದ ಶಾಲಾ ವಾಹನ ಸಮರ್ಪಣೆ

Suddi Udaya

ಮುಂಡಾಜೆ: ರಾಷ್ಟ್ರೀಯ ಮತದಾರರ ದಿನಾಚರಣೆ

Suddi Udaya
error: Content is protected !!