September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ತೋಡಿನಂತಿರುವ ಕುಪ್ಪೆಟ್ಟಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ : ಭಯಾನಕ ಗುಂಡಿಗಳಿಗೆ ತೇಪೆ ಕಾರ್ಯ

ಗುರುವಾಯನಕೆರೆಯಿಂದ ಉಪ್ಪಿನಂಗಡಿ ಸಂಪರ್ಕದ ರಾಜ್ಯ ಹೆದ್ದಾರಿ ರಸ್ತೆ ತೋಡಾಗಿ ಮಾರ್ಪಡುತ್ತಿದೆ. ಸಾವಿರಾರು ವಾಹನ ಓಡಾಟ ಇರುವ ಈ ರಸ್ತೆ ಬೇಸಿಗೆಯಲ್ಲಿ ಸಾಕಷ್ಟು ಹಾಳಾಗಿದ್ದು ಇದೀಗ ನಿರಂತರ ಮಳೆಯಿಂದ ಸಂಪೂರ್ಣ ಹದಗೆಟ್ಟು ಹೋಗಿದೆ. ಕುಪ್ಪೆಟೆಯಿಂದ ಉಪ್ಪಿನಂಗಡಿ ತನಕದ 7 ಕಿಮೀ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳು ಎದ್ದು ಬಿದ್ದು ಓಡಾಡುವ ಸ್ಥಿತಿ ಉಂಟಾಗಿದೆ. 15 ನಿಮಿಷದ ಪ್ರಯಾಣಕ್ಕೆ 1ಗಂಟೆಯಷ್ಟು ಸಮಯ ವ್ಯಯವಾಗುತ್ತಿದೆ.

ದಿನದಿಂದ ದಿನಕ್ಕೆ ಆಳಗೊಳ್ಳುತ್ತಿರುವ ಈ ರಸ್ತೆಯ ಹೊಂಡಗಳು ಈಗ ಹಳ್ಳಗಳಾಗುತ್ತಿವೆ. ರಸ್ತೆಯುದ್ದಕ್ಕೂ ನಿರ್ಮಾಣವಾಗಿರುವ ಹೊಂಡಗಳಲ್ಲಿ ಮಳೆ ನೀರು ಹರಿದು ಹೋಗುತ್ತಿದೆ. ಮಳೆ ವೇಳೆ ಈ ರಸ್ತೆಯ ಹೊಂಡಗಳ ಆಳ-ಅಗಲ ಅರಿವಾಗದ ವಾಹನ ಸವಾರರು ಹೈರಾಣರಾಗುತ್ತಿದ್ದಾರೆ.

ಪ್ಯಾಚ್ ವರ್ಕ್ ಆರಂಭ :
ತಿಂಗಳ ಹಿಂದೆ ಈ ರಸ್ತೆಯ ಅಲ್ಲಲ್ಲಿ ಪ್ಯಾಚ್ ವರ್ಕ್ ನಡೆದಿತ್ತು. ಆದರೆ ಪ್ಯಾಚ್ ವರ್ಕ್ ನಡೆಯುತ್ತಿದ್ದಂತೆ ಭಾರಿ ಮಳೆ ಮುಂದುವರಿದು ಹೊಂಡಗಳಿಗೆ ಹಾಕಿದ ಜಲ್ಲಿ,ಕಾಂಕ್ರೀಟ್ ಹುಡಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಇನ್ನಷ್ಟು ಆಳವಾದ ಹೊಂಡಗಳ ಜತೆ ಹೊಸ ಹೊಸ ಹೊಂಡಗಳು ಉಂಟಾಗಿತ್ತು ಆದರೆ ಇದೀಗ ಲೋಕೋಪಯೋಗಿ ಇಲಾಖೆಗೆ ಭಯಾನಕ ಗುಂಡಿಗಳಿಗೆ ಜಲ್ಲಿ ಹುಡಿ ಹಾಕಿ ಮುಚ್ಚುವ ಕಾರ್ಯ ನಡೆಸುತ್ತಿದೆ.

