September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರು ಸೇರಿ ಮೃತದೇಹ ಹೂತು ಹಾಕಿರುವ ಆರೋಪ ಪ್ರಕರಣ : ಭಾಸ್ಕರ್ ನಾಯ್ಕ್ ರವರಿಂದ ಎಸ್.ಐ.ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ : ಉಜಿರೆಯಲ್ಲಿ ಕೆಲವು ವ್ಯಕ್ತಿಗಳು ಸೇರಿಕೊಂಡು ಮೃತದೇಹವೊಂದನ್ನು ಹೂತು ಹಾಕಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದರೂ ಸಮರ್ಪಕವಾಗಿ ತನಿಖೆ ನಡೆದಿಲ್ಲ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಉಜಿರೆ ನಿವಾಸಿ ಭಾಸ್ಕರ್ ನಾಯ್ಕ್ ಬಡೆಕೊಟ್ಟು ಎಂಬವರು ಎಸ್.ಐ.ಟಿ ಕಚೇರಿಗೆ ಆ.20 ರಂದು ದೂರು ನೀಡಿದ್ದಾರೆ.

ಎಸ್.ಐ.ಟಿ ಅಧಿಕಾರಿಗಳು ದೂರು ಸ್ವೀಕರಿಸಿದ್ದು ದೂರಿನ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು ಯಾವುದೇ ಅಪರಾಧ ಕೃತ್ಯದ ಕುರಿತು ಮಾಹಿತಿ ದೂರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಮುಂದಿನ ಕ್ರಮ ಜರುಗಿಸುವ ಕುರಿತು ಸಲ್ಲಿಸುವಂತೆ ಹಿಂಬರಹ ನೀಡಿದ್ದಾರೆ.

ಉಜಿರೆ ಗ್ರಾಮದ ನಿವಾಸಿಯಾಗಿರುವ ಸೋಂಪ ಯಾನೆ ಬಾಲಕೃಷ್ಣ ಶೆಟ್ಟಿ ಎಂಬವರು ಕಾಣೆಯಾಗಿದ್ದು ಈ ಬಗ್ಗೆ 18/12/2018 ರಂದು ದೂರನ್ನು ನೀಡಲಾಗಿತ್ತು. ಇದೆ ಸಂದರ್ಭದಲ್ಲಿ ಉಜಿರೆ ಬಿಲ್ಲರೋಡಿ ಎಂಬಲ್ಲಿ ಸರಕಾರಿ ಸ್ಥಳದಲ್ಲಿ ಮರ ಕಡಿಯುವ ವೇಳೆ ಮೃತದೇಹವೊಂದು ಕಂಡು ಬಂದಿರುವುದಾಗಿ ತಿಳಿದು ಬಂದಿದ್ದು ಆ ಮೃತದೇಹವನ್ನು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರು ಸೇರಿ ಜೆಸಿಬಿ ಮೂಲಕ ಮುಚ್ಚಿಹಾಕಿದ್ದಾರೆ ಎಂಬ ವದಂತಿಯು ಹರಿದಾಡುತ್ತಿದೆ.

ಈ ಬಗ್ಗೆ ನಾಪತ್ತೆಯಾದ ವ್ಯಕ್ತಿಯ ಮನೆಯವರಲ್ಲಿ ದೂರು ನೀಡಲು ಹೇಳಿದರೂ ಅವರು ದೂರು ನೀಡಿಲ್ಲ. ಇದಾದ ಬಳಿಕ ತಾನು ಬೆಳ್ತಂಗಡಿ ಪೊಲೀಸರಿಗೆ 8/12/2018ರಂದು ದೂರು ನೀಡಿದ್ದೆ ಸಂಶಯವಿರುವ ವ್ಯಕ್ತಿಗಳ ಹೆಸರುಗಳನ್ನು ನೀಡಿದ್ದೆ ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಒತ್ತಡಕ್ಕೆ ಮಣಿದು ಸಮರ್ಪಕವಾಗಿ ತನಿಖೆಯನ್ನು ನಡೆಸಿಲ್ಲ. ನಾಪತ್ತೆಯಾದ ವ್ಯಕ್ತಿ ಅಂದಿನಿಂದ ಇಂದಿನ ವರೆಗೂ ಹಿಂತಿರುಗಿ ಬಂದಿಲ್ಲ. ಈ ಹಿನ್ನಲೆಯಲ್ಲಿ ಸೋಂಪ ಯಾನೆ ಬಾಲಕೃಷ್ಣ ಶೆಟ್ಟಿಯ ಮೃತದೇಹವನ್ನು ಕಾನೂನು ಬಾಹಿರವಾಗಿ ಸರಕಾರಿ ಜಾಗದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗು ಇತರರು ಹೂತು ಹಾಕಿರುವುದಾಗಿ ಅನುಮಾನವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಎಸ್.ಐ.ಟಿ ಅಧಿಕಾರಿಗಳು ದೂರನ್ನು ಸ್ವೀಕರಿಸಿದ್ದಾರೆ.

Related posts

ಮಹಾಭಾರತ ಸರಣಿ ತಾಳಮದ್ಧಳೆಯುವ ಕಲಾವಿದ ಪ್ರವೀತ ಆಚಾರ್ಯರಿಗೆ ಶ್ರದ್ದಾಂಜಲಿ ಅರ್ಪಣೆ

Suddi Udaya

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿಗಳ ಉತ್ತಮ ಸಾಧನೆ

Suddi Udaya

ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಆಡಳಿತ ಮಂಡಳಿಗೆ ಚುನಾವಣೆ ಬೆಳ್ತಂಗಡಿ ಕ್ಷೇತ್ರದಿಂದ ಕುಶಾಲಪ್ಪ ಗೌಡ ಪೂವಾಜೆ ಅವಿರೋಧ ಆಯ್ಕೆ

Suddi Udaya

ಯುವವಾಹಿನಿ ಗ್ರಾಮ ಚಾವಡಿ-ಕೊಣಾಜೆ ಘಟಕದ ಸ್ಥಾಪಕ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಇಲಂತಿಲ ಆಯ್ಕೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಎಂಟನೇ ದಿನದ ಬ್ರಹ್ಮಕಲಶೋತ್ಸವ:

Suddi Udaya

ಶಿಶಿಲ: ಶ್ರೀ ಗಡಿ ಚಾಮುಂಡಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಸಮರ್ಪಣೆ; ಚಂಡಿಕಾಹೋಮ

Suddi Udaya
error: Content is protected !!