32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಶುಭಾರಂಭ

ಶುಚಿ-ರುಚಿಯಾದ ಊಟೋಪಚಾರಗಳಿಗೆ ಹೆಸರುವಾಸಿಯಾದ ಶ್ರೀದೇವಿ ಹೋಟೆಲ್ ಬೆಳ್ತಂಗಡಿಯಲ್ಲಿ ಶುಭಾರಂಭ

ಬೆಳ್ತಂಗಡಿ: ಬೆಳ್ತಂಗಡಿ ಮುಖ್ಯರಸ್ತೆ ಮುಳಿಯ ಜ್ಯುವೆಲ್ಲರ್ಸ್ ಬಳಿ ಶ್ರೀಮತಿ ಸುಚಿತ್ರಾ ಮತ್ತು ಗೋಪಾಲ್ ಮಾಲಕತ್ವದ ಶುಚಿ ರುಚಿಯಾದ ಊಟೋಪಚಾರಗಳಿಗೆ ಹೆಸರುವಾಸಿಯಾದ ಹೋಟೆಲ್ ಶ್ರೀದೇವಿ ಶುದ್ಧ ಸಸ್ಯಾಹಾರಿ ಇದರ ಶುಭಾರಂಭವು ಆ.22 ರಂದು ನಡೆಯಿತು.

ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ‘ಪ್ರಜ್ವಲ್’ ದೀಪ ಬೆಳಗಿಸಿ ನೂತನ ಹೋಟೇಲನ್ನು ಉದ್ಘಾಟಿಸಿ ಬರುವ ಗ್ರಾಹಕರಿಗೆ ನಗು ಮೊಗದ ಸೇವೆ ನೀಡಿದಾಗ ಸಂಸ್ಥೆಯು ಪ್ರಗತಿ ಹೊಂದುತ್ತದೆ.ದೈವ ದೇವರ ಅನುಗ್ರಹದಿಂದ ಹೋಟೇಲ್ ನಲ್ಲಿ ಒಳ್ಳೆಯ ವ್ಯಾಪಾರ ವಹಿವಾಟು ನಡೆಯಲಿ ಎಂದರು.

ಈ ಸಂದರ್ಭದಲ್ಲಿ ಮಯೂರ ಟೆಕ್ಸ್ಟ್ ಟೈಲ್ಸ್ ಮಾಲಕ ಪದ್ಮನಾಭ, ಉದ್ಯಮಿ ಸುಧೀರ್, ಸುದ್ದಿ ಉದಯ ವಾರಪತ್ರಿಕೆಯ ಬಿ.ಎಸ್ ಕುಲಾಲ್, ಸಂತೋಷ್ ಪಿ ಕೋಟ್ಯಾನ್, ತುಕರಾಮ್ ಬಿ, ತಿಮ್ಮಪ್ಪ ಗೌಡ, ಸುಧೀತ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಮುಖ್ ನವೀನ್ ನೆರಿಯ, ಬ್ಯಾಂಕ್ ಉದ್ಯೋಗಿಯಾದ ವಿನಯ್ ಶೆಟ್ಟಿ, ರೇಖಾ ಸುಧೀರ್, ಜತ್ತಪ್ಪ ಸುವರ್ಣ-ನಾರಾಯಿಣಿ ಧರ್ಮಸ್ಥಳ, ಡೀಕಯ್ಯ ಪೂಜಾರಿ-ಪ್ರೇಮ ಕೊಯ್ಯೂರು, ಹರೀಶ್, ಮೋಹನ್ ಹಾಗೂ ಬಂಧು ಬಳಗದವರು ಉಪಸ್ಥಿತರಿದ್ದು ಶುಭ ಕೋರಿದರು.

ಸಂಸ್ಥೆಯ ಮಾಲಕರಾದ ಗೋಪಾಲ್ ಪೂಜಾರಿ-ಶ್ರೀಮತಿ ಸುಚಿತ್ರಾ, ಚಿಂತನ್, ಚಾರ್ವಿ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.

ಹೋಟೆಲ್‌ನಲ್ಲಿ ಫ್ರೆಶ್ ಜ್ಯೂಸ್, ಚಹಾ, ಕಾಫಿ, ತಿಂಡಿ, ಚಾಟ್ಸ್, ಚೈನೀಸ್ ಐಟಂ ಹಾಗೂ ಊಟ ದೊರೆಯುತ್ತದೆ ಹಾಗೂ ವಿಶೇಷ ಕಾರ್ಯಕ್ರಮಗಳಿಗೆ ಕ್ಯಾಟರಿಂಗ್ ಸೌಲಭ್ಯವು ಕೂಡ ಲಭ್ಯವಿದೆ ಎಂದು ಮಾಲಕರು ತಿಳಿಸಿದರು.

Related posts

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಯುವನಿಧಿ ನೊಂದಣಿ ಶಿಬಿರ

Suddi Udaya

ಮದ್ದಡ್ಕ : ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದ ಕಾರು 

Suddi Udaya

ಬಂದಾರು ಗ್ರಾಮದ ಕುಂಟಾಲಪಲ್ಕೆ ಸೇತುವೆ ಬಳಿ ಭಾರಿ ಗಾತ್ರದ ಗುಡ್ಡ ಕುಸಿತ ವಾಹನ ಸಂಚಾರ ಸoಪೂರ್ಣ ಬಂದ್.

Suddi Udaya

ಮಾ.26-28: ಅಳದಂಗಡಿ ಅಂಗತ್ಯಾರು ಬಾಕಿಮಾರು ಶ್ರೀ ಬ್ರಹ್ಮ ಮೊಗೇರ್ಕಳ ಗರಡಿಯಲ್ಲಿ ವಾರ್ಷಿಕ ನೇಮೋತ್ಸವ

Suddi Udaya

ನಿಡ್ಲೆ ಸರಕಾರಿ ಪ್ರೌಢ ಶಾಲೆಗೆ ಶೇ.95.83 ಫಲಿತಾಂಶ

Suddi Udaya

ನಾಳ ಶರನ್ನವರಾತ್ರಿ ಪೂಜೆ ಮತ್ತು ಭಜನೋತ್ಸವ

Suddi Udaya
error: Content is protected !!