ರಸ್ತೆ ಅಭಿವೃದ್ಧಿ ಕುರಿತು ಪ್ರಸ್ತಾವನೆ ಸಲ್ಲಿಸಿ ತಿಂಗಳು ಕಳೆದರೂ ಮರು ಡಾಮರೀಕರಣದ ಕುರಿತು ಯಾವುದೇ ಮಾಹಿತಿ ಇದುವರೆಗೂ ಬರೆದೆವಿರುವುದು ವಿಪರ್ಯಾಸ. ಮಳೆ ಕಡಿಮೆಯಾದರೆ ಗುಂಡಿಗಳಿಗೆ ತುಂಬಿಸಿದ ಜಲ್ಲಿ ಹುಡಿಯ ಧೂಳು ಸವಾರರಿಗೆ ಶಾಪವಾಗಿ ಪರಿಣಮಿಸಿದೆ.

ಈ ರಸ್ತೆ ದುರಸ್ತಿ ಬಗ್ಗೆ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಪ್ರತಿಭಟನೆಯು ನಡೆದಿತ್ತು. ಬಳಿಕ ರಸ್ತೆ ಸ್ಥಿತಿ ಕುರಿತು ಸದನದಲ್ಲೂ ಭಾರಿ ಚರ್ಚೆಯಾಗಿತ್ತು. ಆದರೆ ರಸ್ತೆ ದುರಸ್ತಿ ಎಂಬುದು ಮರೀಚಿಕೆಯಾಗಿಯೇ ಮುಂದುವರಿದಿದೆ.
ಫೆಬ್ರವರಿ ತಿಂಗಳಿನಲ್ಲಿ ಗುರುವಾಯನಕೆರೆಯಿಂದ ಕುಪ್ಪೆಟಿ ತನಕದ 7 ಕಿಮೀ ವ್ಯಾಪ್ತಿಯ ಈ ರಸ್ತೆಗೆ ಎಂಪಿ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿಯಿಂದ ಡಾಮರೀಕರಣ ನಡೆದಿತ್ತು.ಆದರೆ ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ತನಕ 7 ಕಿಮೀ ರಸ್ತೆ ಅಭಿವೃದ್ಧಿ ಹೊಂದಿಲ್ಲ.ಇದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರದ ವೇಳೆ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ. ಜನಪ್ರತಿನಿಧಿಗಳು, ಸರಕಾರ ಈ ರಸ್ತೆ ಅಭಿವೃದ್ಧಿ ಕುರಿತು ಭರವಸೆ ನೀಡುತ್ತಿದ್ದಾರೆಯೇ ಹೊರತು ಕಾಮಗಾರಿ ನಡೆಸುವ ಬಗ್ಗೆ ಯೋಚಿಸದಿರುವುದು ವಿಪರ್ಯಾಸವಾಗಿದೆ.

Related posts

ಕಾಜೂರು ಉರೂಸ್ ಪ್ರಯುಕ್ತ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

Suddi Udaya

ಮದ್ದಡ್ಕ ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಅಕ್ರಮವಾಗಿ ಚಿಕ್ಕಮಗಳೂರಿನಿಂದ ಸಾಲೆತ್ತೂರಿಗೆ ಗೋವುಗಳ ಸಾಗಾಟ: ವಾಹನ ಹಾಗೂ ಚಾಲಕರನ್ನು ವಶಕ್ಕೆ ಪಡೆದ ಬೆಳ್ತಂಗಡಿ ಪೊಲೀಸರು

Suddi Udaya

ಬೈಕ್‌ಗೆ ಅಡ್ಡ ಬಂದ ನಾಯಿ: ಬೈಕ್ ಪಲ್ಟಿಯಾಗಿ ನವವಿವಾಹಿತೆ ದಾರುಣ ಸಾವು

Suddi Udaya

ಮಿತ್ತಬಾಗಿಲು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಿಶೇಷ ತರಗತಿ ಕಾರ್ಯಕ್ರಮದ ಉದ್ಘಾಟನೆ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಉಡುಪಿ, ದ.ಕ ಸಾಧನೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಶ್ಲಾಘನೆ

Suddi Udaya
error: Content is protected !!