ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಆಯ್ಕೆಗೊಂಡ ಅಥಿ ವಂದನೀಯ ಜೇಮ್ಸ್ ಪಟ್ಟೇರಿಲ್ ರವರಿಗೆ ಬೆಳ್ತಂಗಡಿಯ ಕತೀಡ್ರಲ್ ಚರ್ಚ್ನಲ್ಲಿ ಸ್ವಾಗತಿಸಲಾಯಿತು.
ಧರ್ಮಾಧ್ಯಕ್ಷರಾದ ಅಥಿವಂದನೀಯ ಲಾರೆನ್ಸ್ ಮುಕ್ಕುಯಿಯವರೊಂದಿಗೆ ಆಗಮಿಸಿದ ನೂತನ ಧರ್ಮಾಧ್ಯಕ್ಷರಿಗೆ ಧರ್ಮಪ್ರಾಂತ್ಯದ ವಿಕಾರ್ ಜನರಾಲ್ ವಂದನೀಯ ಜೋಸೆಫ್, ಚಾನ್ಸಲರ್ ಫಾ ಲಾರೆನ್ಸ್, ಫಾ ಅಬ್ರಹಾಂ, ಧರ್ಮಪ್ರಾಂತ್ಯದ ಎಲ್ಲ ಧರ್ಮಗುರುಗಳು, ಧರ್ಮ ಭಗಿನಿಯಯರು ಕ್ರೈಸ್ತ ಬಾಂದವರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಥಿ ವಂದನೀಯ ಜೇಮ್ಸ್ ಪಟ್ಟೇರಿಲ್ ರವರು, “ನಾವು ಒಮ್ಮನದಿಂದ ಮುಂದೆ ಸಾಗೋಣ, ಒಗ್ಗಟಿನಲ್ಲಿದ್ದು ಪರಸ್ಪರ ಸಹಕಾರದಿಂದ ಒಂದಷ್ಟು ಒಳಿತನ್ನು ಮಾಡಲು ನಮಗೆ ಸಾಧ್ಯ ಅದಕ್ಕಾಗಿ ಬೇಕಂತ ತಳಪಾಯ ಅತಿ ವಂದನೀಯ ಲಾರೆನ್ಸ್ ರವರು ಹಾಕಿರುತ್ತಾರೆ. ಆ ತಳಪಾಯದ ಮೇಲೆ ಧೈರ್ಯವಾಗಿ ನಾವು ಸಾಗಲು ಸಾಧ್ಯ’ ಎಂದರು.

ಹೊಸ ಧರ್ಮಾಧ್ಯಕ್ಷರನ್ನು ಸ್ವಾಗತ ಮಾಡುತ್ತಾ ಲಾರೆನ್ಸ್ ಮುಕ್ಕುಯಿಯವರು ‘ ನಮಗೆ ಅತತ್ಯುತ್ತಮರಾದ ಧರ್ಮಾಧ್ಯಕ್ಷರನ್ನು ನಮಗೆ ಲಭಿಸಿದೆ. ದೇವರೇ ಕೃಪಾ ನಮ್ಮ ಮೇಲೆ ಇದೆ. ಈ ನಾಡಿನ ಮಗನನ್ನೇ ನಮಗೆ ಧರ್ಮಾಧ್ಯಕ್ಷರಾಗಿ ಸಿಕ್ಕಿದೆ, ಅದರಲ್ಲಿ ತುಂಬ ಸಂತೋಷ” ಎಂದರು.











