September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಅಳದಂಗಡಿ: ಕಳೆದ 49 ವರ್ಷಗಳ ಹಿಂದೆ ಪ್ರಾರಂಭಗೊಂಡ ಅಳದಂಗಡಿ ಸಹಕಾರಿ ಸಂಘವು ರೈತ ಸದಸ್ಯರ ಸಹಕಾರದಿಂದ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಪ್ರಸಕ್ತ ಸಾಲಿನಲ್ಲಿ ಸಂಘವು ವಾರ್ಷಿಕವಾಗಿ ರೂ 461 ಕೋಟಿ ವ್ಯವಹಾರ ನಡೆಸಿ, ರೂ1.86 ಕೋಟಿ ಲಾಭ ಗಳಿಸಿದೆ ಎಂದು ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ಹೇಳಿದರು.

ಅವರು ಸೆ. 5 ರಂದು ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ವೇ ಜನ ಸುಖಿನೋ ಭವಂತು ಎಂಬ ಧ್ಯೇಯದೊಂದಿಗೆ ಸಂಘವು ವ್ಯವಹಾರದೊಂದಿಗೆ ಸಮಾಜಮುಖಿಯಾಗಿಯು ಗುರುತಿಸಿಕೊಂಡಿದೆ. ಪ್ರಸ್ತುತ ವರ್ಷದ ಆರ್ಥಿಕ ಲೆಕ್ಕಚಾರದೊಂದಿಗೆ ಸದಸ್ಯರಿಗೆ ಶೇ.,14%ಡಿವಿಡೆಂಟ್ ನೀಡಲಾಗುವುದು ಎಂದರು.

ವಾರ್ಷಿಕ ಮಹಾಸಭೆಯಲ್ಲಿ ರೈತ ಸದಸ್ಯರ ಕ್ಷೇಮಾಭಿವೃದ್ಧಿ ಹಾಗೂ ವಿವಿಧ ಯೋಜನೆಗಳ ಬಗ್ಗೆ ಹಲವಾರು ಚರ್ಚೆಗಳು ನಡೆದವು.ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಅಳದಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಜನಾರ್ಧನ, ನಿರ್ದೇಶಕರಾದ ಗುರುಪ್ರಸಾದ್, ವಿಶ್ವನಾಥ ಹೊಳ್ಳ, ಹೇಮಂತ್, ದೇವಿಪ್ರಸಾದ್ ಶೆಟ್ಟಿ, ದಿನೇಶ್ ಪಿಕೆ,ದೇಜಪ್ಪ ಪೂಜಾರಿ, ಕೊರಗಪ್ಪ,ಸುಂದರಿ, ಮಮತಾ, ಧರ್ಣಪ್ಪ ,ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸುದರ್ಶನ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಮೀರಾ ಉಪಸ್ಥಿತರಿದ್ದರು.

ಸಿಬ್ಬಂದಿಗಳಾದ ಸತೀಶ್ ಕೆ,ಪ್ರಶಾಂತ್ ಎಸ್,ಭರತ್ ರಾಜ್, ಜಗದೀಶ್ ಶೆಟ್ಟಿ, ಮಮತಾ,ಸಂತೋಷ್, ಯತೀಶ್ ಡಿ, ಹರೀಶ್ ನಾಯ್ಕ, ದಿನೇಶ್ ಎ, ಶ್ರೀದೇವಿ, ಸುಮಲತಾ, ಪ್ರವೀಣ ಕೆ ಸಹಕರಿಸಿದರು.

Related posts

ಗೇರುಕಟ್ಟೆ: ಉಚಿತ ಯೋಗ ಶಿಕ್ಷಣ ತರಗತಿಯ ಉದ್ಘಾಟನೆ

Suddi Udaya

ಕ್ಯಾಂಟಿನ್‌ನಲ್ಲಿ ವೇಶ್ಯಾವಟಿಕೆ ಪ್ರಕರಣ: ಆರೋಪಿ ಸುಂದರ್ ಶೆಟ್ಟಿಗೆ ಜಾಮೀನು ಮಂಜೂರು

Suddi Udaya

ಮಳೆ ಹಿನ್ನೆಲೆ: ನಾಳೆ(ಆ.3) ಮಂಗಳೂರು ಉಪ ವಿಭಾಗದ ತಾಲೂಕು – ಪುತ್ತೂರು ಉಪ ವಿಭಾಗದ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಬರೆಂಗಾಯ ನಿಸರ್ಗ ಯುವಜನೇತರ ಮಂಡಲ ಹಾಗೂ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ

Suddi Udaya

ಶಿಶಿಲ: ಹೊಸಕಟ್ಟೆಯಲ್ಲಿ ಪ್ರತ್ಯಕ್ಷಗೊಂಡ ಕಾಡಾನೆ

Suddi Udaya

ಗುರುವಾಯನಕೆರೆ: ಅಗಲಿದ ದಿ| ನಾರಾಯಣ ಆಚಾರ್ಯ ರವರ ಮನೆಗೆ ಶಾಸಕ ಹರೀಶ್ ಪೂಂಜ ಹಾಗೂ ಎಂಎಲ್ಸಿ ಅಭ್ಯರ್ಥಿ ಕಿಶೋರ್ ಕುಮಾರ್ ಭೇಟಿ, ಸಾಂತ್ವಾನ

Suddi Udaya
error: Content is protected !!