September 6, 2026
Uncategorized

ಮೈಸೂರು ಚಾಮರಾಜನಗರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ಎರಡು ಸಾವಿರ ಮಂದಿಯಿಂದ ಧರ್ಮಸ್ಥಳ ಚಲೋ


ಧರ್ಮಸ್ಥಳ : ಮೈಸೂರಿನ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ಹರೀಶ್ ಗೌಡರ ನೇತೃತ್ವದಲ್ಲಿ ಎರಡು ಸಾವಿರ ಮಂದಿ ಭಕ್ತರು ಹಾಗೂ ಅಭಿಮಾನಿಗಳು ಸೆ.3 ಬುಧವಾರ ಸಂಜೆ ಧರ್ಮಸ್ಥಳಕ್ಕೆ ೫೦ ವಾಹನಗಳಲ್ಲಿ ಆಗಮಿಸಿದರು. ಅವರನ್ನು ಮುಖ್ಯಪ್ರವೇಶದ್ವಾರದ ಬಳಿ ಸ್ವಾಗತಿಸಲಾಯಿತು.
ಬಳಿಕ ಅವರು ದೇವರ ದರ್ಶನ ಮಾಡಿ, “ಅನ್ನಪೂರ್ಣ”ದಲ್ಲಿ ಪ್ರಸಾದ ಸ್ವೀಕರಿಸಿದರು. ಧರ್ಮಸ್ಥಳದ ಬಗ್ಗೆ ಆಗುತ್ತಿರುವ ಅಪಪ್ರಚಾರವನ್ನು ಖಂಡಿಸಿ ಸರ್ವಧರ್ಮ ಸಮನ್ವಯ ಕ್ಷೇತ್ರದ ರಕ್ಷಣೆ ಹಾಗೂ ಪಾವಿತ್ರತೆಯನ್ನು ಕಾಪಾಡುವ ಬಗ್ಗೆ ಅವರು ತಮ್ಮಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಪತ್ತಿನ ಸಹಕಾರಿ ಮಹಾಮಂಡಲದ ಅಧ್ಯಕ್ಷರಾದ ಚಂದ್ರಶೇಖರ, ಕಾಂಗ್ರೆಸ್ ಪಕ್ಷದ ಮುಖಂಡ ಮಂಜುನಾಥ, ಬ್ಲಾಕ್ ಅಧ್ಯಕ್ಷ ರಮೇಶರಾಯಪ್ಪ, ರವಿ, ಮೈಸೂರಿನ ಮಾಜಿ ಮೇಯರ್ ಪುಷ್ಪಲತಾಚಿಕ್ಕಣ್ಣ, ಪುಷ್ಪವಲ್ಲಿ ಮೊದಲಾದವರು ಸೇರಿದಂತೆ ಸುಮಾರು 2೦೦೦ ಮಂದಿ ಆಗಮಿಸಿದ್ದಾರೆ.

Related posts

ಬೆಳ್ತಂಗಡಿ ಎಸ್. ಡಿ .ಎಮ್ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮವು “ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ” ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಗೆ ಆಯ್ಕೆ

Suddi Udaya

ಸುಬ್ರಹ್ಮಣ್ಯದಲ್ಲಿದ್ದ ನಿರ್ಗತಿಕ ಬೆಂಗಳೂರಿನ ಜನ ಸ್ನೇಹಿ ಕೇಂದ್ರಕ್ಕೆ

Suddi Udaya

ಚಾಲಕನ ನಿಯಂತ್ರಣ ತಪ್ಪಿ ಟಿ.ಟಿ ವಾಹನ ರಸ್ತೆಗೆ ಪಲ್ಟಿ: ಉಜಿರೆಯ ಮಾಲಾಧಾರಿಗಳಿಗೆ ಗಾಯ

Suddi Udaya

ಬೆಳ್ತಂಗಡಿ ಗಣೇಶ್ ಹೋಟೆಲ್ ನ ಮಾಲಕ ದಿವಾಕರ ಪ್ರಭು ನಿಧನ

Suddi Udaya

ಚಾರ್ಮಾಡಿ ಘಾಟ್‌ನಲ್ಲಿ ಟಿಟಿ ವಾಹನ ಪಲ್ಟಿ: 9 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

Suddi Udaya
error: Content is protected !!